ಮನ್ ಕಿ ಬಾತ್: ಡಿ.27 ರಂದು ದೇಶದ ಜನತೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ಪ್ರಧಾನಮಂತ್ರಿ ನರಂದ್ರ ಮೋದಿಯವರು ಡಿ.27 ರಂದು ಮಾಸಿಕ ರೇಡಿಯಾ ಕಾರ್ಯಕ್ರಮ ಮನ್ ಕಿ ಬಾತ್'ನಲ್ಲಿ ದೇಶದ ಜನತೆಯನ್ನುದ್ದೇಶಿ ಮಾತನಾಡಲಿದ್ದಾರೆ.

ನವದೆಹಲಿ: ಪ್ರಧಾನಮಂತ್ರಿ ನರಂದ್ರ ಮೋದಿಯವರು ಡಿ.27 ರಂದು ಮಾಸಿಕ ರೇಡಿಯಾ ಕಾರ್ಯಕ್ರಮ ಮನ್ ಕಿ ಬಾತ್'ನಲ್ಲಿ ದೇಶದ ಜನತೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಮೋದಿಯವರು. ಈ ವರ್ಷವನ್ನು ಹೇಗೆ ಕಳೆದಿರಿ? ಮುಂದಿನ 2021ನೇ ವರ್ಷವನ್ನು ಯಾವ ರೀತಿ ಮುನ್ನಡೆಸುವಿರಿ? ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ. ಈ ವರ್ಷದ ಕೊನೆಯ ಮನ್ ಕಿ ಬಾತ್ ಡಿಸೆಂಬರ್ 27 ರಂದು ನಡೆಯಲಿದೆ. ನಿಮ್ಮ ಸಂದೇಶವನ್ನು ನೀವು 1800-11-7800 ಗೆ ಕಳುಹಿಸಬಹುದು ಅಥವಾ ನಮೋ ಅಪ್ಲಿಕೇಶನ್ ಅಥವಾ ಮೈಗೋವಿ ಅಪ್ಲಿಕೇಶನ್‌ನಲ್ಲಿ ಕಳುಹಿಸಬಹುದು. ನಿಮ್ಮ ಸಲಹೆಗಳು ಮತ್ತು ಆಲೋಚನೆಗಳನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ನವೆಂಬರ್ 29 ರಂದು ನಡೆದ ಮನ್ ಕಿ ಬಾತ್ ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿಯವರು, ಭಾರತದ ಸಂಸ್ಕೃತಿ ಮತ್ತು ಧರ್ಮಗ್ರಂಥದ ಕುರಿತು ಮಾತನಾಡಿದ್ದರು. ಅಲ್ಲದೆ, ಕೊರೋನಾ ಲಾಕ್ಡೌನ್, ಲಸಿಕೆ ಕುರಿತಂತೆಯೂ ಮಾತನಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


