ದೇಶ

ಲವ್ ಜಿಹಾದ್’ ಬಿಜೆಪಿ ಸೃಷ್ಟಿ: ಮುಖ್ಯಮಂತ್ರಿ ಗೆಹ್ಲೋಟ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ

ಲವ್ ಜಿಹಾದ್ ಸುತ್ತ ರಾಜಸ್ಥಾನ ರಾಜಕೀಯ ಸುತ್ತುತ್ತಿದೆ. 'ಲವ್ ಜಿಹಾದ್' ಎಂಬ ಪದವನ್ನು ಬಿಜೆಪಿ ಸೃಷ್ಟಿಸಿ ಮುನ್ನಲೆಗೆ ತಂದಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.

ಲವ್ ಜಿಹಾದ್’ ಬಿಜೆಪಿ ಸೃಷ್ಟಿ: ಮುಖ್ಯಮಂತ್ರಿ ಗೆಹ್ಲೋಟ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ
ಅಶೋಕ್ ಗೆಹ್ಲೋಟ್
Published On :

ಜೈಪುರ್: ಲವ್ ಜಿಹಾದ್ ಸುತ್ತ ರಾಜಸ್ಥಾನ ರಾಜಕೀಯ ಸುತ್ತುತ್ತಿದೆ. 'ಲವ್ ಜಿಹಾದ್' ಎಂಬ ಪದವನ್ನು ಬಿಜೆಪಿ ಸೃಷ್ಟಿಸಿ ಮುನ್ನಲೆಗೆ ತಂದಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.

ದೇಶವನ್ನು ವಿಭಜಿಸಲು, ಧಾರ್ಮಿಕ ಸಾಮರಸ್ಯ ಹಾಳುಮಾಡಲು ಬಿಜೆಪಿ ಇಂತಹ ಪದ ಪ್ರಯೋಗಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮದುವೆ ಎಂಬುದು ವೈಯಕ್ತಿಕ ಸ್ವಾತಂತ್ರ್ಯದ ವಿಷಯವಾಗಿದ್ದು, ಅದನ್ನು ತಡೆಯಲು ಕಾಯ್ದೆ ತರುವುದು ಸಂಪೂರ್ಣ ಅಸಂವಿಧಾನಿಕ ಕ್ರಮ ಎಂದು ಅವರು ಹೇಳಿದ್ದಾರೆ. ಈ ಕಾಯ್ದೆ ಯಾವ ನ್ಯಾಯಾಲಯದಲ್ಲೂ ಊರ್ಜಿತವಾಗುವುದಿಲ್ಲ ಎಂದು   ಹೇಳಿರುವ ಅವರು, ಪ್ರೇಮದಲ್ಲಿ ಜಿಹಾದ್ಗೆ ಸ್ಥಾನವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಲವ್ ಜಿಹಾದ್ ಎಂಬುದು ಬಿಜೆಪಿ  ಸೃಷ್ಟಿಸಿರುವ ಪದ ಎಂಬ ಮುಖ್ಯಮಂತ್ರಿ ಅಶೋಕ್  ಗೆಹ್ಲೋಟ್ ಹೇಳಿಕೆಗೆ ಬಿಜೆಪಿ ಕೆಂಡಾ ಮಂಡಲವಾಗಿದೆ. 

ಬಿಜೆಪಿ ನಾಯಕ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಾತನಾಡಿ, ಸಾವಿರಾರು ಮಂದಿ ಯುವತಿಯರನ್ನು ಲವ್ ಜಿಹಾದ್ ಹೆಸರಿನಲ್ಲಿ ಮತಾಂತರಗೊಳಿಸಲಾಗುತ್ತಿದೆ. ಮದುವೆ ಎಂಬುದು ವೈಯಕ್ತಿಕ ವಿಷಯವಾಗಿದ್ದರೆ. ಧರ್ಮದ ಆಚರಣೆಗೆ ಸಂಪೂರ್ಣ ಸ್ವಾತಂತ್ರ್ಯ ಇರಬೇಕು ಎಂದು ಶೆಖಾವತ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.