ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ, ಗರ್ಭಿಣಿ ಮಾಡಿದ ವೃದ್ಧನ ಬಂಧನ!
ಅಜ್ಜ ಎಂದರೆ ಮೊಮ್ಮಕ್ಕಳಿಗೆ ವಾತ್ಸಲ್ಯ-ವಿಶ್ವಾಸ ಅತೀವವಾಗಿರುತ್ತವೆ. ಆದರೆ ಇಲ್ಲೊಬ್ಬ ವ್ಯಕ್ತಿ 15 ವರ್ಷದ ತನ್ನ ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಪರಿಣಾಮ ಆಕೆ ಗರ್ಭಿಣಿಯಾಗಿದ್ದಾಳೆ.

ಕಲ್ಲಕ್ಕುರಿಚಿ: ಅಜ್ಜ ಎಂದರೆ ಮೊಮ್ಮಕ್ಕಳಿಗೆ ವಾತ್ಸಲ್ಯ-ವಿಶ್ವಾಸವಿರುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ 15 ವರ್ಷದ ತನ್ನ ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಪರಿಣಾಮ ಆಕೆ ಗರ್ಭಿಣಿಯಾಗಿದ್ದಾಳೆ.
ಈ ಕೃತ್ಯ ಎಸಗಿದ 70 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನ ಕಲ್ಲಕ್ಕುರಿಚಿಯಲ್ಲಿ ನಡೆದಿದೆ.
ಈ ಹೀನ ಕೃತ್ಯ ಎಸಗಲು ವೃದ್ಧನಿಗೆ ಸಹಕರಿಸಿದ ಓರ್ವ ಮಹಿಳೆಯನ್ನೂ ಪೊಲೀಸರು ಬಂಧಿಸಿದ್ದು ಮತ್ತೋರ್ವ ಆರೋಪಿಯ ಬಂಧನಕ್ಕಾಗಿ ಶೋಧಕಾರ್ಯಾಚರಣೆ ಮುಂದುವರೆಸಿದ್ದಾರೆ. ಮೂವರ ವಿರುದ್ಧವೂ ಪೋಸ್ಕೋ (POCSO) ಕಾಯ್ದೆಯಡಿ ಬಂಧಿಸಲಾಗಿದೆ.
10 ವರ್ಷಗಳ ಹಿಂದೆ ತಾಯಿ ಮೃತಪಟ್ಟು ತಂದೆ ಬಿಟ್ಟು ಹೋದ ನಂತರ ನೀಲಾ(15) ತನ್ನ ಸಹೋದರ ಹಾಗೂ ಅಜ್ಜನ ಜೊತೆ ತಿರುಕೊಯಿಲೂರ್ ನ ಸೆಲ್ಲಂಗ್ ಕುಪ್ಪಂ ನಲ್ಲಿ ವಾಸವಾಗಿದ್ದರು. 15 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿ ಮಗು ಸಾವನ್ನಪ್ಪಿದ್ದರ ಬಗ್ಗೆ ಗ್ರಾಮ ಆಡಳಿತಾಧಿಕಾರಿ ವಿಮಲ್ ಗೆ ಮಾಹಿತಿ ತಲುಪಿತ್ತು. ಮಗುವಿನ ಶವವನ್ನು ಬಾಲಕಿಯ ಅಜ್ಜ ಹಾಗೂ ಸಂಬಂಧಿ ನದಿಗೆ ಎಸೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.
ವಿಎಒ ಈ ಸಂಬಂಧ ತಿರುಕೊಯಿಲೂರ್ ನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 3 ವರ್ಷಗಳಿಂದ ಬಾಲಕಿಯ ಮೇಲೆ ಈ ವೃದ್ಧ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಈ ಬಗ್ಗೆ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕುತ್ತಿದ್ದರು ಎಂದು ತಿಳಿದುಬಂದಿದೆ.
ಈ ಬಾಲಕಿ ಗರ್ಭಿಣಿಯಾದಾಗ ಲಾಕ್ ಡೌನ್ ಇದ್ದ ಪರಿಣಾಮ ಯಾರೂ ಇದನ್ನು ಗಮನಿಸಿರಲಿಲ್ಲ. ಜು.30 ರಂದು ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸಂಬಂಧಿಕರಾಗಿದ್ದ ಮಹಿಳೆಯೊಬ್ಬರು ಬಾಲಕಿಯನ್ನು ನರ್ಸ್ ಬಳಿ ಕರೆದೊಯ್ದಿದ್ದಾರೆ. ನವಜಾತ ಶಿಶು ಸ್ವಾಭಾವಿಕವಾಗಿ ಸಾವನ್ನಪ್ಪಿದೆಯೇ ಅಥವಾ ಹತ್ಯೆ ಮಾಡಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಗುವಿಗೆ ಜನ್ಮ ನೀಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


