77 ವರ್ಷದ ಅರುಣಗಿರಿನಾಥ ಜ್ಞಾನಸಂಬಂತ ದೇಶಿಕ ಪರಮಾಚಾರ್ಯ ಸ್ವಾಮೀಜಿ ಇನ್ನಿಲ್ಲ
ಮಧುರೈ ಆಧೀನಂನ 77 ವರ್ಷದ ಧರ್ಮಗುರು ಅರುಣಗಿರಿನಾಥ ಜ್ಞಾನಸಂಬಂತ ದೇಶಿಕ ಪರಮಾಚಾರ್ಯ ಸ್ವಾಮಿಗಳು ಶುಕ್ರವಾರ ರಾತ್ರಿ 9.15ಕ್ಕೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಮಧುರೈ: ಮಧುರೈ ಆಧೀನಂನ 77 ವರ್ಷದ ಧರ್ಮಗುರು ಅರುಣಗಿರಿನಾಥ ಜ್ಞಾನಸಂಬಂತ ದೇಶಿಕ ಪರಮಾಚಾರ್ಯ ಸ್ವಾಮಿಗಳು ಶುಕ್ರವಾರ ರಾತ್ರಿ 9.15ಕ್ಕೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಆಗಸ್ಟ್ 8ರಂದು ಉಸಿರಾಟದ ತೊಂದರೆಯಿಂದಾಗಿ ಅರುಣಗಿರಿನಾಥ್ ಸ್ವಾಮೀಜಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿತ್ತು. ದೀರ್ಘಕಾಲದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಮಧುರೈ ಅಧೀನಂ, ರಾಜ್ಯದ ಅತ್ಯಂತ ಹಳೆಯ ಶೈವದ ಅಧೀನಂಗಳಲ್ಲಿ ಒಂದೆಂದು(ಹಿಂದೂ ಮಠ) ಪರಿಗಣಿಸಲಾಗಿದೆ. ಇದನ್ನು ಸಹಸ್ರಮಾನಗಳಿಗಿಂತಲೂ ಹಿಂದೆ ಸ್ಥಾಪಿಸಲಾಯಿತು. ನಾಯನ್ಮಾರ್‌ಗಳಲ್ಲಿ ಒಬ್ಬರಾದ(ಶಿವನ ಶಿಷ್ಯರಾದ) ತಿರುಜ್ಞಾನ ಸಂಬಂಧರಿಂದ ಪುನಶ್ಚೇತನಗೊಂಡಿತ್ತು ಎಂದು ಹೇಳಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


