ಪಾಕಿಸ್ತಾನಕ್ಕೆ ರಾವಿ ನದಿ ನೀರು ಹರಿವು ಕಡಿಮೆ ಮಾಡಿ ಪಂಜಾಬ್, ಜಮ್ಮು-ಕಾಶ್ಮೀರಕ್ಕೆ ಹೆಚ್ಚಿಸುವ ನಿಯಮಗಳಿಗೆ ಕೇಂದ್ರ ಅಸ್ತು
ಪಾಕಿಸ್ತಾನಕ್ಕೆ ರಾವಿ ನದಿ ನೀರಿನ ಹರಿವನ್ನು ತೀವ್ರವಾಗಿ ಕಡಿಮೆ ಮಾಡುವ ನಿಯಮಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ನವದೆಹಲಿ: ಪಾಕಿಸ್ತಾನಕ್ಕೆ ರಾವಿ ನದಿ ನೀರಿನ ಹರಿವನ್ನು ತೀವ್ರವಾಗಿ ಕಡಿಮೆ ಮಾಡುವ ನಿಯಮಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಕೇಂದ್ರ ಹಸಿರು ತಜ್ಞರ ಸಮಿತಿ ಪಂಜಾಬ್ ನಲ್ಲಿ ಶಾಪುರ್ಕಂಡಿ ಅಣೆಕಟ್ಟು ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಪರಿಹಾರಾರ್ಥವಾಗಿ ಅರಣ್ಯ ಬೆಳೆಸುವ ನಿಯಮಗಳನ್ನು ಪಾಲನೆ ಮಾಡದೇ ಇರುವುದಕ್ಕೆ ನಿರ್ಧರಿಸಿದೆ.
ಅಧಿಕಾರಿಗಳ ಪ್ರಕಾರವಾಗಿ ಈ ನಡೆಯಿಂದ ಪಾಕಿಸ್ತಾನಕ್ಕೆ ಹರಿಯುವ ರಾವಿ ನದಿ ನೀರು ತೀವ್ರವಾಗಿ ಕಡಿಮೆಯಾಗಲಿದ್ದು, ಜಮ್ಮು-ಕಾಶ್ಮೀರ ಪಂಜಾಬ್ ಗಳಲ್ಲಿ ನೀರಾವರಿ ಉದ್ದೇಶಗಳಿಗೆ ಮಹತ್ವವಿರುವ ಜಲ ಸಂಪನ್ಮೂಲಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.
ಇದು ರಾಷ್ಟ್ರೀಯ ಯೋಜನೆಯಾಗಿದ್ದು, ಅದರ ಮಹತ್ವವನ್ನು ಪರಿಗಣಿಸಿ ಅರಣ್ಯ ಸಲಹಾ ಸಮಿತಿ 5 ಹೆಕ್ಟೇರ್ ಗಳಿಗಿಂತ ಕಡಿಮೆ ವ್ಯಾಪ್ತಿಯಲ್ಲಿ ಪರಿಹಾರಾರ್ಥವಾಗಿ ಅರಣ್ಯ ಬೆಳೆಸುವ ಪ್ರದೇಶಗಳನ್ನು ಗುರುತಿಸುವ ವಿಷಯದಲ್ಲಿ ರಾಜ್ಯಗಳ ವಾದವನ್ನು ಒಪ್ಪಿಕೊಳ್ಳಲು ತೀರ್ಮಾನಿಸಿದೆ ಎಂದು ಹೇಳಿದೆ.
5 ಹೆಕ್ಟೇರ್ ಗಳಿಗಿಂತ ಕಡಿಮೆ ಇರುವ ಅರಣ್ಯೇತರ ಪ್ರದೇಶವನ್ನು, ಪರಿಹಾರಾರ್ಥ ಅರಣ್ಯ ಪ್ರದೇಶವನ್ನಾಗಿ ಬೆಳೆಸಲು ನಿಯಮಗಳನ್ನು ಸಡಿಲಗೊಳಿಸಲಾಗುತ್ತದೆ ಎಂದು ಸಮಿತಿ ತಿಳಿಸಿದೆ.
1960 ರಲ್ಲಿ ನಡೆದ ಇಂಡಸ್ ವಾಟರ್ ಟ್ರೀಟಿಯ ಪ್ರಕಾರ ಪಶ್ಚಿಮದ ನದಿಗಳಾದ ಇಂಡಸ್, ಝೀಲಮ್, ಚೆನಾಬ್ ನದಿ ನೀರನ್ನು ಪಾಕಿಸ್ತಾನಕ್ಕೆ ಹರಿಸಲಾಗುತ್ತಿದೆ. ಪೂರ್ವದಲ್ಲಿರುವ ರಾವಿ, ಬಿಯಾಸ್, ಸಟ್ಲಜ್ ನದಿ ನೀರನ್ನು ಭಾರತ ಬಳಕೆ ಮಾಡಿಕೊಳ್ಳುತ್ತಿದೆ. ಆದರೆ ತನ್ನ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುವುದಕ್ಕೆ ಭಾರತಕ್ಕೆ ಆಗುತ್ತಿಲ್ಲ. ಭಾರತದ ಪಾಲಿನ ನೀರೂ ಸಹ ಪಾಕಿಸ್ತಾನಕ್ಕೆ ಹರಿಯುತ್ತಿದ್ದು, ಇದನ್ನು ನಿಲ್ಲಿಸಬೇಕೆಂಬ ಒತ್ತಾಯ ದೀರ್ಘಾವಧಿಯಿಂದ ಇತ್ತು.
2,700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಣೆಕಟ್ಟು ಯೋಜನೆಯಿಂದ 206 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದ್ದು, ಪಂಜಾಬ್ ನಲ್ಲಿ 5,000 ಹೆಕ್ಟೆರ್ ನೀರಾವರಿಗೆ ಉಪಯೋಗವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


