ದೇಶ

ಸುಮಾರು ಶೇ.100 ರಷ್ಟು ಅರ್ಹರಿಗೆ ಕೋವಿಡ್ ಲಸಿಕೆ ಹಾಕಿದ ದೇಶದ ಮೊದಲ ಜಿಲ್ಲೆ ಕೇರಳದ ವಯನಾಡ್

ಕೇರಳದ ವಯನಾಡ್ ತನ್ನ ಉದ್ದೇಶಿತ ಅರ್ಹರಿಗೆ ಸುಮಾರು ಶೇ. 100 ರಷ್ಟು ಕೋವಿಡ್ ಲಸಿಕೆ ಹಾಕಿದ ದೇಶದ ಮೊದಲ ಜಿಲ್ಲೆ ಎಂಬ ಗೌರವಕ್ಕೆ ಪಾತ್ರವಾಗಿದೆ.

ಸುಮಾರು ಶೇ.100 ರಷ್ಟು ಅರ್ಹರಿಗೆ ಕೋವಿಡ್ ಲಸಿಕೆ ಹಾಕಿದ ದೇಶದ ಮೊದಲ ಜಿಲ್ಲೆ ಕೇರಳದ ವಯನಾಡ್
ಸಾಂದರ್ಭಿಕ ಚಿತ್ರ
Published On :

ಕಲ್ಪೆಟ್ಟಾ: ಕೇರಳದ ವಯನಾಡ್ ತನ್ನ ಉದ್ದೇಶಿತ ಅರ್ಹರಿಗೆ ಸುಮಾರು ಶೇ. 100 ರಷ್ಟು ಕೋವಿಡ್ ಲಸಿಕೆ ಹಾಕಿದ ದೇಶದ ಮೊದಲ ಜಿಲ್ಲೆ ಎಂಬ ಗೌರವಕ್ಕೆ ಪಾತ್ರವಾಗಿದೆ.

ಜಿಲ್ಲಾಡಳಿತದ ಪತ್ರಿಕಾ ಪ್ರಕಟಣೆಯ ಪ್ರಕಾರ, ವಯನಾಡಿನಲ್ಲಿ ಒಟ್ಟು 6,51,967 ಜನರು ಲಸಿಕೆ ಪಡೆಯಲು ಅರ್ಹರಾಗಿದ್ದು, ಅವರಲ್ಲಿ 6,15,729 ಮಂದಿಗೆ ಭಾನುವಾರ ರಾತ್ರಿ 7 ಗಂಟೆಯವರೆಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. 

ಇನ್ನೂ 36,238 ಜನರಿಗೆ ಲಸಿಕೆ ಹಾಕಬೇಕಿದೆ. ಅವರಲ್ಲಿ, ಕಳೆದ ಮೂರು ತಿಂಗಳಲ್ಲಿ 24,529 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ ಮತ್ತು ಈಗ ಅವರು  ಲಸಿಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಮತ್ತು 1,243 ಜನರು ಲಸಿಕೆ ಹಾಕಿಸಿಕೊಳ್ಳಲು ಸಿದ್ಧರಿಲ್ಲ. ಉಳಿದ ಜನರು ಹೋಮ್ ಕ್ವಾರಂಟೈನ್ ನಲ್ಲಿದ್ದು, ಈಗ ಲಸಿಕೆ ತೆಗೆದುಕೊಳ್ಳಲು ಸಾಧ್ಯವಾಗದ ಈ ವರ್ಗದ ಜನರನ್ನು ಹೊರತುಪಡಿಸಿ, ಸುಮಾರು 100% ರಷ್ಟು ಅರ್ಹರು ಲಸಿಕೆ ಪಡೆದಿದ್ದಾರೆ. 

ಈ ಗುರಿ ಸಾಧಿಸುವುದು ಕಠಿಣ ಕೆಲಸವಾಗಿತ್ತು ಮತ್ತು ತಂಡದ ಶ್ರಮ ಈ ಯಶಸ್ಸಿಗೆ ಕಾರಣವೆಂದು ಜಿಲ್ಲಾಧಿಕಾರಿ ಅದೀಲಾ ಅಬ್ದುಲ್ಲಾ ಅವರು ಹೇಳಿದ್ದಾರೆ.

"ಜನವರಿ 16 ರಂದು ಜಿಲ್ಲೆಯಲ್ಲಿ ಲಸಿಕೆ ಹಾಕುವ ಪ್ರಕ್ರಿಯೆ ಪ್ರಾರಂಭವಾಯಿತು ಮತ್ತು ಜಿಲ್ಲೆಯ ಅರ್ಹರಿಗೆ ಸಂಪೂರ್ಣವಾಗಿ ಲಸಿಕೆ ಹಾಕಿದ ದೇಶದ ಮೊದಲ ಜಿಲ್ಲೆಯಾಗಬೇಕು ಎಂಬ ಗುರಿ ಸಾಧಿಸಲು ಜಿಲ್ಲಾಡಳಿತ ಫೆಬ್ರವರಿಯಲ್ಲಿ ಸಿದ್ಧತೆಗಳನ್ನು ಆರಂಭಿಸಿತು. ಅಲ್ಲಿಂದ ನಾವು ಎಂಟು ಇಲಾಖೆಗಳಾದ ಸ್ಥಳೀಯ ಸ್ವಯಂ ಆಡಳಿತ, ಕಂದಾಯ, ಆರೋಗ್ಯ, ವಿಪತ್ತು ನಿರ್ವಹಣೆ, ಸಾರಿಗೆ, ಪೊಲೀಸ್, ಕುಡುಂಬಶ್ರೀ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿ ಇಲಾಖೆಗಳ ಸಹಯೋಗ, ಶಾಸಕರು, ಸಂಸದರು ಮತ್ತು ಪ್ರವಾಸೋದ್ಯಮ ಸಚಿವ ಪಿಎ ಮೊಹಮದ್ ರಿಯಾಸ್ ಅವರಿಂದ ಅಪಾರ ಬೆಂಬಲವನ್ನು ಪಡೆದುಕೊಂಡು ಈ ಗುರಿ ಸಾಧಿಸಿದ್ದೇವೆ ಎಂದು ಅಬ್ದುಲ್ಲಾ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.