ದೇಶ

ನೆರೆಹೊರೆಯ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಮೋದಿ ಸರ್ಕಾರ ಹಾಳು ಮಾಡಿದೆ: ರಾಹುಲ್ ಗಾಂಧಿ

ಹಲವು ದಶಕಗಳಿಂದ ಕಾಂಗ್ರೆಸ್‌ ಪಕ್ಷ ಭಾರತದೊಂದಿಗೆ ಬೆಸೆದಿದ್ದ ನೆರೆ– ಹೊರೆಯ ರಾಷ್ಟ್ರಗಳ ಬಾಂಧವ್ಯ ಹಾಗೂ ಸಂಬಂಧಗಳ ಜಾಲವನ್ನು ಪ್ರಧಾನಿ ನರೇಂದ್ರ ಮೋದಿ ನಾಶಪಡಿಸಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ನೆರೆಹೊರೆಯ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಮೋದಿ ಸರ್ಕಾರ ಹಾಳು ಮಾಡಿದೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published On :

ನವದೆಹಲಿ: ಹಲವು ದಶಕಗಳಿಂದ ಕಾಂಗ್ರೆಸ್‌ ಪಕ್ಷ ಭಾರತದೊಂದಿಗೆ ಬೆಸೆದಿದ್ದ ನೆರೆ– ಹೊರೆಯ ರಾಷ್ಟ್ರಗಳ ಬಾಂಧವ್ಯ ಹಾಗೂ ಸಂಬಂಧಗಳ ಜಾಲವನ್ನು ಪ್ರಧಾನಿ ನರೇಂದ್ರ ಮೋದಿ ನಾಶಪಡಿಸಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

‘ಬಾಂಗ್ಲಾದೇಶದೊಂದಿಗಿನ ಭಾರತದ ಸಂಬಂಧ ದುರ್ಬಲಗೊಳ್ಳುತ್ತಿದ್ದು, ಚೀನಾದೊಂದಿಗಿನ ಒಪ್ಪಂದಗಳು ಬಲಗೊಳ್ಳುತ್ತಿವೆ’ ಎಂಬ ‘ದಿ ಎಕನಾಮಿಸ್ಟ್‌‘ ಪತ್ರಿಕೆಯ ಸುದ್ದಿಯ ತುಣಕನ್ನು ಟ್ಯಾಗ್ ಮಾಡಿ, ‘ನೆರೆ–ಹೊರೆಯಲ್ಲಿ ಸ್ನೇಹಿತರಿಲ್ಲದೇ ಜೀವಿಸುವುದು ತುಂಬಾ ಅಪಾಯ’  ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

‘ನೆರೆಯ ರಾಷ್ಟ್ರಗಳೊಂದಿಗಿನ ಭಾರತದ ಬಾಂಧವ್ಯ ತುಂಬಾ ದುರ್ಬಲವಾಗಿದೆ’ ಎಂದು ಮೋದಿ ಸರ್ಕಾರದ ವಿದೇಶಾಂಗ ನೀತಿಯನ್ನು ಕಾಂಗ್ರೆಸ್ ಟೀಕಿಸಿದೆ. ಸರ್ಕಾರ ಈ ಆರೋಪವನ್ನು ನಿರಾಕರಿಸಿದೆ ಮತ್ತು ಭಾರತದ ಸಂಬಂಧಗಳು ಹಲವಾರು ದೇಶಗಳೊಂದಿಗೆ ಗಾಢವಾಗಿವೆ ಮತ್ತು ಜಾಗತಿಕವಾಗಿ ಅದರ ಸ್ಥಾನವು ಬಲಗೊಂಡಿದೆ ಎಂದು ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.