ದೇಶ

ಹೈದರಾಬಾದ್: 2 ತಿಂಗಳ ಹಸುಗೂಸನ್ನು ಮಾರಾಟ ಮಾಡಿದ ವ್ಯಕ್ತಿ ಪೊಲೀಸ್ ವಶಕ್ಕೆ

2 ತಿಂಗಳ ಹಸುಗೂಸನ್ನು ಮಾರಾಟ ಮಾಡಿದ ವ್ಯಕ್ತಿಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್: 2 ತಿಂಗಳ ಹಸುಗೂಸನ್ನು ಮಾರಾಟ ಮಾಡಿದ ವ್ಯಕ್ತಿ ಪೊಲೀಸ್ ವಶಕ್ಕೆ
ಹೈದರಾಬಾದ್: 2 ತಿಂಗಳ ಹಸುಗೂಸನ್ನು ಮಾರಾಟ ಮಾಡಿದ ವ್ಯಕ್ತಿ ಪೊಲೀಸ್ ವಶಕ್ಕೆ
Published On :

ಹೈದರಾಬಾದ್: 2 ತಿಂಗಳ ಹಸುಗೂಸನ್ನು ಮಾರಾಟ ಮಾಡಿದ ವ್ಯಕ್ತಿಯನ್ನು ಹೈದರಾಬಾದ್  ಪೊಲೀಸರು ಬಂಧಿಸಿದ್ದಾರೆ. 

ರಾಜೇಂದ್ರನಗರದಲ್ಲಿ ಈ ಘಟನೆ ನಡೆದಿದ್ದು, ಮೂರು ದಿನಗಳ ಹಿಂದೆ ನಡೆದಿದೆ. ಮಗುವಿನ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಈ ಘಟನೆ ವರದಿಯಾಗಿದೆ. 

ಶಹನಾ ಬೇಗಮ್ ಹಾಗೂ ಸಯೀದ್ ಅಲಿ 2019 ರಲ್ಲಿ ವಿವಾಹವಾಗಿದ್ದರು ದಂಪತಿಗೆ ಸಯೀದ್ ಹಾನ್ ಅಲಿ ಎಂಬ ಮಗನಿದ್ದ. ಸಯೀದ್ ಅಲಿ ಮಗುವನ್ನು ಒಳ್ಳೆಯ ಬೆಲೆಗೆ ಮಾರಿ ತಮಗೆ ಬೇಕಾದ್ದನ್ನು ಖರೀದಿಸಬಹುದು ಎಂದು ಪತ್ನಿಗೆ ಹೇಳುತ್ತಿದ್ದ ಆದರೆ ಪತ್ನಿ ಇದಕ್ಕೆ ನಿರಾಕರಿಸಿದ್ದಳು. 

ಶಹಾನ ಗುರುವಾರದಂದು ನಮಾಜ್ ಗೆ ತಯಾರಾಗುತ್ತಿದ್ದ ವೇಳೆ ತಾನು ಮಗುವಿನೊಂದಿಗೆ ಹೊರಗಡೆಯೇ ಇರುವುದಾಗಿ ತಿಳಿಸಿದ್ದ, ಆಕೆ ನಮಾಜ್ ಮುಕ್ತಾಯಗೊಳಿಸಿ ವಾಪಸ್ಸಾಗುತ್ತಿದ್ದ ವೇಳೆ ಸಯೀದ್ ಹಾಗೂ ಮಗು ಇಬ್ಬರೂ ನಾಪತ್ತೆಯಾಗಿದ್ದರು. ರಾತ್ರಿ 9 ಗಂಟೆಗೆ ಮಗುವಿಲ್ಲದೇ ಸಯೀದ್ ಮನೆಗೆ ಬಂದಿದ್ದ. ಪ್ರಶ್ನೆ ಮಾಡಿದ್ದಕ್ಕೆ ಮಗುವನ್ನು ಮಾರಾಟ ಮಾಡಿದ್ದಾಗಿ ತಿಳಿಸಿದ್ದಾನೆ. 

ತನಗೆ ಮಗು ಬೇಕೆಂದು ಪಟ್ಟು ಹಿಡಿದ ಪರಿಣಾಮ ಮಗುವನ್ನು ವಾಪಸ್ ತರುವುದಾಗಿ ಮನೆಯಿಂದ ಹೊರಟ ಸಯೀದ್ ವಾಪಸ್ಸಾಗಲೇ ಇಲ್ಲ, ಫೋನ್ ಮಾಡಿದರೂ ಸ್ವಿಚ್ಡ್ ಆಫ್ ಆಗಿತ್ತು. ಮಗುವನ್ನು ಮಾರಾಟ ಮಾಡಿದ ಸಯೀದ್ ವಿರುದ್ಧ ಅಪಹರಣ ಮಾಡಿದ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.