ಆಂಧ್ರ ಪ್ರದೇಶ:ಅಪಘಾತಕ್ಕೀಡಾದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬೆಂಗಾವಲು ವಾಹನ, ಪ್ರಾಣಾಪಾಯದಿಂದ ಪಾರು
ಆಂಧ್ರ ಪ್ರದೇಶದ ಅಮರಾವತಿಯಿಂದ ಹೈದರಾಬಾದ್ ಗೆ ಮರಳುತ್ತಿದ್ದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಬೆಂಗಾವಲು ವಾಹನ ಯಡದ್ರಿ ಭುವನಗಿರಿ ಜಿಲ್ಲೆಯ ಚೌಟುಪ್ಪಲ್ ಹತ್ತಿರ ದಂಡುಮಲ್ಕಪುರಂ ಎಂಬಲ್ಲಿ ಅಪಘಾತಕ್ಕೀಡಾಗಿದೆ.

ಹೈದರಾಬಾದ್: ಆಂಧ್ರ ಪ್ರದೇಶದ ಅಮರಾವತಿಯಿಂದ ಹೈದರಾಬಾದ್ ಗೆ ಮರಳುತ್ತಿದ್ದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಬೆಂಗಾವಲು ವಾಹನ ಯಡದ್ರಿ ಭುವನಗಿರಿ ಜಿಲ್ಲೆಯ ಚೌಟುಪ್ಪಲ್ ಹತ್ತಿರ ದಂಡುಮಲ್ಕಪುರಂ ಎಂಬಲ್ಲಿ ಅಪಘಾತಕ್ಕೀಡಾಗಿದೆ.
ಕಾರು ರಸ್ತೆಯಲ್ಲಿ ಹೋಗುತ್ತಿದ್ದಾಗ ಹಸುವೊಂದು ಹೆದ್ದಾರಿಯಲ್ಲಿ ಅಡ್ಡ ಬಂದು ಹಠಾತ್ತನೆ ಬ್ರೇಕ್ ಹಾಕಿದ್ದರಿಂದ ಹಿಂದಿನಿಂದ ಬಂದ ಈ ಕಾರು ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.
ಚಂದ್ರಬಾಬು ನಾಯ್ಡು ಅವರು ಮತ್ತೊಂದು ಬುಲ್ಲೆಟ್ ಪ್ರೂಫ್ ಬೆಂಗಾವಲು ಕಾರಿನಲ್ಲಿ ಇದ್ದ ಕಾರಣ ಯಾವುದೇ ಗಾಯಗಳಾಗಿಲ್ಲ. ಬೆಂಗಾವಲು ವಾಹನದ ಒಳಗಿದ್ದ ಭದ್ರತಾ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಂತರ ಮತ್ತೊಂದು ಕಾರಿನಲ್ಲಿ ಎಲ್ಲರೂ ಕುಳಿತು ಹೈದರಾಬಾದ್ ಕಡೆ ಪ್ರಯಾಣಿಸಿದರು.
ಅಪಘಾತ ಆಗಿದ್ದೇಗೆ: ವಿಜಯವಾಡ-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಂದ್ರಬಾಬು ನಾಯ್ಡು ಅವರು ಕಾರಿನಲ್ಲಿ ಹೈದರಾಬಾದಿನ ತಮ್ಮ ನಿವಾಸಕ್ಕೆ ಹಿಂತಿರುಗುತ್ತಿದ್ದರು. ಅವರ ವಾಹನದ ಮುಂದೆ 3, ಹಿಂದೆ ಮೂರು ಬೆಂಗಾವಲು ವಾಹನಗಳಿದ್ದವು.
ಮೊದಲಿನ ಬೆಂಗಾವಲು ಕಾರು ಹಸು ಅಡ್ಡ ಬಂದಿದ್ದರಿಂದ ಹಠಾತ್ತನೆ ಬ್ರೇಕ್ ಹಾಕಿದರು, ಆಗ ಅದರ ಹಿಂದಿನ ವಾಹನ ಕೂಡ ಹಠಾತ್ ಬ್ರೇಕ್ ಹಾಕಬೇಕಾಯಿತು. ಮೂರನೇ ವಾಹನ ಬ್ರೇಕ್ ಹಾಕಿ ಅದರ ಮುಂಭಾಗ ಸಂಪೂರ್ಣ ಜಖಂ ಆಯಿತು, ಚಂದ್ರಬಾಬು ನಾಯ್ಡು ಅವರ ಕಾರು ಕೂಡ ಹಠಾತ್ ಬ್ರೇಕ್ ಹಾಕಿದರೂ ಅದಕ್ಕೆ ಏನೂ ಆಗಲಿಲ್ಲ. ಮೂವರು ಭದ್ರತಾ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


