ದೇಶ

ರಿಲಯನ್ಸ್ ಇಂಡಸ್ಟ್ರಿಯಲ್ಲಿ ವರ್ಷಕ್ಕೆ 75 ಕೋಟಿ ರೂ. ಸಂಬಳ ಪಡೆಯುತ್ತಿದ್ದ ಪ್ರಕಾಶ್ ಶಾರಿಂದ ಸನ್ಯಾಸ ದೀಕ್ಷೆ!

ಮುಖೇಶ್ ಅಂಬಾನಿಯ ಬಲಗೈನಂತಿದ್ದ ರಿಲಯನ್ಸ್ ಇಂಡಸ್ಟ್ರಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಪ್ರಕಾಶ್ ಶಾ ಸನ್ಯಾಸತ್ವ ಸ್ವೀಕರಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರಿಯಲ್ಲಿ ವರ್ಷಕ್ಕೆ 75 ಕೋಟಿ ರೂ. ಸಂಬಳ ಪಡೆಯುತ್ತಿದ್ದ ಪ್ರಕಾಶ್ ಶಾರಿಂದ ಸನ್ಯಾಸ ದೀಕ್ಷೆ!
ಪ್ರಕಾಶ್ ಶಾ
Published On :

ಮುಂಬೈ: ಮುಖೇಶ್ ಅಂಬಾನಿಯ ಬಲಗೈನಂತಿದ್ದ ರಿಲಯನ್ಸ್ ಇಂಡಸ್ಟ್ರಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಪ್ರಕಾಶ್ ಶಾ ಸನ್ಯಾಸತ್ವ ಸ್ವೀಕರಿಸಿದ್ದಾರೆ. 

ಪ್ರಕಾಶ್ ಶಾ ಕಳೆದ ವರ್ಷ ರಿಲಯನ್ಸ್ ಇಂಡಸ್ಟ್ರಿಯ ಉಪಾಧ್ಯಕ್ಷ ಸ್ಥಾನದಿಂದ ನಿವೃತ್ತಿಯಾಗಿದ್ದರು. ಬಳಿಕ ಸನ್ಯಾಸಿ ಜೀವನ ನಡೆಸುವ ನಿರ್ಧಾರ ಮಾಡಿದ್ದು ಈ ಹಿಂದೆಯೇ ಸನ್ಯಾಸತ್ವದ ದೀಕ್ಷೆ ಪಡೆಯಬೇಕಿತ್ತು. ಆದರೆ ಕೊರೋನಾ ಹಿನ್ನೆಲೆಯಲ್ಲಿ ದೀಕ್ಷೆ ಕಾರ್ಯಕ್ರಮವನ್ನು ಮುಂದೂಡಿದ್ದರು. 

ಇದೀಗ ಪ್ರಕಾಶ್ ಶಾ ಜೈನ ಮುನಿಗಳ ಬಳಿ ದೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಇನ್ನು ಪ್ರಕಾಶ್ ಶಾ ಅವರು ಶ್ವೇತ ವಸ್ತ್ರ, ಬರಿಗಾಲಿನಲ್ಲಿ ಕೋಲು ಹಿಡಿದು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಪ್ರಕಾಶ್ ಶಾ ಅವರು 40 ವರ್ಷಗಳ ಹಿಂದೆ ಬಾಂಬೆ ಐಐಟಿಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದರು. ಇನ್ನು ರಿಲಯನ್ಸ್ ಕಂಪನಿಯ ಜಾಮ್ ನಗರದ ಪೆಟಕೊಕ್ ಗ್ಯಾಸ್ಫಿಕೇಷನ್ ಪ್ರೊಜಕ್ಟ್ ಆರಂಭಿಸುವಲ್ಲಿ ಶಾ ಮಹತ್ವದ ಪಾತ್ರವಿತ್ತು. 

ಪ್ರಕಾಶ್ ಶಾ ಸನ್ಯಾಸತ್ವ ದೀಕ್ಷೆ ಪಡೆದಿರುವ ಫೋಟೋವನ್ನು ಟ್ವೀಟ್ ಮಾಡಿರುವ ಧವಲ್ ಬಯ್ಯಾನಿ ಎಂಬುವರು ಪ್ರಕಾಶ್ ಅವರು ವರ್ಷಕ್ಕೆ 75 ಕೋಟಿ ರೂಪಾಯಿ ಸಂಬಳ ಪಡೆಯುತ್ತಿದ್ದರು ಎಂದು ಬರೆದುಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.