ಎಲ್ಎಸಿಯಲ್ಲಿ ಘರ್ಷಣೆ, ಆರ್ಥಿಕ ಕುಸಿತದ ಬಗ್ಗೆ ಮುಂಗಾರು ಅಧಿವೇಶನದಲ್ಲಿ ಚರ್ಚೆಗೆ ವಿಪಕ್ಷಗಳ ಆಗ್ರಹ
ಎಲ್ಎಸಿಯಲ್ಲಿ ಉಂಟಾದ ಘರ್ಷಣೆ, ಆರ್ಥಿಕ ಕುಸಿತದ ಬಗ್ಗೆ ಮುಂಗಾರು ಅಧಿವೇಶನದಲ್ಲಿ ಚರ್ಚೆ ನಡೆಯಬೇಕೆಂದು ವಿರೋಧಪಕ್ಷಗಳು ಆಗ್ರಹಿಸಿವೆ.

ನವದೆಹಲಿ: ಎಲ್ಎಸಿಯಲ್ಲಿ ಉಂಟಾದ ಘರ್ಷಣೆ, ಆರ್ಥಿಕ ಕುಸಿತದ ಬಗ್ಗೆ ಮುಂಗಾರು ಅಧಿವೇಶನದಲ್ಲಿ ಚರ್ಚೆ ನಡೆಯಬೇಕೆಂದು ವಿರೋಧಪಕ್ಷಗಳು ಆಗ್ರಹಿಸಿವೆ.
ಮುಂಗಾರು ಅಧಿವೇಶನದ ಅಜೆಂಡಾ ಚರ್ಚೆಗಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಡೆಸಿದೆ ಬ್ಯುಸಿನೆಸ್ ಅಡ್ವೈಸರಿ ಸಮಿತಿ (ಬಿಎಸಿ) ಸಭೆಯಲ್ಲಿ ಭಾಗವಹಿಸಿದ್ದ ವಿಪಕ್ಷ ನಾಯಕರು ಗಡಿಯಲ್ಲಿ ಭಾರತ-ಚೀನಾ ನಡುವಿನ ಘರ್ಷಣೆ, ನಿರುದ್ಯೋಗ, ಆರ್ಥಿಕ ಕುಸಿತದಂತಹ ವಿಷಯಗಳ ಬಗ್ಗೆ ಚರ್ಚೆಗೆ ಆಗ್ರಹಿಸಿದ್ದಾರೆ ಎಂದು ಡಿಎಂಕೆ ನಾಯಕ ಟಿಆರ್ ಬಾಲು ಹೇಳಿದ್ದಾರೆ.
ಒಬಿಸಿಯ ಕೆನೆಪದರದ ಪರಿಷ್ಕರನೆ ಹಾಗೂ ಜಿಎಸ್ ಟಿ ಸಂಗ್ರಹಣೆಯಲ್ಲಿ ರಾಜ್ಯದ ಪಾಲನ್ನು ನೀಡದೇ ಇರುವ ವಿಷಯಗಳ ಕುರಿತ ಚರ್ಚೆಗೂ ಡಿಎಂಕೆ ಆಗ್ರಹಿಸಿದೆ ಎಂದು ಬಾಲು ತಿಳಿಸಿದ್ದಾರೆ. ಸದನದ ಸುಗಮ ಕಲಾಪಕ್ಕೆ ಸಹಕರಿಸುವುದಾಗಿ ಎಲ್ಲಾ ಪಕ್ಷಗಳೂ ಭರವಸೆ ನೀಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


