ದೇಶ

ಬಾಲಿವುಡ್ ಡ್ರಗ್ಸ್‌ ಪ್ರಕರಣ: ನಟ ಸುಶಾಂತ್‌ ಮನೆಗೆಲಸದ ಸಹಾಯಕ ದೀಪೇಶ್‌ ಸಾವಂತ್‌‌ ಬಂಧನ 

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್​ಸಿಬಿ) ರಿಯಾ ಚಕ್ರವರ್ತಿಯ ಸೋದರ ಶೋಯಿಕ್​, ಬಾಲಿವುಡ್ ನಟ ಸುಶಾಂತ್​ ಸಿಂಗ್ ಮಾಜಿ ವ್ಯವಸ್ಥಾಪಕ ಸ್ಯಾಮ್ಯುಯೆಲ್​ ಮಿರಾಂಡಾ ಅವರ ನಂತರ ಶನಿವಾರ ಸುಶಾಂತ್‌ ಮನೆಗೆಲಸದ ಸಹಾಯಕ ದೀಪೇಶ್‌ ಸಾವಂತ್‌ ಅವರನ್ನು ಬಂಧಿಸಿದೆ.

ಬಾಲಿವುಡ್ ಡ್ರಗ್ಸ್‌ ಪ್ರಕರಣ: ನಟ ಸುಶಾಂತ್‌ ಮನೆಗೆಲಸದ ಸಹಾಯಕ ದೀಪೇಶ್‌ ಸಾವಂತ್‌‌ ಬಂಧನ 
ಸುಶಾಂತ್ ಸಿಂಗ್ ರಜಪೂತ್
Published On :

ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್​ಸಿಬಿ) ರಿಯಾ ಚಕ್ರವರ್ತಿಯ ಸೋದರ ಶೋಯಿಕ್​, ಬಾಲಿವುಡ್ ನಟ ಸುಶಾಂತ್​ ಸಿಂಗ್ ಮಾಜಿ ವ್ಯವಸ್ಥಾಪಕ ಸ್ಯಾಮ್ಯುಯೆಲ್​ ಮಿರಾಂಡಾ ಅವರ ನಂತರ ಶನಿವಾರ ಸುಶಾಂತ್‌ ಮನೆಗೆಲಸದ ಸಹಾಯಕ ದೀಪೇಶ್‌ ಸಾವಂತ್‌ ಅವರನ್ನು ಬಂಧಿಸಿದೆ.

ಹೇಳಿಕೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ಡ್ರಗ್ಸ್ ಸಂಗ್ರಹಿಸುವ ಮತ್ತು ಅದನ್ನು ನಿರ್ವಹಿಸಿದ ಆರೋಪದ ಎನ್‌ಸಿಬಿ ಸಾವಂತ್ ಅವರನ್ನು ಬಂಧಿಸಿದೆ.

ನಾಳೆ ಬೆಳಿಗ್ಗೆ 11 ಗಂಟೆಗೆ ಸಾವಂತ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಬಂಧಿತ ಆರೋಪಿಗಳ ವಿಚಾರಣೆ ನಡೆಯುತ್ತಿದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಉಪನಿರ್ದೇಶಕರು ಖಚಿತಪಡಿಸಿದ್ದಾರೆ.

ದೀಪೇಶ್​ ಸಾವಂತ್​, ಸುಶಾಂತ್​ ಸಿಂಗ್​ ವಾಸವಾಗಿದ್ದ ಡೂಪ್ಲೆಕ್ಸ್​​ನಲ್ಲಿ ಕೆಳಗಿನ ಫ್ಲೋರ್​​ನಲ್ಲಿ ವಾಸವಾಗಿದ್ದ. ಜೂ.14ರಂದು ಸುಶಾಂತ್​ ಮೃತದೇಹ ಪತ್ತೆಯಾಗಿದೆ. ಆ ಸಮಯದಲ್ಲಿ ಸಿದ್ದಾರ್ಥ್​ ಪಿಠಾಣಿ, ಕೇಶವ್​ ಬ್ಯಾಚ್ನರ್​ ಮತ್ತು ನೀರಜ್​ ಜತೆ ಈ ದೀಪೇಶ್​ ಸಾವಂತ್ ಕೂಡ ಇದ್ದ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ದೀಪೇಶ್​​ನನ್ನು ಶುಕ್ರವಾರ ಸಂಜೆಯಿಂದ ವಿಚಾರಣೆಗೆ ಒಳಪಡಿಸಲಾಗಿತ್ತು. ಮಹತ್ವದ ಮಾಹಿತಿಗಳು ಹೊರಬಿದ್ದ ಹಿನ್ನೆಲೆಯಲ್ಲಿ ಈತನನ್ನೂ ಬಂಧಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.