ಅಮಾನತುಗೊಂಡಿರುವ ಸಂಸದರಿಗಾಗಿ ಶರದ್ ಪವಾರ್ ಒಂದು ದಿನದ ಉಪವಾಸ
ವಿವಾದಾತ್ಮಕ ಕೃಷಿ ಮಸೂದೆಗಳ ಮತದಾನದ ವೇಳೆ ಕೋಲಾಹಲ ಎಬ್ಬಿಸಿರುವುದಕ್ಕೆ ಅಮಾನತುಗೊಂಡಿರುವ ಎಂಟು ಸಂಸದರಿಗೆ ಬೆಂಬಲ ಸೂಚಿಸಿ ಮಹಾರಾಷ್ಟ್ರದ ಹಿರಿಯ ನಾಯಕ ಶರದ್ ಪವಾರ್ ಒಂದು ದಿನದ ಉಪವಾಸ ಕುಳಿತಿದ್ದಾರೆ.

ದೆಹಲಿ: ವಿವಾದಾತ್ಮಕ ಕೃಷಿ ಮಸೂದೆಗಳ ಮತದಾನದ ವೇಳೆ ಕೋಲಾಹಲ ಎಬ್ಬಿಸಿರುವುದಕ್ಕೆ ಅಮಾನತುಗೊಂಡಿರುವ ಎಂಟು ಸಂಸದರಿಗೆ ಬೆಂಬಲ ಸೂಚಿಸಿ ಮಹಾರಾಷ್ಟ್ರದ ಹಿರಿಯ ನಾಯಕ ಶರದ್ ಪವಾರ್ ಒಂದು ದಿನದ ಉಪವಾಸ ಕುಳಿತಿದ್ದಾರೆ.
ಸಂಸದರ ವಿರುದ್ಧ ವಿಧಿಸಿರುವ ಅಮಾನತು ಆದೇಶವನ್ನು ಹಿಂಪಡೆಯುವತನಕ ರಾಜ್ಯಸಭೆಯ ಕಲಾಪದಲ್ಲಿ ಭಾಗವಹಿಸದೇ ಇರಲು ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು ನಿರ್ಧರಿಸಿವೆ.
ಪ್ರತಿಭಟನ ನಿರತ ಸದಸ್ಯರಿಗೆ ಬೆಂಬಲವಾಗಿ ನಾನು ಇಂದು ಏನೂ ಸೇವಿಸಿಲ್ಲ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯ ಶರದ್ ಪವಾರ್ ತಿಳಿಸಿದ್ದಾರೆ.
ನಾನು ಈ ರೀತಿ ಮಸೂದೆ ಅಂಗೀಕರಿಸುವುದನ್ನು ಈ ತನಕ ನೋಡಿಲ್ಲ, ಸರ್ಕಾರಕ್ಕೆ ನಿಜವಾಗಿಯೂ ರೈತರ ಬಗ್ಗೆ ಆಸಕ್ತಿ ಇದ್ದರೇ ರಫ್ತು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


