ಹಿಂದೂಸ್ಥಾನ್-228 ವಿಮಾನ ಟ್ಯಾಕ್ಸಿ ಟ್ರಯಲ್ಸ್ ನಡೆಸಿದ ಹೆಚ್ಎಎಲ್
ಹಿಂದೂಸ್ಥಾನ್ ಏರೋನಾಟಿಕ್ ಲಿಮಿಟೆಡ್( ಹೆಚ್ಎಎಲ್) ತನ್ನ ಹಿಂದೂಸ್ಥಾನ್-228 (ವಿಟಿ-ಕೆಎನ್ ಆರ್) ನ ಕಡಿಮೆ ವೇಗದ ಟ್ಯಾಕ್ಸಿ ಟ್ರಯಲ್ಸ್ (ಎಲ್ಎಸ್ ಟಿಟಿ)ಯನ್ನು ಯಶಸ್ವಿಯಾಗಿ ನಡೆಸಿದೆ.

ಬೆಂಗಳೂರು: ಹಿಂದೂಸ್ಥಾನ್ ಏರೋನಾಟಿಕ್ ಲಿಮಿಟೆಡ್( ಹೆಚ್ಎಎಲ್) ತನ್ನ ಹಿಂದೂಸ್ಥಾನ್-228 (ವಿಟಿ-ಕೆಎನ್ ಆರ್) ನ ಕಡಿಮೆ ವೇಗದ ಟ್ಯಾಕ್ಸಿ ಟ್ರಯಲ್ಸ್ (ಎಲ್ಎಸ್ ಟಿಟಿ)ಯನ್ನು ಯಶಸ್ವಿಯಾಗಿ ನಡೆಸಿದೆ.
ಡಿಜಿಸಿಎ ಮಾದರಿಯ ಪ್ರಮಾಣಪತ್ರಕ್ಕಾಗಿ ಈ ಟ್ರಯಲ್ ನಡೆದಿದ್ದು, ಇದು ಸಂಸ್ಥೆಯ ಕಾನ್ಪುರ ಸೌಲಭ್ಯದ 75 ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಭಾಗ ಎಂದು ಹೆಚ್ಎಎಲ್ ನ ಪರಿಕರಗಳ ಸಂಕೀರ್ಣ ವಿಭಾಗದ ಸಿಇಒ ಸಜಲ್ ಪ್ರಕಾಶ್ ಹೇಳಿದ್ದಾರೆ.
ಪ್ರಾದೇಶಿಕ ವೈಮಾನಿಕ ಸಂಪರ್ಕವನ್ನು ಬಲಪಡಿಸುವುದಕ್ಕೆ ಹಾಗೂ ಮೊದಲ ಸ್ಥಿರ-ವಿಂಗ್ ಮೇಡ್ ಇನ್ ಇಂಡಿಯಾ ನಾಗರಿಕ ವಿಮಾನದ ಮಟ್ಟಿಗೆ ಮಹತ್ವದ ಮೈಲಿಗಲ್ಲಾಗಿದೆ ಎಂದು ಹೇಳಿದ್ದಾರೆ.
"ರಾಜ್ಯದ ಒಳಗೆ ಹಾಗೂ ಅಂತಾರಾಜ್ಯ ಸಂಚಾರಕ್ಕಾಗಿ ಸರ್ಕಾರಗಳು ಹಾಗೂ ಸಿವಿಲ್ ಆಪರೇಟರ್ ಗಳಿಗೆ ಈ ಟಾಕ್ಸಿ ವಿಮಾನ ಉಪಯೋಗವಾಗಲಿದೆ" ಎಂದು ಹೆಚ್ಎಎಲ್ ಹೇಳಿದೆ.
ಹಿಂದೂಸ್ಥಾನ್-228 19 ಸೀಟ್ ಇರುವ ಬಹು ಉಪಯೋಗಿ ವಿಮಾನವಾಗಿದ್ದು ವಿಐಪಿ ಸಾರಿಗೆ, ಪ್ರಯಾಣಿಕ ಸಾರಿಗೆ ಏರ್ ಆಂಬುಲೆನ್ಸ್, ವೈಮಾನಿಕ ಸಮೀಕ್ಷೆ, ಮೋಡ ಬಿತ್ತನೆ ಸೇರಿದಂತೆ ಹಲವು ರೀತಿಯ ಚಟುವಟಿಕೆಗಳಿಗೆ ನೆರವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


