ಸರ್ಕಾರಿ ಹುದ್ದೆ ನೇಮಕಾತಿಗೆ ನಿರ್ಬಂಧ ಅಥವಾ ನಿಷೇಧ ಹೇರಿಲ್ಲ:ಕೇಂದ್ರ ಸರ್ಕಾರ ಸ್ಪಷ್ಟನೆ
ಕೊರೋನಾ ವೈರಸ್ ಸಾಂಕ್ರಾಮಿಕದ ನಡುವೆ ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿರುವಾಗ ಸರ್ಕಾರಿ ಅಧಿಕಾರಿಗಳು ಖರ್ಚುವೆಚ್ಚಗಳಲ್ಲಿ ಕಡಿತ ಮಾಡಬೇಕೆಂದು ಖರ್ಚುವೆಚ್ಚಗಳ ಇಲಾಖೆ ಹೊರಡಿಸಿರುವ ಸುತ್ತೋಲೆ ಸರ್ಕಾರಿ ಉದ್ಯೋಗಗಳ ನೇಮಕಾತಿಯ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ನವದೆಹಲಿ: ಕೊರೋನಾ ವೈರಸ್ ಸಾಂಕ್ರಾಮಿಕದ ನಡುವೆ ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿರುವಾಗ ಸರ್ಕಾರಿ ಅಧಿಕಾರಿಗಳು ಖರ್ಚುವೆಚ್ಚಗಳಲ್ಲಿ ಕಡಿತ ಮಾಡಬೇಕೆಂದು ಖರ್ಚುವೆಚ್ಚಗಳ ಇಲಾಖೆ ಹೊರಡಿಸಿರುವ ಸುತ್ತೋಲೆ ಸರ್ಕಾರಿ ಉದ್ಯೋಗಗಳ ನೇಮಕಾತಿಯ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಮೊನ್ನೆ 4ರಂದು ಹೊರಡಿಸಿರುವ ಖರ್ಚುವೆಚ್ಚಗಳ ಇಲಾಖೆಯ ಸುತ್ತೋಲೆ ಸರ್ಕಾರದ ಇಲಾಖೆಗಳಲ್ಲಿ ಹುದ್ದೆಗಳ ನೇಮಕದ ಬಗ್ಗೆ ಆಂತರಿಕ ವಿಧಾನವನ್ನು ಅಳವಡಿಸಿಕೊಂಡಿದೆಯೇ ಹೊರತು ನೇಮಕಾತಿ ವಿಧಾನದ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಹಣಕಾಸು ಸಚಿವಾಲಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಟ್ವೀಟ್ ಗೆ ಪ್ರತಿಕ್ರಿಯಿಸಿದೆ.
ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಹುದ್ದೆಗಳ ನೇಮಕಾತಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಸ್ಟಾಫ್ ಸೆಲೆಕ್ಷನ್ ಕಮಿಷನ್, ಯುಪಿಎಸ್ ಸಿ, ರೈಲ್ವೆ ನೇಮಕಾತಿ ಮಂಡಳಿ ಮೊದಲಾದವುಗಳ ಮೂಲಕ ಹಿಂದಿನಂತೆಯೇ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ.
ಮೊನ್ನೆ ಸೆಪ್ಟೆಂಬರ್ 4ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ, ಖರ್ಚುವೆಚ್ಚಗಳ ಇಲಾಖೆ ಕೆಲವು ಅಭಿವೃದ್ಧಿರಹಿತ ಖರ್ಚುವೆಚ್ಚಗಳಿಗೆ ಕಡಿತ ಹಾಕಬೇಕೆಂದು ಹೇಳಿದ್ದು, ಪ್ರಮುಖ ಆದ್ಯತಾ ಯೋಜನೆಗಳಿಗೆ ಹಣ, ಸಂಪನ್ಮೂಲ ಅವಶ್ಯಕತೆಗಳನ್ನು ಕ್ರೋಢೀಕರಿಸಬೇಕಾಗಿದೆ ಎಂದು ಹೇಳಿದೆ.
ಈ ಸುತ್ತೋಲೆ ಬಗ್ಗೆ ರಾಹುಲ್ ಗಾಂಧಿ ಟೀಕಿಸಿದ್ದರು. ಮೋದಿ ಸರ್ಕಾರ ಖಾಸಗೀಕರಣ ಬಗ್ಗೆ ಹೆಚ್ಚು ಯೋಚಿಸುತ್ತಿದ್ದು ಸರ್ಕಾರದ ಇಲಾಖೆಗಳ ಬಗ್ಗೆ ಕಾಳಜಿ ಹೊಂದಿಲ್ಲ. ಸರ್ಕಾರಕ್ಕೆ ಕೋವಿಡ್ ಒಂದು ಕುಂಟು ನೆಪವಾಗಿದೆ,ಸರ್ಕಾರದ ಎಲ್ಲಾ ಶಾಶ್ವತ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲು ಸರ್ಕಾರ ನೋಡುತ್ತಿದೆ, ಯುವಕರ ಭವಿಷ್ಯವನ್ನು ಮೋದಿಯವರು ಕಸಿಯಲು ನೋಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.
ಭಾರತದ ಜಿಡಿಪಿ ಕಳೆದ ಏಪ್ರಿಲ್ ನಿಂದ ಜೂನ್ ವರೆಗಿನ ತ್ರೈಮಾಸಿಕದಲ್ಲಿ ಶೇಕಡಾ 23.9ರಷ್ಟಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


