ಪೂರ್ವ ಲಡಾಖ್‌ನ ಪಾಂಗಾಂಗ್ ಸರೋವರದ ಬಳಿ ಚೀನಾ ಪ್ರಚೋದನಕಾರಿ ಕ್ರಮ ಮುಂದುವರೆಸಿದೆ: ಭಾರತ
ಪೂರ್ವ ಲಡಾಖ್ ನ ಪಾಂಗಾಂಗ್ ಸರೋವರದ ಬಳಿ ಚೀನಾ ಸೇನೆ ಪ್ರಚೋದನಕಾರಿ ಕ್ರಮ ಮುಂದುವರೆಸಿದೆ ಎಂದು ಭಾರತ ಆರೋಪಿಸಿದೆ.

ನವದೆಹಲಿ: ಪೂರ್ವ ಲಡಾಖ್ ನ ಪಾಂಗಾಂಗ್ ಸರೋವರದ ಬಳಿ ಚೀನಾ ಸೇನೆ ಪ್ರಚೋದನಕಾರಿ ಕ್ರಮ ಮುಂದುವರೆಸಿದೆ ಎಂದು ಭಾರತ ಆರೋಪಿಸಿದೆ.
ಪೂರ್ವ ಲಡಾಕ್‌ನ ಪಾಂಗಾಂಗ್ ಸರೋವರ ಪ್ರದೇಶದಲ್ಲಿ ಯಥಾಸ್ಥಿತಿಯನ್ನು ಬದಲಾಯಿಸಲು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ) ಪ್ರಯತ್ನಿಸುತ್ತಿದೆ. ಚೀನಾ ಮತ್ತು ಭಾರತ ಎರಡು ಮಿಲಿಟರಿ ಮಾತುಕತೆ ನಡೆಸುತ್ತಿದ್ದರೂ ಚೀನಾ ಮತ್ತೆ ಪ್ರಚೋದನಕಾರಿ ಕ್ರಮದಲ್ಲಿ ತೊಡಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಆರೋಪಿಸಿದೆ.
ಸಮಯೋಚಿತ ರಕ್ಷಣಾತ್ಮಕ ಕ್ರಮದಿಂದ ಯಥಾಸ್ಥಿತಿಯನ್ನು ಬದಲಿಸುವ ಚೀನಾದ ಏಕಪಕ್ಷೀಯ ಪ್ರಯತ್ನಗಳನ್ನು ಭಾರತ ತಡೆದಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ. ಇದೇ ವೇಳೆ ಇಂತಹ ಪ್ರಚೋದನಕಾರಿ ಕ್ರಮಗಳನ್ನು ಕೈಗೊಳ್ಳದಂತೆ ಚೀನಾವನ್ನು ಕೇಳಿಕೊಂಡಿದ್ದೇವೆ ಎಂದರು.
ಪಾಂಗಾಂಗ್ ಪ್ರದೇಶದಲ್ಲಿ ಯಥಾಸ್ಥಿತಿಯನ್ನು ಬದಲಾಯಿಸುವ ಪ್ರಯತ್ನದಲ್ಲಿ ಚೀನಾದ ಕಡೆಯವರು ಈ ಹಿಂದೆ ಒಪ್ಪಿದ ತಿಳುವಳಿಕೆಯನ್ನು ಉಲ್ಲಂಘಿಸಿದ್ದಾರೆ. ಆಗಸ್ಟ್ 29 ರ ತಡರಾತ್ರಿ ಮತ್ತು ಆಗಸ್ಟ್ 30 ರಂದು ಪ್ರಚೋದನಕಾರಿ ಮಿಲಿಟರಿ ತಂತ್ರಗಳಲ್ಲಿ ತೊಡಗಿದ್ದಾರೆ ಎಂದು ಅನುರಾಗ್ ಶ್ರೀವಾಸ್ತವ ಹೇಳಿದರು.
"ಇದಲ್ಲದೆ, ನಿನ್ನೆ ಆಗಸ್ಟ್ 31ರಂದು ಪರಿಸ್ಥಿತಿಯನ್ನು ಸಹಜಸ್ಥಿತಿಗೆ ತರಲು ಎರಡೂ ಕಡೆಯ ಕಮಾಂಡರ್ಗಳು ಚರ್ಚೆಯಲ್ಲಿದ್ದಾಗಲೂ, ಚೀನಾದ ಪಡೆಗಳು ಮತ್ತೆ ಪ್ರಚೋದನಕಾರಿ ಕ್ರಮದಲ್ಲಿ ತೊಡಗಿದ್ದವು ಎಂದು ಅನುರಾಗ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


