ರಾಜ್ ಕುಂದ್ರಾ ಪ್ರಕರಣದ ಬೆನ್ನಲ್ಲೇ ಬಂಗಾಳದಲ್ಲಿ ಮತ್ತೊಂದು ಅಶ್ಲೀಲ ಚಿತ್ರ ಪ್ರಕರಣ; ಬಂಗಾಳಿ ನಟಿ ನಂದಿತಾ ದತ್ತಾ ಬಂಧನ
ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ ಪ್ರಕರಣ ಹಸಿರಾಗಿರುವಂತೆಯೇ ಅತ್ತ ಪಶ್ಚಿಮ ಬಂಗಾಳಲ್ಲೂ ಇಂತಹುದೇ ಪ್ರಕರಣವೊಂದು ಬಯಲಾಗಿದ್ದು, ಬಂಗಾಳಿ ನಟಿ ನಂದಿತಾ ದತ್ತಾ ಮತ್ತು ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

ಕೋಲ್ಕತ್ತಾ: ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ ಪ್ರಕರಣ ಹಸಿರಾಗಿರುವಂತೆಯೇ ಅತ್ತ ಪಶ್ಚಿಮ ಬಂಗಾಳಲ್ಲೂ ಇಂತಹುದೇ ಪ್ರಕರಣವೊಂದು ಬಯಲಾಗಿದ್ದು, ಬಂಗಾಳಿ ನಟಿ ನಂದಿತಾ ದತ್ತಾ ಮತ್ತು ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ ನೀಲಿ ಚಿತ್ರ ನಿರ್ಮಾಣ ಆರೋಪದ ಮೇಲೆ ಬಂಗಾಳಿ ನಟಿ, ರೂಪದರ್ಶಿ ನಂದಿತಾ ದತ್ತ ಹಾಗೂ ಅವರ ಮ್ಯಾನೇಜರ್ ಮೈನಾಕ್ ಘೋಷ್ ಮತ್ತು ಇತರರನ್ನು ಪೊಲೀಸರು ಬಂಧಿಸಿದ್ದಾರೆ. ನಂದಿತಾ ದತ್ತ ಅಶ್ಲೀಲ ಚಿತ್ರಗಳನ್ನು ನಿರ್ಮಾಣ ಮಾಡಿ ಅವುಗಳನ್ನು ಓಟಿಟಿ ಮೂಲಕ ಪ್ರಸಾರ ಮಾಡುತ್ತಿದ್ದರು ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಜುಲೈ 26ರಂದು ಇಬ್ಬರು ಯುವತಿಯರು ದೂರು ನೀಡಿದ್ದರು. ಈ ದೂರಿನ ಆಧಾರ ಮೇಲೆ ಶೋಧ ನಡೆಸಿದ್ದ ಪೊಲೀಸರು ನಿನ್ನೆ ನಂದಿತಾ ಹಾಗೂ ಅವರ ಮ್ಯಾನೇಜರ್ ಮೈನಾಕ್ ಘೋಷ್ ಮತ್ತು ನಿರ್ಮಾಪಕರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ರಾಜಧಾನಿ ಕೋಲ್ಕತ್ತಾದ ಹೊರ ವಲಯದ ಬಂಗಲೆಗಳನ್ನು ಬಾಡಿಗೆಗೆ ಪಡೆದು ಅಲ್ಲಿ ನೀಲಿ ಚಿತ್ರಗಳ ವಿಡಿಯೊಗಳನ್ನು ಚಿತ್ರೀಕರಿಸಲಾಗುತ್ತಿತ್ತು. ಇದಕ್ಕಾಗಿ ರೂಪದರ್ಶಿಗಳ ಹಾಗೂ ಸಿನಿಮಾಗಳ ಅವಕಾಶಕ್ಕಾಗಿ ಕಾಯುತ್ತಿರುವ ಹೊಸ ಪ್ರತಿಭಗೆಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಈ ಪ್ರಕರಣ ಸಂಬಂಧ ನಂದಿತಾ ಮತ್ತು ಅವರ ಮ್ಯಾನೇಜರ್ ಮೈನಾಕ್ ಘೋಷ್ ರನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ರೂಪದರ್ಶಿ ನಂದಿತಾ ದತ್ತ ಹತ್ತಾರು ಬಂಗಾಳಿ ಹಾಗೂ ಬೋಜ್‌ಪುರಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


