ಸಂಸದರಿಗಾಗಿ ಬಹುಮಹಡಿ ಫ್ಲ್ಯಾಟ್‌ಗಳ ಉದ್ಘಾಟಿಸಿದ ಪ್ರಧಾನಿ ಮೋದಿ
ನವದೆಹಲಿಯಲ್ಲಿ ಸಂಸದರಿಗೆ ನಿರ್ಮಾಣಗೊಂಡಿರುವ ಬಹು ಮಹಡಿಯ ಫ್ಲ್ಯಾಟ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದಾರೆ.

ನವದೆಹಲಿ: ನವದೆಹಲಿಯಲ್ಲಿ ಸಂಸದರಿಗೆ ನಿರ್ಮಾಣಗೊಂಡಿರುವ ಬಹು ಮಹಡಿಯ ಫ್ಲ್ಯಾಟ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದಾರೆ.
ಬಹು ಮಹಡಿಯ ಫ್ಲ್ಯಾಟ್‌ಗಳ ಉದ್ಘಾಟನೆ ವೇಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೂಡ ಉಪಸ್ಥಿತರಿದ್ದರು.
ಬಹುಮಹಡಿ ಫ್ಲ್ಯಾಟ್'ಗಳ ಉದ್ಘಾಟನೆ ಬಳಿಕ ಮಾತನಾಡಿರುವ ಮೋದಿಯವರು, ಸಂಸದರ ವಸತಿಯ ಬಹು ಸಮಯದ ಸಮಸ್ಯೆ ಈಗ ಪರಿಹಾರಗೊಂಡಿದೆ. ದಶಕಗಳ ಹಿಂದಿನ ಸಮಸ್ಯೆಗಳು ನಿರ್ಲಕ್ಷ್ಯಿಸುವುದರಿಂದಲ್ಲ, ಪರಿಹಾರ ಕಂಡುಕೊಳ್ಳುವುದರಿಂದ ಬಗೆಹರಿಯುತ್ತವೆ ಎಂದರು.
ಜೊತೆಗೆ, ದೆಹಲಿಯಲ್ಲಿ ಹಲವು ವರ್ಷಗಳಿಂದ ಬಾಕಿ ಇರುವ ಯೋಜನೆಗಳ ಪಟ್ಟಿ ನೀಡಿದ ಮೋದಿ, ಸರ್ಕಾರ ಅವುಗಳ ಕಾಮಕಾರಿಯನ್ನು ಕೈಗೆತ್ತಿಕೊಂಡಿದ್ದು, ನಿಗದಿತ ಅವಧಿಯಲ್ಲಿ ಪೂರೈಸಲಾಗುವುದು ಎಂದು ಭರವಸೆ ನೀಡಿದರು.
ಈ ಫ್ಲ್ಯಾಟ್‌ಗಳು ನವದೆಹಲಿಯ ಡಾ ಬಿ ಡಿ ಮಾರ್ಗದಲ್ಲಿವೆ. 80 ವರ್ಷಗಳಿಗಿಂತ ಹಳೆಯದಾದ ಎಂಟು ಹಳೆಯ ಬಂಗಲೆಗಳನ್ನು 76 ಫ್ಲ್ಯಾಟ್‌ಗಳನ್ನು ನಿರ್ಮಿಸಲು ಪುನರಾಭಿವೃದ್ಧಿ ಮಾಡಲಾಗಿದೆ.
ಈ ಫ್ಲ್ಯಾಟ್‌ಗಳ ನಿರ್ಮಾಣವು ಮಂಜೂರಾದ ವೆಚ್ಚಕ್ಕಿಂತಲೂ ಶೇಕಡಾ 14 ರಷ್ಟು ಉಳಿತಾಯದೊಂದಿಗೆ ಪೂರ್ಣಗೊಂಡಿದ್ದು, ಕೊರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ಸಮಯ ವ್ಯರ್ಥಗೊಳ್ಳದೆ, ನಿಗದಿತ ಸಮಯದಲ್ಲಿಯೇ ನಿರ್ಮಾಣಗೊಂಡಿದೆ ಎಂದು ಪ್ರಧಾನಮಂತ್ರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ನಿರ್ಮಾಣವಾಗಿರುವ ಕಟ್ಟಡಗಲ್ಲಿ ಪರಿಸರ ರಕ್ಷಣೆಯ ಹಲವು ಉಪಕ್ರಮಗಳಿಂದ ನಿರ್ಮಾಣ ಮಾಡಲಾಗಿದೆ. ಕಡಿಮೆ ವಿದ್ಯುತ್ ಬಳಕೆಗಾಗಿ ವಿಆರ್'ವಿ ವ್ಯವಸ್ಥೆ, ನೀರಿನ ಕಡಿಮೆ ಬಳಕೆಗಾಗಿ ಹಲವು ವ್ಯವಸ್ಥೆಗಳು, ಮಳ ನೀರು ಕೊಯ್ಲು ವ್ಯವಸ್ಥೆ, ಸೌರ ಸ್ಥಾಪರಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


