ಡ್ರಗ್ ಮಾಫಿಯಾ ಕುರಿತು ಸಂಸದೆ ಜಯಾ ಬಚ್ಚನ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ: ಬಿಜೆಪಿ
ಸಂಸತ್ತಿನ ಮೇಲ್ಮನೆಯ ಕಲಾಪದ ವೇಳೆ ಸಮಾಜವಾದಿ ಪಕ್ಷದ ಸದಸ್ಯರಾದ ಜಯಾ ಬಚ್ಚನ್ ತಮ್ಮ ಬೇಜವಾಬ್ದಾರಿತನ ತೋರಿದ್ದಾರೆ ಎಂದು ತೆಲಂಗಾಣದ ಬಿಜೆಪಿ ಘಟಕ ಆರೋಪಿಸಿದೆ.

ಹೈದರಾಬಾದ್: ಸಂಸತ್ತಿನ ಮೇಲ್ಮನೆಯ ಕಲಾಪದ ವೇಳೆ ಸಮಾಜವಾದಿ ಪಕ್ಷದ ಸದಸ್ಯರಾದ ಜಯಾ ಬಚ್ಚನ್ ತಮ್ಮ ಬೇಜವಾಬ್ದಾರಿತನ ತೋರಿದ್ದಾರೆ ಎಂದು ತೆಲಂಗಾಣದ ಬಿಜೆಪಿ ಘಟಕ ಆರೋಪಿಸಿದೆ.
ಜಯಾ ಬಚ್ಚನ್ ಅವರು ಮಂಗಳವಾರ ಪಟ್ಟಬದ್ಧ ಹಿತಾಸಕ್ತಿ ಉಳ್ಳವರಂತೆ ಮಾತನಾಡಿದರು ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಕೆ.ಕೃಷ್ಣ ಸಾಗರ್ ರಾವ್ ಹೇಳಿದ್ದಾರೆ.
ಜಯಾ ಬಚ್ಚನ್ ಅವರು ತಮ್ಮ ಮಾತಿನಲ್ಲಿ ಡ್ರಗ್ ಮಾಫಿಯಾ, ಅದರಿಂದ ದೇಶದ ಯುವ ಜನಾಂಗದ ಮೇಲಾಗುತ್ತಿರುವ ಹಾನಿ, ಅವಲಂಬನೆ ಮತ್ತು ಪೆಡ್ಲರ್ ಕುರಿತು ಪ್ರಸ್ತಾಪಿಸಿಲ್ಲ ಎಂದರು.
ಸಂಸತ್ತಿನಲ್ಲಿ ಜಯಾ ಬಚ್ಚನ್ ಅವರು ಶೂನ್ಯ ವೇಳೆಯಲ್ಲಿ ದುಃಖಕರ ಸಂಗತಿಯೆಂದರೆ ಕೆಲವರು ತಿನ್ನುವ ತಟ್ಟೆಯಲ್ಲಿ ರಂಧ್ರಗಳನ್ನು ಮಾಡುತ್ತಾರೆ. ಕೆಲವೇ ಜನರ ಕಾರಣದಿಂದಾಗಿ ಇಂದು ಮನರಂಜನಾ ಉದ್ಯಮವು ಟೀಕೆಗೆ ಬಲಿಯಾಗುತ್ತಿದೆ. ಇದು ಸುಮಾರು 5 ಲಕ್ಷ ಜನರಿಗೆ ನೇರ ಉದ್ಯೋಗವನ್ನು ನೀಡುತ್ತಿದೆ ಎಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


