ದೆಹಲಿಗೆ ಆಕ್ಸಿಜನ್ ಹಂಚಿಕೆಯಾಗಿರುವುದನ್ನು ಕೆಲವು ರಾಜ್ಯಗಳು ಗೌರವಿಸುತ್ತಿಲ್ಲ: ಹೈಕೋರ್ಟ್
ಕೇಂದ್ರ ಸರ್ಕಾರ ದೆಹಲಿಗೆ ಹರ್ಯಾಣ ಸೇರಿದಂತೆ ವಿವಿಧಡೆಗಳ ಘಟಕಗಳಿಂದ ಮಾಡಿರುವ ಆಕ್ಸಿಜನ್ ಹಂಚಿಕೆಯನ್ನು ಕೆಲವು ರಾಜ್ಯಗಳು ಗೌರವಿಸುತ್ತಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದ್ದು ತಕ್ಷಣವೇ ಈ ಸಮಸ್ಯೆ ಬಗೆಹರಿಸಬೇಕೆಂದು ಹೇಳಿದೆ.

ನವದೆಹಲಿ: ಕೇಂದ್ರ ಸರ್ಕಾರ ದೆಹಲಿಗೆ ಹರ್ಯಾಣ ಸೇರಿದಂತೆ ವಿವಿಧಡೆಗಳ ಘಟಕಗಳಿಂದ ಮಾಡಿರುವ ಆಕ್ಸಿಜನ್ ಹಂಚಿಕೆಯನ್ನು ಕೆಲವು ರಾಜ್ಯಗಳು ಗೌರವಿಸುತ್ತಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದ್ದು ತಕ್ಷಣವೇ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಹೇಳಿದೆ.
ಹರ್ಯಾಣದ ಪಾಣಿಪತ್ ನಿಂದ ದೆಹಲಿಗೆ ಬರಬೇಕಾದ ಆಕ್ಸಿಜನ್ ನ್ನು ಪೊಲೀಸರು ತಡೆದಿದ್ದಾರೆ ಎಂದು ದೆಹಲಿ ಸರ್ಕಾರ, ನ್ಯಾ.ವಿಪಿನ್ ಸಂಘಿ ಹಾಗೂ ನ್ಯಾ.ರೇಖಾ ಪಳ್ಳಿ ಅವರಿದ್ದ ಪೀಠದೆದುರು ಹೇಳಿತ್ತು. ಇದಷ್ಟೇ ಅಲ್ಲದೇ ಉತ್ತರ ಪ್ರದೇಶದಿಂದ ತರಬೇಕಿದ್ದ ಕೆಲವು ಆಕ್ಸಿಜನ್ ಘಟಕಗಳನ್ನೂ ಇದೇ ಕಾರಣಕ್ಕೆ ತರಲಾಗಲಿಲ್ಲ ಎಂದು ಕೋರ್ಟ್ ಗೆ ದೆಹಲಿ ಸರ್ಕಾರ ತಿಳಿಸಿದೆ.
ದೆಹಲಿ ಸರ್ಕಾರದ ಆತಂಕಗಳ ಬಗ್ಗೆ ಮಾಹಿತಿ, ನಿರ್ದೇಶನಗಳನ್ನು ಪಡೆಯುವುದಾಗಿ ಸಾಲಿಸಿಟರ್ ಜನರ (ಎಸ್ ಜಿ) ತುಷಾರ್ ಮೆಹ್ತಾ ಕೋರ್ಟ್ ಗೆ ಇದೇ ವೇಳೆ ತಿಳಿಸಿದ್ದಾರೆ. ಎಸ್ ಜಿ ಹೇಳಿಕೆಯ ನಂತರ, ದೆಹಲಿ ಸರ್ಕಾರದ ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ.
ಇದೇ ವಿಷಯವಾಗಿ ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ ಮಾತನಾಡಿದ್ದು, "ದೆಹಲಿಗೆ ಲಭ್ಯವಾಗಬೇಕಿರುವ ಆಕ್ಸಿಜನ್ ಟ್ಯಾಂಕ್ ಗಳನ್ನು ಸಿಗದಂತೆ ಉತ್ತರ ಪ್ರದೇಶ ಹಾಗೂ ಹರ್ಯಾಣ ಪೊಲೀಸರು ತಡೆಹಿಡಿದಿದ್ದಾರೆ, ಅರೆಸೇನಾ ಪಡೆಗಳ ಸಹಾಯ ಪಡೆದಾದರೂ ಸರಿಯೇ ತಮಗೆ ಆಕ್ಸಿಜನ್ ಪೂರೈಕೆಯನ್ನು ಸುಗಮಗೊಳಿಸಬೇಕು" ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ಆಕ್ಸಿಜನ್ ಪೂರೈಕೆ ತಡೆಯುತ್ತಿರುವ ಜಂಗಲ್ ರಾಜ್ ಕೃತ್ಯಗಳು ಮೂರುದಿನಗಳಿಂದ ನಡೆಯುತ್ತಿದೆ. ಕೆಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪೂರೈಕೆ ಸಂಪೂರ್ಣವಾಗಿ ಕುಸಿದಿದೆ. ಈ ರೀತೀ ದೀರ್ಘಾವಧಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸಿಸೋಡಿಯಾ ಹೇಳಿದ್ದಾರೆ.
Related Article
ದೆಹಲಿ ಸರ್ಕಾರದಿಂದ ಆಕ್ಸಿಜನ್ ಟ್ಯಾಂಕರ್ ಲೂಟಿ: ಹರ್ಯಾಣ ಸಚಿವ ಅನಿಲ್ ವಿಜ್ ಆರೋಪ
ಆಸ್ಪತ್ರೆಯಿಂದ 1,710 ಡೋಸ್ ಗಳಷ್ಟು ಕೋವಿಡ್-19 ಲಸಿಕೆ ಕಳವು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


