ದೇಶ

ಮಧ್ಯಪ್ರದೇಶ: ಪ್ರವಾಹ ಪೀಡಿತ ಪ್ರದೇಶದಲ್ಲಿ ಕೇಂದ್ರ ಕೃಷಿ ಸಚಿವ ತೋಮರ್‌ಗೆ ಪ್ರತಿಭಟನೆ ಬಿಸಿ

ಕೇಂದ್ರ ಕೃಷಿ ಸಚಿವ, ಬಿಜೆಪಿ ಸಂಸದ ನರೇಂದ್ರ ಸಿಂಗ್ ತೋಮರ್ ಅವರು ಮಧ್ಯಪ್ರದೇಶದ ಶಿಯೋಪುರ್ ಪಟ್ಟಣದಲ್ಲಿ ಸ್ಥಳೀಯರಿಂದ ಭಾರೀ ಪ್ರತಿಭಟನೆಗಳನ್ನು ಎದುರಿಸಿದರು.

ಮಧ್ಯಪ್ರದೇಶ: ಪ್ರವಾಹ ಪೀಡಿತ ಪ್ರದೇಶದಲ್ಲಿ ಕೇಂದ್ರ ಕೃಷಿ ಸಚಿವ ತೋಮರ್‌ಗೆ ಪ್ರತಿಭಟನೆ ಬಿಸಿ
ನರೇಂದ್ರ ಸಿಂಗ್ ತೋಮರ್
Published On :

ಭೋಪಾಲ್: ಕೇಂದ್ರ ಕೃಷಿ ಸಚಿವ, ಬಿಜೆಪಿ ಸಂಸದ ನರೇಂದ್ರ ಸಿಂಗ್ ತೋಮರ್ ಅವರು ಮಧ್ಯಪ್ರದೇಶದ ಶಿಯೋಪುರ್ ಪಟ್ಟಣದಲ್ಲಿ ಸ್ಥಳೀಯರಿಂದ ಭಾರೀ ಪ್ರತಿಭಟನೆಗಳನ್ನು ಎದುರಿಸಿದರು.

ಅಮ್ರಾಲ್ ಮತ್ತು ಸೀಪ್ ನದಿಗಳಲ್ಲಿನ ಭಾರೀ ಪ್ರವಾಹ ಪರಿಸ್ಥಿತಿಯ ತಪ್ಪಾದ ನಿರ್ವಹಣೆಯಿಂದಾಗಿ ಶಿಯೋಪುರ್ ಪಟ್ಟಣ ಪ್ರವಾಹಕ್ಕೆ ತುತ್ತಾಗುವಂತೆ ಮಾಡಿತ್ತು. ಇದರಿಂದ ಕೋಪಗೊಂಡ ಸ್ಥಳೀಯರು ಕೇಂದ್ರ ಸಚಿವರು ಪ್ರಯಾಣಿಸುತ್ತಿದ್ದ ಕಾರನ್ನು ತಡೆಯಲು ಪ್ರಯತ್ನಿಸಿದರು. ಅಲ್ಲದೆ ಕಪ್ಪು ಬಾವುಟ ಪ್ರದರ್ಶಿಸಿ ಕಾರಿನ ಮೇಲೆ ಮಣ್ಣನ್ನು ಎಸೆದರು.

ಕೇಂದ್ರ ಸಚಿವರು ಆಗಮಿಸುತ್ತಿದ್ದಂತೆ ಉದ್ರಿಕ್ತ ಪ್ರತಿಭಟನಾಕಾರರು ಒಟ್ಟಾಗಿ ಚಪ್ಪಾಳೆ ತಟ್ಟಿದರು. ಆದರೆ ಇದು ಸಂಸದರನ್ನು ಸ್ವಾಗತಿಸಲು ಅಲ್ಲ ಬದಲಿಗೆ ಸ್ಥಳೀಯ ಆಡಳಿತದ ದುರಾಡಳಿತವನ್ನು ವಿರೋಧಿಸಲು.

ಪ್ರವಾಹದಿಂದಾಗಿ ಗಣೇಶ ಬಜಾರ್ ಪ್ರದೇಶದಲ್ಲಿನ(ಶಿಯೋಪುರ ಪಟ್ಟಣದ ಮುಖ್ಯ ಮಾರುಕಟ್ಟೆ) ವ್ಯಾಪಾರಿಗಳು ಮತ್ತು ಕುಟುಂಬಗಳು ಭಾರೀ ನಷ್ಟವನ್ನು ಅನುಭವಿಸಿದ್ದವು.

ಕೇಂದ್ರ ಸಚಿವರು ಶಿಯೋಪುರ್ ಪಟ್ಟಣದ ಮುಖ್ಯ ಮಾರುಕಟ್ಟೆಯ ಮೂಲಕ ಹಾದು ಹೋಗುತ್ತಿದ್ದಾಗ ಉದ್ರಿಕ್ತರು ಪ್ರತಿಭಟನೆ ನಡೆಸಿದರು. ಅಲ್ಲದೆ ಜನನಿಬಿಡ ಬೀದಿಗಳಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ತೋಮರ್ ಅವರನ್ನು ತಳ್ಳಲು ಪ್ರಯತ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.