ಸಂಸತ್ ಒಳಗೆ ಚರ್ಚೆ ಇಲ್ಲದೇ ಹೊಸ ತೆರಿಗೆ ವಿಧೇಯಕ: ಹೊರಗೆ ಬಿಜೆಪಿ ವಿರುದ್ಧ ಆರ್ ಎಸ್ಎಸ್ ಅಂಗಸಂಸ್ಥೆ ನಡುವೆ ವಾಗ್ವಾದ!
ಲೋಕಸಭೆಯಲ್ಲಿ ಆ.07 ರಂದು ಹೊಸ ತೆರಿಗೆ ವಿಧೇಯಕ (ತಿದ್ದುಪಡಿ) ಮಸೂದೆಯನ್ನು ಚರ್ಚೆ ಇಲ್ಲದೇ ಅಂಗೀಕರಿಸಲಾಗಿದೆ.

ನವದೆಹಲಿ: ಲೋಕಸಭೆಯಲ್ಲಿ ಆ.07 ರಂದು ಹೊಸ ತೆರಿಗೆ ವಿಧೇಯಕ (ತಿದ್ದುಪಡಿ) ಮಸೂದೆಯನ್ನು ಚರ್ಚೆ ಇಲ್ಲದೇ ಅಂಗೀಕರಿಸಲಾಗಿದೆ. ಆದರೆ ಸಂಸತ್ ನ ಹೊರಭಾಗದಲ್ಲಿ ಸ್ವದೆಶಿ ಜಾಗರಣ ಮಂಚ್ (ಎಸ್ ಜೆಎಂ) ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್) ನ ಅಂಗ ಸಂಸ್ಥೆ ಟಿಪ್ಪಣಿಯೊಂದನ್ನು ಪ್ರದರ್ಶಿಸಿದ್ದು ಬಿಜೆಪಿ ನಾಯಕ ವಿಜಯ್ ಚೌಥೈವಾಲೆ ಅವರನ್ನು ಚರ್ಚೆಗೆ ಆಹ್ವಾನಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೊಸ ಮಸೂದೆಯ ಯೋಗ್ಯತೆಗಳ ಬಗ್ಗೆ ಬಿಜೆಪಿ-ಸಂಘಪರಿವಾರದ ಅಂಗ ಸಂಸ್ಥೆಯ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಾಗ್ವಾದ ನಡೆದಿದೆ.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿತ್ತ ಸಚಿವರಾಗಿದ್ದಾಗ ಸಂಸತ್ ಗೆ ಪರಿಚಯಿಸಿದ್ದ ಮಸೂದೆಯಲ್ಲಿನ ವಿವಾದಾತ್ಮಕ ನಿಬಂಧನೆ ರೆಟ್ರೋ-ಟ್ಯಾಕ್ಸ್ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಂಸತ್ತಿನ ಕಠಿಣ ಪರಿಶೀಲನೆಯನ್ನು ತಪ್ಪಿಸಿಕೊಂಡು ಕೆಳಮನೆಗೆ (ಲೋಕಸಭೆಯಲ್ಲಿ) ಮಂಡನೆಯಾಗಿದೆ. ಈ ಮಸೂದೆಯ ವಿವಾದಾತ್ಮಕ ಅಂಶವನ್ನು ತೆಗೆದುಹಾಕುವಂತೆ ಸಂಘದ ಅಂಗಪರಿವಾರ ಆಗ್ರಹಿಸಿದೆ.
ಚರ್ಚೆಯೇ ಇಲ್ಲದೇ ಸಂಸತ್ ನಲ್ಲಿ ಹಲವು ಮಸೂದೆಗಳನ್ನು ಅಂಗೀಕರಿಸುತ್ತಿರುವುದಕ್ಕೆ ಆರ್ ಎಸ್ ಎಸ್ ನ ನಾಯಕರಲ್ಲಿ ಅಸಮಾಧಾನ ಉಂಟಾಗಿರುವುದನ್ನು ಎಸ್ ಜೆಎಂ ನ ಸಂಚಾಲಕ ಅಶ್ವನಿ ಮಹಾಜನ್ ಬಹಿರಂಗಪಡಿಸಿದ್ದಾರೆ.
ಮಹಾಜನ್ ಅವರನ್ನು ಪ್ರಶ್ನಿಸಿರುವ ವಿಜಯ್ ಚೌಥೈವಾಲೆ ಪ್ರಶ್ನಿಸಿದ್ದು, ನೀವು ಎಫ್ ಡಿಐ ಮೇಲೆ ಸಂಪೂರ್ಣ ನಿರ್ಬಂಧಕ್ಕೆ ಆಗ್ರಹಿಸುತ್ತಿದ್ದೀರಾ? ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಹಾಜನ್, ನೀತಿಯೊಂದರ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ಚರ್ಚಿಸುವುದು ಅಪರಾಧವೇ? ಎಂದು ಮರುಪ್ರಶ್ನೆ ಹಾಕಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚೌಥೈವಾಲೆ, ಅಪರಾಧವಲ್ಲದೇ ಇರುವುದು ಎಲ್ಲವೂ ರಾಷ್ಟ್ರೀಯ ಹಿತಾಸಕ್ತಿಯಲ್ಲಿರುವುದಿಲ್ಲ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
ಮಹಾಜನ್ ಈ ಬಳಿಕ ಚೌಥೈವಾಲೆ ಅವರನ್ನು ಚರ್ಚೆಗೆ ಆಹ್ವಾನಿಸಿದ್ದಾರೆ. ಆದರೆ ಈ ಬಗ್ಗೆ ಮಾಧ್ಯಮದವರು ಹೆಚ್ಚಿನ ಪ್ರಶ್ನೆ ಕೇಳಿದಾಗ ಹೆಚ್ಚು ಮಾಹಿತಿ ನೀಡಲು ನಿರಾಕರಿಸಿದ್ದಾರೆ. "ನಾನು ಏನನ್ನು ಹೇಳಬೇಕೋ ಅದನ್ನು ಟ್ವಿಟರ್ ನಲ್ಲಿ ಹೇಳಿದ್ದೇನೆ, ಎಫ್ ಡಿಐ ಬಗ್ಗೆ ತಮ್ಮ ನಿಲುವು ಸ್ಥಿರವಾಗಿದೆ" ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


