ದೇಶ

ಅವನಿಗೆ ನನ್ನ ಮದ್ವೆ ಆಗಬೇಕಂತೆ! ಗ್ಯಾಂಗ್ ಸ್ಟರ್ ನಿಂದ ತನ್ನ ಕುಟುಂಬವನ್ನು ರಕ್ಷಿಸಿ: 13ರ ಬಾಲಕಿಯಿಂದ ಪ್ರಧಾನಿಗೆ ಪತ್ರ

13 ವರ್ಷದ ಬಾಲಕಿ ವಿದ್ಯಾರ್ಥಿನಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಗೆ ತನ್ನ ಕುಟುಂಬವನ್ನು ರಕ್ಷಿಸಲು ಸಹಾಯ ಕೋರಿ ಪತ್ರವೊಂದನ್ನು ಬರೆದಿದ್ದಾಳೆ.

ಅವನಿಗೆ ನನ್ನ ಮದ್ವೆ ಆಗಬೇಕಂತೆ! ಗ್ಯಾಂಗ್ ಸ್ಟರ್ ನಿಂದ ತನ್ನ ಕುಟುಂಬವನ್ನು ರಕ್ಷಿಸಿ: 13ರ ಬಾಲಕಿಯಿಂದ ಪ್ರಧಾನಿಗೆ ಪತ್ರ
ಪಿಎಂ ಮೋದಿ
Published On :

ತಿರುವನಂತಪುರಂ: 13 ವರ್ಷದ ಬಾಲಕಿ ವಿದ್ಯಾರ್ಥಿನಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಗೆ ತನ್ನ ಕುಟುಂಬವನ್ನು ರಕ್ಷಿಸಲು ಸಹಾಯ ಕೋರಿ ಪತ್ರವೊಂದನ್ನು ಬರೆದಿದ್ದಾಳೆ.

ಬಾಲಕಿಯು ತನ್ನ ತಂದೆಗೆ ಬೆದರಿಕೆ ಹಾಕುತ್ತಿರುವ ದರೋಡೆಕೋರ(ಗ್ಯಾಂಗ್ ಸ್ಟರ್) ಒಬ್ಬನ  ಆಡಿಯೊ ಕ್ಲಿಪ್ ಅನ್ನು ಸಹ ಪ್ರಕಟಿಸಿದ್ದಾಳೆ.

ಹೋಲಿ ಏಂಜಲ್ಸ್ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ, ಗೌರಿ ನಂದನಾ ಎಂಬ ಬಾಲಕಿಯೇ ಪ್ರಧಾನಿ ಮೋದಿಯ ಸಹಾಯ ಕೇಳಿ ಪತ್ರ ಬರೆದ ಬಾಲಕಿಯಾಗಿದ್ದಾಳೆ. 

ನಗರದಲ್ಲಿರುವ ಪೆಟ್ಟಾ ಪ್ರದೇಶದ ಶಂಕರ್  ನೇತೃತ್ವದ ಕ್ರಿಮಿನಲ್ ಗ್ಯಾಂಗ್‌ ನೊಂದಿಗೆ ನಾನು ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಉನ್ನತ ಪೋಲೀಸ್ ಅಧಿಕಾರಿಗಳು ತಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಲು ನಿರಾಕರಿಸುತ್ತಿರುವುದಾಗಿ ಬಾಲಕಿ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ. ಇದೀಗ  ಬಾಲಕಿಗೆ ಶಂಕರ್ ತನ್ನನ್ನು ಮದುವೆಯಾಗಬೇಕೆಂದು ಒತ್ತಾಯಿಸುತ್ತಿರುವುದಾಗಿ ಮೂಲಗಳು ಹೇಳಿದೆ. 

ಅಲ್ಲದೆ ಕಾರ್ಗಿಲ್ ಯುದ್ಧದಲ್ಲಿ ಸೇವೆ ಸಲ್ಲಿಸಿದ್ದ ತನ್ನ ತಂದೆಯನ್ನು ಈ ಹಿಂದೆ ಹಲವಾರು ನಕಲಿ ಪ್ರಕರಣಗಳಲ್ಲಿ ಬಂಧಿಸಲಾಗಿತ್ತು  ಈ ಹಿಂದೆ ಗ್ಯಾಂಗ್ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ತಮ್ಮ ಪ್ರಭಾವವನ್ನು ಬಳಸಿ ಭೂ ಮಾಫಿಯಾ ಜತೆಗೂ ಸಂಪರ್ಕ ಹೊಂದಿತ್ತು ಎಂದು ಬರೆದಿರುವುದಾಗಿ ಮೂಲಗಳು ಹೇಳಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.