ಪತ್ನಿಗೆ ತಿಳಿಯದಂತೆ ಆಕೆಯ ನಗ್ನ ವಿಡಿಯೋಗಳನ್ನು ಲೈವ್ ಮಾಡಿದ ಪತಿ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಪತ್ನಿ ಜೊತೆಗಿನ ಮಿಲನದ ಕ್ಷಣಗಳು ಹಾಗೂ ಪತ್ನಿಯ ನಗ್ನ ವಿಡಿಯೋಗಳನ್ನು ಪತಿಯೇ ಲೈವ್ ಮಾಡುತ್ತಿದ್ದ ಆಘಾತಕಾರಿ ಘಟನೆ ವರದಿಯಾಗಿದೆ.

ಗುಂಟೂರು: ಪತ್ನಿ ಜೊತೆಗಿನ ಮಿಲನದ ಕ್ಷಣಗಳು ಹಾಗೂ ಪತ್ನಿಯ ನಗ್ನ ವಿಡಿಯೋಗಳನ್ನು ಪತಿಯೇ ಲೈವ್ ಮಾಡುತ್ತಿದ್ದ ಆಘಾತಕಾರಿ ಘಟನೆ ವರದಿಯಾಗಿದೆ.
ಗುಂಟೂರಿನಲ್ಲಿ ಈ ಘಟನೆ ನಡೆದಿದ್ದು ಹಣದಾಸೆಗಾಗಿ ಪತಿಯೇ ಪತ್ನಿಯ ನಗ್ನ ವಿಡಿಯೋಗಳನ್ನು ಪೋರ್ನ್ ವೈಬ್ ಸೈಟ್ ಗಳಿಗೆ ಅಪ್ಲೋಡ್ ಮಾಡಿದ್ದು ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ತನ್ನ ನಗ್ನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಷಯ ತಿಳಿದ ಸಂತ್ರಸ್ತ ಗೃಹಿಣಿ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪತ್ನಂ ಬಜಾರ ಏರಿಯಾದ ಪೊಲೀಸ್ ಅಧಿಕಾರಿಗಳು ಪ್ರಕರಣದ ಬೆನ್ನತ್ತಿದ್ದರು. ಆಗ ತಿಳಿದುಬಂದಿದ್ದು ಸಂತ್ರಸ್ತೆಯ ಪತಿಯೇ ಈ ಕೃತ್ಯ ಎಸಗಿದ್ದಾನೆ ಎಂದು.

ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಣದ ಆಸೆಗಾಗಿ ಪತ್ನಿಯ ವಿಡಿಯೋಗಳನ್ನು ಪೋರ್ನ್ ವೆಬ್ ಸೈಟ್ ಗಳಿಗೆ ಅಪ್ಲೋಡ್ ಮಾಡಿದ್ದಾಗಿ ಹೇಳಿದ್ದಾನೆ. ಅಲ್ಲದೆ ತಮ್ಮಿಬ್ಬರ ಮಿಲನದ ಕ್ಷಣಗಳನ್ನು ಲೈವ್ ಮಾಡಿದ್ದು ಅದಕ್ಕಾಗಿ ಹಲವರಿಂದ ಮುಂಗಡವಾಗಿ ಹಣವನ್ನು ಪಡೆದಿದ್ದಾಗಿ ಹೇಳಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


