ನೂತನ ಕೃಷಿ ಮಸೂದೆಗಳಿಗೆ ವಿರೋಧ: ಎನ್ ಡಿಎ ಒಕ್ಕೂಟ ತೊರೆದ ಅಕಾಲಿದಳ
ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರದ ವಿವಾದಿತ ಕೃಷಿ ಮಸೂದೆ ವಿರೋಧಿಸಿದ್ದ ಶಿರೋಮಣಿ ಅಕಾಲಿದಳ ಬಿಜೆಪಿ ಮೈತ್ರಿ ತೊರೆದು ಎನ್ಡಿಎ ಒಕ್ಕೂಟದಿಂದ ಹೊರ ಬರಲು ನಿರ್ಧರಿಸಿದೆ.

ನವದೆಹಲಿ: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರದ ವಿವಾದಿತ ಕೃಷಿ ಮಸೂದೆ ವಿರೋಧಿಸಿದ್ದ ಶಿರೋಮಣಿ ಅಕಾಲಿದಳ ಬಿಜೆಪಿ ಮೈತ್ರಿ ತೊರೆದು ಎನ್ಡಿಎ ಒಕ್ಕೂಟದಿಂದ ಹೊರ ಬರಲು ನಿರ್ಧರಿಸಿದೆ.
ಬಿಜೆಪಿ ಸರ್ಕಾರದ ಮೂರು ವಿವಾದಿತ ಮಸೂದೆ ಗೆ ಆಕ್ಷೇಪಿಸಿ ಸೆ.17ರಂದು ಶಿರೋಮಣಿ ಅಕಾಲಿ ದಳದ ಸದಸ್ಯೆ ಹರ್ಸಿಮ್ರತ್ ಕೌರ್ ಬಾದಲ್ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು
ಎಂಎಸ್ಪಿಯಲ್ಲಿ ರೈತರ ಬೆಳೆಗಳ ಮಾರಾಟವನ್ನು ರಕ್ಷಿಸಲು ಶಾಸನಬದ್ಧ ಶಾಸಕಾಂಗ ಖಾತರಿಗಳನ್ನು ನೀಡಲು ಸಾಧ್ಯವಿಲ್ಲ ಎಂಬ ಕೇಂದ್ರದ ಹಠಮಾರಿ ಧೋರಣೆ ಮತ್ತು ಪಂಜಾಬಿ ಮತ್ತು ಸಿಖ್ ಸಮಸ್ಯೆಗಳ ಬಗ್ಗೆ ಅದರ ನಿರಂತರ ನಿರ್ಲಕ್ಷ್ಯದ ಕಾರಣ ನಾವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು ತೊರೆದಿದ್ದೇವೆ ಎಂದು ಎಸ್ಎಡಿ ಹೇಳಿದೆ.
ಕೃಷಿ ಮಸೂದೆಗಳನ್ನು ವಿರೋಧಿಸಿ ಶಿರೋಮಣಿ ಅಕಾಲಿ ದಳ ಎನ್‌ಡಿಎಯಿಂದ ಹೊರಬಂದಿದೆ ಎಂದು ಪಕ್ಷದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.
ಇದಕ್ಕೂ ಮುನ್ನ ಸುಖ್ಬೀರ್ ಸಿಂಗ್ ಬಾದಲ್ ಅವರು ಪಂಜಾಬ್ ಸರ್ಕಾರವು ತಕ್ಷಣವೇ ಇಡೀ ರಾಜ್ಯವನ್ನು ಕೃಷಿ ಮಾರುಕಟ್ಟೆಯೆಂದು ಘೋಷಿಸಲು ಸುಗ್ರೀವಾಜ್ಞೆಯನ್ನು ತರಬೇಕೆಂದು ಒತ್ತಾಯಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


