24 ಗಂಟೆಯಲ್ಲಿ 17 ಸೆಂ.ಮೀ ಮಳೆ!: ಮುತ್ತಿನ ನಗರಿ ಹೈದರಾಬಾದ್ ಮೇಲೆ ಮತ್ತೆ ಮುನಿಸಿಕೊಂಡ ವರುಣ
ಕೇವಲ ಮೂರು ದಿನಗಳ ಹಿಂದೆ ಸುರಿದ ಸತತ ಮಳೆಯಿಂದ ಭಾರೀ ಪ್ರವಾಹಕ್ಕೊಳಗಾಗಿ ಅಪಾರ ಆಸ್ತಿ-ಪಾಸ್ತಿ, ಪ್ರಾಣಹಾನಿ ಅನುಭವಿಸಿದ್ದ ಮುತ್ತಿನ ನಗರಿ ಹೈದರಾಬಾದ್ ಜನತೆ ನಿನ್ನೆ ಮತ್ತೆ ಭಯಾನಕ ಮಳೆಯನ್ನು ಕಾಣುವ ಪರಿಸ್ಥಿತಿಯುಂಟಾಯಿತು.

ಹೈದರಾಬಾದ್: ಕೇವಲ ಮೂರು ದಿನಗಳ ಹಿಂದೆ ಸುರಿದ ಸತತ ಮಳೆಯಿಂದ ಭಾರೀ ಪ್ರವಾಹಕ್ಕೊಳಗಾಗಿ ಅಪಾರ ಆಸ್ತಿ-ಪಾಸ್ತಿ, ಪ್ರಾಣಹಾನಿ ಅನುಭವಿಸಿದ್ದ ಮುತ್ತಿನ ನಗರಿ ಹೈದರಾಬಾದ್ ಜನತೆ ನಿನ್ನೆ ಮತ್ತೆ ಭಯಾನಕ ಮಳೆಯನ್ನು ಕಾಣುವ ಪರಿಸ್ಥಿತಿಯುಂಟಾಯಿತು.
ತೆಲಂಗಾಣ ರಾಜಧಾನಿ ಹೈದರಾಬಾದ್ ನ ಹಲವು ಪ್ರದೇಶಗಳಲ್ಲಿ 17 ಸೆಂಟಿ ಮೀಟರ್ ಗೂ ಹೆಚ್ಚಿಗೆ ಮಳೆಯಾಗಿದ್ದು ಹವಾಮಾನ ಪರಿಸ್ಥಿತಿ ಅಸಹಜವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ನಿನ್ನೆ ಹೈದರಾಬಾದ್ ಹೊರವಲಯ ಘಟ್ಕೇಸರ ಮತ್ತು ಸರೂರ್ ನಗರಗಳಲ್ಲಿ ಅತಿ ಹೆಚ್ಚು 18 ಸೆಂಟಿ ಮೀಟರ್ ಮಳೆಯಾಗಿದ್ದು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್(ಜಿಎಚ್ ಎಂಸಿ) ಪ್ರದೇಶಗಳಲ್ಲಿ 17 ಸೆಂಟಿ ಮೀಟರ್ ಮಳೆ ದಾಖಲಾಗಿದೆ.
ನಿನ್ನೆ ಸಾಯಂಕಾಲ 7 ಗಂಟೆ ಹೊತ್ತಿಗೆ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವ ಬಗ್ಗೆ 136 ದೂರುಗಳು, ಚರಂಡಿ ತುಂಬಿ ಹರಿದ ಬಗ್ಗೆ 427 ದೂರುಗಳು ಮತ್ತು ಕಟ್ಟಡ, ಗೋಡೆ ಕುಸಿದ 7 ದೂರುಗಳು ವರದಿಯಾಗಿವೆ. ವಿಪತ್ತು ನಿರ್ವಹಣಾ ಪಡೆಯ ಸಂಖ್ಯೆಗೆ ನಾಗರಿಕರು 040 29555500, ಅಥವಾ ಇತರ ನೆರವಿಗೆ 040 21111111ನ್ನು ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


