ದೇಶ

ಪ್ರತಿಯೊಬ್ಬ ಭಾರತೀಯನಿಗೂ ಲಸಿಕೆ ಹಾಕಲು 2024 ರವರೆಗೆ ಕಾಯಬೇಕು: ಪೂನಾವಾಲ

ಭಾರತದ ಪ್ರತಿಯೊಬ್ಬ ಪ್ರಜೆಗೂ ಕೋವಿಡ್-19 ಲಸಿಕೆ ಸಿಗಬೇಕು ಎಂದರೆ 2024ರವರೆಗೂ ಕಾಯಬೇಕು ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನಾವಾಲ ಹೇಳಿದ್ದಾರೆ.

ಪ್ರತಿಯೊಬ್ಬ ಭಾರತೀಯನಿಗೂ ಲಸಿಕೆ ಹಾಕಲು 2024 ರವರೆಗೆ ಕಾಯಬೇಕು: ಪೂನಾವಾಲ
ಕೋವಿಡ್-19 ಲಸಿಕೆ
Published On :

ನವದೆಹಲಿ: ಭಾರತದ ಪ್ರತಿಯೊಬ್ಬ ಪ್ರಜೆಗೂ ಕೋವಿಡ್-19 ಲಸಿಕೆ ಸಿಗಬೇಕು ಎಂದರೆ 2024ರವರೆಗೂ ಕಾಯಬೇಕು ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನಾವಾಲ ಹೇಳಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಶೃಂಗಸಭೆಯ (ಎಚ್‌ಟಿಎಲ್‌ಎಸ್) 18 ನೇ ಆವೃತ್ತಿಯ ಎರಡನೇ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಪೂನಾವಾಲಾ, 'ಲಸಿಕೆಯಿಂದಲೂ ಕೊನೆಯಾಗಲ್ಲ ಕೊರೋನಾ, ಹಲವು ವರ್ಷಗಳವರೆಗೆ ಇದರ ಪ್ರಭಾವ ಇರಲಿದೆ ಎಂದು ತಜ್ಞರ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. 

ಅದಾಗ್ಯೂ ತಮ್ಮ ಲಸಿಕೆ ಶೇ.90ರಷ್ಟು ಕಾರ್ಯ ಮುಕ್ತವಾಗಿದ್ದು, ಅಂತಿಮ ಹಂತದಲ್ಲಿದೆ. ಇದುವರೆಗಿನ ಲಸಿಕೆ ವಯಸ್ಸಾದವರಲ್ಲಿಯೂ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಾಬೀತಾಗಿದೆ. ಈ ಲಸಿಕೆಗಳು ದೀರ್ಘಾವಧಿಯಲ್ಲಿ ನಮ್ಮನ್ನು ರಕ್ಷಿಸುತ್ತದೆಯೇ ಎಂದು ಸಮಯ ಮಾತ್ರ ಹೇಳಬಲ್ಲದು ಎಂದು ಹೇಳಿದರು.

ಲಸಿಕೆ ವಿಳಂಬಕ್ಕೆ ಸರಬರಾಜು ನಿರ್ಬಂಧಗಳು ಮಾತ್ರ ಕಾರಣವಲ್ಲ, ಆದರೆ ಬಜೆಟ್, ಲಸಿಕೆ, ಲಾಜಿಸ್ಟಿಕ್ಸ್, ಮೂಲಸೌಕರ್ಯಗಳು ಬೇಕಾಗಿರುತ್ತದೆ. ಹೀಗಾಗಿ ಜನರು ಲಸಿಕೆ ತೆಗೆದುಕೊಳ್ಳಲು ಕಾಯಬೇಕಾಗುತ್ತದೆ ಎಂದು ಹೇಳಿದರು.

ಇಂದು ಮೊದಲ ಅಧಿವೇಶನವು ಕೋವಿಡ್ -19 ಅಧಿವೇಶನದೊಂದಿಗೆ ಪ್ರಾರಂಭವಾಯಿತು.ಈ ಅಧಿವೇಶನದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಮತ್ತು ಬ್ರೌನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಡೀನ್ ಡಾ. ಆಶಿಶ್ ಜಾ ಅವರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.