ಖೇಲ್ ರತ್ನ ಪ್ರಶಸ್ತಿ: ಕ್ರೀಡಾಂಗಣದ ಹೆಸರು ಬದಲಾಯಿಸಿ- ಕಾಂಗ್ರೆಸ್
ಕ್ರೀಡೆಯಲ್ಲಿ ಅತ್ಯತ್ತಮ ಸಾಧನೆ ಮಾಡಿದವರಿಗೆ ನೀಡಲಾಗುವ ರಾಜೀವ್‍ಗಾಂಧಿ ಖೇಲ್‍ರತ್ನ ಪ್ರಶಸ್ತಿಯ ಹೆಸರನ್ನು ಬದಲಾವಣೆ ಮಾಡಲಾಗಿದ್ದು, ಮೇಜರ್ ದ್ಯಾನ್‍ಚಂದ್ ಅವರ ಹೆಸರನ್ನು ಮರುನಾಮಕರಣ ಮಾಡಿದ ನಂತರ ಕ್ರೀಡಾಂಗಣಕ್ಕೆ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಅರುಣ್ ಜೇಟ್ಲಿ ಅವರ ಹೆಸರನ್ನು ಬದಲಾಯಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ.

ನವದೆಹಲಿ: ಕ್ರೀಡೆಯಲ್ಲಿ ಅತ್ಯತ್ತಮ ಸಾಧನೆ ಮಾಡಿದವರಿಗೆ ನೀಡಲಾಗುವ ರಾಜೀವ್‍ಗಾಂಧಿ ಖೇಲ್‍ರತ್ನ ಪ್ರಶಸ್ತಿಯ ಹೆಸರನ್ನು ಬದಲಾವಣೆ ಮಾಡಲಾಗಿದ್ದು, ಮೇಜರ್ ದ್ಯಾನ್‍ಚಂದ್ ಅವರ ಹೆಸರನ್ನು ಮರುನಾಮಕರಣ ಮಾಡಿದ ನಂತರ ಕ್ರೀಡಾಂಗಣಕ್ಕೆ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಅರುಣ್ ಜೇಟ್ಲಿ ಅವರ ಹೆಸರನ್ನು ಬದಲಾಯಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ, ಅತ್ಯಂತ ಪ್ರಸಿದ್ಧ ಕ್ರೀಡಾಪಟು ಮತ್ತು ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಹೆಸರನ್ನು ಮರು ನಾಮಕರಣ ಮಾಡಿರುವುದನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ ಎಂದರು. ನಂತರ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸುರ್ಜೇವಾಲಾ, ಈ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ರಾಜಕೀಯ ಉದ್ದೇಶವಿರುವುದಾಗಿ ಆರೋಪಿಸಿದರು.
ಮೇಜರ್ ಧ್ಯಾನ್ ಚಂದ್ ಅವರಂತಹ ಹೆಸರನ್ನು ರಾಜಕೀಯ ಉದ್ದೇಶಕ್ಕೆ ಪ್ರಧಾನಿ ಮೋದಿ ಎಳೆದು ತರುವುದಿಲ್ಲ ಎಂದು ಅಪಾರ ನಂಬಿಕೆಯಿದೆ. ರಾಜೀವ್ ಗಾಂಧಿ ಯಾವುದೇ ಪ್ರಶಸಿಗೆ ಹೆಸರಾಗಿಲ್ಲ, ಅವರು ತ್ಯಾಗ ಮತ್ತು ದೇಶಕ್ಕೆ ಬದ್ಧತೆ, ಆಲೋಚನೆಗಳಿಂದ ಮತ್ತು 21 ನೇ ಶತಮಾನದಲ್ಲಿ ಅವರು ಭಾರತವನ್ನು ಪರಿವರ್ತಿಸಿದ ರೀತಿಗಾಗಿ ಹೆಸರಾಗಿದ್ದಾರೆ ಎಂದು ಹೇಳಿದರು.
ಮಿಲ್ಕಾ ಸಿಂಗ್, ಸುನೀಲ್ ಗವಾಸ್ಕರ್, ಸಚಿನ್ ತೆಂಡೊಲ್ಕರ್, ಕಪಿಲ್ ದೇವ್, ಪಿ. ಟಿ ಉಷಾ, ಮೇರಿ ಕೋಮ್, ಅಭಿನವ್ ಬಿಂದ್ರಾ ಮತ್ತಿತರ ಅನೇಕ ದಿಗ್ಗಜ ಆಟಗಾರರು ಇರುವಾಗ ಇದೀಗ ಮೋದಿ ಅವರು ನರೇಂದ್ರ ಮೋದಿ ಸ್ಟೇಡಿಯಂ ಮತ್ತು ಅರುಣ್ ಜೇಟ್ಲಿ ಕ್ರೀಡಾಂಗಣದ ಹೆಸರನ್ನು ಬದಲಾಯಿಸಿ ಘೋಷಿಸಲಿದ್ದಾರೆ ಎಂಬ ಅಪಾರ ನಂಬಿಕೆ ಹೊಂದಿರುವುದಾಗಿ ಸುರ್ಜೇವಾಲಾ ಹೇಳಿದರು.
ಒಲಂಪಿಕ್ ವರ್ಷದಲ್ಲಿ 230 ಕೋಟಿ ಕ್ರೀಡಾ ಬಜೆಟ್ ಕಡಿತ ಮಾಡಿದ ಪ್ರಧಾನಿ ಇದೀಗ ರೈತರು, ಅವರ ಪ್ರತಿಭಟನೆ, ಹಣದುಬ್ಬರದಿಂದ ಪಲಾಯನ ಮತ್ತು ಪೆಗಾಸಸ್ ನಂತಹ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


