ಕೋವಿಡ್-19 ಪ್ರಸರಣದ ನಡುವೆಯೂ ಐಸಿಎಂಆರ್ ನಿಂದ ಬಂತು ಸಮಾಧಾನಕರ ಸುದ್ದಿ!
ದೇಶಾದ್ಯಂತ ಕೋವಿಡ್-19 ಪ್ರಸರಣ ಇನ್ನೂ ನಿಯಂತ್ರಣಕ್ಕೆ ಸಿಕ್ಕಿಲ್ಲ. ಪರಿಸ್ಥಿತಿ ಹೀಗಿರುವಾಗಲೂ ಸಮಾಧಾನಕರ ಅಂಶವೊಂದು ಐಸಿಎಂಆರ್ ನಿಂದ ಬಹಿರಂಗಗೊಂಡಿದೆ.

ನವದೆಹಲಿ: ದೇಶಾದ್ಯಂತ ಕೋವಿಡ್-19 ಪ್ರಸರಣ ಇನ್ನೂ ನಿಯಂತ್ರಣಕ್ಕೆ ಸಿಕ್ಕಿಲ್ಲ. ಪರಿಸ್ಥಿತಿ ಹೀಗಿರುವಾಗಲೂ ಸಮಾಧಾನಕರ ಅಂಶವೊಂದು ಐಸಿಎಂಆರ್ ನಿಂದ ಬಹಿರಂಗಗೊಂಡಿದೆ.
ಕೊರೋನಾದ ವೈರಾಣುವಿನ ಜಿನೋಮ್ ಅಂದರೆ ವಂಶವಾಹಿಗಳ ಗುಚ್ಛದ ಅಧ್ಯಯನದಲ್ಲಿ ಸಮಾಧಾನಕರ ಅಂಶ ಬಹಿರಂಗವಾಗಿದ್ದು, ಮಹತ್ವದ ರೂಪಾಂತರ ಹೊಂದಿಲ್ಲ ಎಂದು ತಿಳಿದುಬಂದಿದೆ.
ಜಾಗತಿಕ ಮಟ್ಟದಲ್ಲಿ ಕೊರೋನಾ ಹೊಸದಾಗಿ ಪತ್ತೆಯಾಗಿದ್ದಾಗ ಈ ವೈರಾಣು ನಿರಂತರ ರೂಪಾಂತರ ಹೊಂದುತ್ತಿದ್ದದ್ದು ವೈದ್ಯಕೀಯ ಹಾಗೂ ತಜ್ಞರ ವಲಯದಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ಆದರೆ ಇತ್ತೀಚೆಗೆ ಭಾರತದಾದ್ಯಂತ ನಡೆದಿರುವ ಅಧ್ಯಯನದ ಮೂಲಕ ಇಲ್ಲಿ ಪತ್ತೆಯಾಗಿರುವ ವೈರಾಣುವಿನ ಪ್ರಬೇಧಗಳು ರೂಪಾಂತರಗೊಂಡಿಲ್ಲ ಎಂದು ತಿಳಿದುಬಂದಿದೆ. ಪ್ರಬೇಧಗಳು ರೂಪಾಂತರಗೊಂಡಷ್ಟೂ ಲಸಿಕೆ ತಯಾರಿಕೆ ಪ್ರಕ್ರಿಯೆಯಲ್ಲಿ ಹಿನ್ನಡೆಯುಂಟಾಗುತ್ತದೆ ಎಂಬುದು ಆತಂಕಕ್ಕೆ ಕಾರಣವಾಗಿದ್ದ ಅಂಶವಾಗಿತ್ತು.
ಆದರೆ ಇತ್ತೀಚಿವ ಜಾಗತಿಕ ಅಧ್ಯಯನಗಳ ಪ್ರಕಾರ ಈಗ ಸಿದ್ಧವಾಗುತ್ತಿರುವ ಲಸಿಕೆಗಳ ಮೇಲೆ ಕೊರೋನಾ ವೈರಾಣು ರೂಪಾಂತರ ಯಾವುದೇ ಪರಿಣಾಮವನ್ನೂ ಬೀರುವುದಿಲ್ಲ ಎಂದು ಹೇಳಲಾಗಿದೆ. ಹೊಸ ಪ್ರಬೇಧಗಳು ಕಡಿಮೆ ಪರಿಣಾಮಕಾರಿಯಾಗಿದ್ದು, ಬೇಗ ಸಾಯುತ್ತವೆ, ಅತ್ಯಂತ ಶಕ್ತಿಯುತವಾದ ಕೊರೋನಾ ವೈರಸ್ ಬೇಗ ಹರಡುತ್ತವೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


