ಗೋಲ್ಡನ್ ಟೆಂಪಲ್ ಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ ಅನುಮತಿ, ಉತ್ತಮ ನಿರ್ಧಾರ: ಕೇಂದ್ರ ಗೃಹ ಸಚಿವ ಅಮಿತ್ ಶಾ
ಹರ್ಮಂದೀರ್ ಸಾಹಿಬ್ ಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ (ಎಪ್.ಸಿ.ಆರ್.ಎ) ಅನುಮತಿ ನೀಡಿರುವುದು ಒಂದು ಮಹತ್ವದ ಮತ್ತು ಐತಿಹಾಸಿಕ ನಿರ್ಧಾರ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ನವದೆಹಲಿ: ಹರ್ಮಂದೀರ್ ಸಾಹಿಬ್ ಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ (ಎಪ್.ಸಿ.ಆರ್.ಎ) ಅನುಮತಿ ನೀಡಿರುವುದು ಒಂದು ಮಹತ್ವದ ಮತ್ತು ಐತಿಹಾಸಿಕ ನಿರ್ಧಾರ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
“ಶ್ರೀ ದರ್ಬಾರ್ ಸಾಹಿಬ್ ಅವರ ದೈವತ್ವವು ನಮಗೆ ಬಲ ನೀಡುತ್ತದೆ. ದಶಕಗಳಿಂದ, ವಿಶ್ವಾದ್ಯಂತ ಇರುವ ಸಂಘಟನೆಗೆ ಅಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಹರ್ಮಂದಿರ್ ಸಾಹಿಬ್ ಗೆ ಅವಕಾಶ ನೀಡುವ ಮೋದಿ ಸರ್ಕಾರದ ನಿರ್ಧಾರ ಜಾಗತಿಕವಾಗಿ ಸಂಗತ್ ಮತ್ತು ದರ್ಬಾರ್ ಸಾಹಿಬ್ ನಡುವಿನ ಸೇವಾ ಸಂಪರ್ಕವನ್ನು ಗಾಢವಾಗಿಸುತ್ತದೆ. ಇದೊಂದು ಧನ್ಯತೆಯ ಕ್ಷಣ” ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. “ ಇದು ಮತ್ತೊಮ್ಮೆ ನಮ್ಮ ಸಿಖ್ ಸೋದರಿ, ಸೋದರರ ಸೇವೆಯ ಅತ್ಯುತ್ತಮ ಮನೋಭಾವವನ್ನು ತೋರಿಸುತ್ತದೆ” ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಬುಧವಾರ ಪಂಜಾಬ್ ನ ಸಚ್ಖಂಡ್ ಹರ್ಮಂದಿರ್ ಸಾಹಿಬ್, ದರ್ಬಾರ್ ಸಾಹಿಬ್ ಗೆ ನೋಂದಣಿಗೆ ಅನುಮತಿ ನೀಡಿತು. ಈ ಸಂಘ ಮೇ 27 ರಂದು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಿತ್ತು. ನೋಂದಣಿಯು 5 ವರ್ಷಗಳವರೆಗೆ ಮಾನ್ಯತೆ ಪಡೆದಿರುತ್ತದೆ.ಪಂಜಾಬ್ ನ ಅಮೃತಸರದ ಸ್ವರ್ಣ ಮಂದಿರ ಎಂದು ಜನಪ್ರಿಯವಾಗಿರುವ ಸಚ್ಖಂಡ್ ಹರ್ಮಂದೀರ್ ಸಾಹಿಬ್, ದರ್ಬಾರ್ ಸಾಹಿಬ್ ಎಂಬ ಹೆಸರಿನ ಸಂಘವನ್ನು 1925 ರಲ್ಲಿ ಸಿಖ್ ಗುರುದ್ವಾರ ಕಾಯ್ದೆ 1925 ರ ಅಡಿಯಲ್ಲಿ ಸ್ಥಾಪಿಸಲಾಯಿತು. ಸಾರ್ವಜನಿಕರಿಗೆ, ಭಕ್ತರಿಗೆ ದಿನದ 24 ಗಂಟೆಯೂ ಉಚಿತ ಅನ್ನದಾನ, ಬಡವರು ಮತ್ತು ನಿರ್ಗತಿಕರಿಗೆ ಆರ್ಥಿಕ ಸಹಾಯ, ವಿದ್ಯಾರ್ಥಿಗಳು, ನಿರ್ಗತಿಕರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಹಣಕಾಸಿನ ನೆರವು ಮತ್ತು ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಸೇವೆಗಳನ್ನು ಒದಗಿಸುವುದು ಈ ಸಂಘದ ಉದ್ದೇಶವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


