ದೇಶ

ಕೋವ್ಯಾಕ್ಸಿನ್ 3ನೇ ಹಂತದ ಪ್ರಯೋಗ: ಮೊದಲು ಲಸಿಕೆ ಹಾಕಿಸಿಕೊಳ್ಳಲು ಹರಿಯಾಣ ಆರೋಗ್ಯ ಸಚಿವ್ ಅನಿಲ್ ವಿಜ್ ಮುಂದು!

ಕೊರೋನಾ ವೈರಸ್ ಗೆ ಲಸಿಕೆ ಕೋವಾಕ್ಸಿನ್​ ಕ್ಲಿನಿಕಲ್​ ಟ್ರಯಲ್ ನ ಮೂರನೇ ಹಂತದ ಪ್ರಯೋಗ ಹರಿಯಾಣದಲ್ಲಿ ನಡೆಯಲಿದ್ದು, ಆರೋಗ್ಯ ಸಚಿವ ಅನಿಲ್ ವಿಜ್ ಅವರು ಸ್ವಯಂಪ್ರೇರಿತವಾಗಿ ಮೊದಲ ಲಸಿಕೆ ಪಡೆಯಲು ಮುಂದಾಗಿದ್ದಾರೆ.

ಕೋವ್ಯಾಕ್ಸಿನ್ 3ನೇ ಹಂತದ ಪ್ರಯೋಗ: ಮೊದಲು ಲಸಿಕೆ ಹಾಕಿಸಿಕೊಳ್ಳಲು ಹರಿಯಾಣ ಆರೋಗ್ಯ ಸಚಿವ್ ಅನಿಲ್ ವಿಜ್ ಮುಂದು!
ಅನಿಲ್ ವಿಜ್
Published On :

ನವದೆಹಲಿ: ಕೊರೋನಾ ವೈರಸ್ ಗೆ ಲಸಿಕೆ ಕೋವಾಕ್ಸಿನ್​ ಕ್ಲಿನಿಕಲ್​ ಟ್ರಯಲ್ ನ ಮೂರನೇ ಹಂತದ ಪ್ರಯೋಗ ಹರಿಯಾಣದಲ್ಲಿ ನಡೆಯಲಿದ್ದು, ಆರೋಗ್ಯ ಸಚಿವ ಅನಿಲ್ ವಿಜ್ ಅವರು ಸ್ವಯಂಪ್ರೇರಿತವಾಗಿ ಮೊದಲ ಲಸಿಕೆ ಪಡೆಯಲು ಮುಂದಾಗಿದ್ದಾರೆ.

ಐಸಿಎಂಆರ್ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಯ ಸಹಯೋಗದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಟ್ರಯಲ್ ನಲ್ಲಿದ್ದು ಸುರಕ್ಷಾ ಹಾಗೂ ಪರಿಣಾಮಕಾರಿತ್ವದ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ.

ನವೆಂಬರ್ 20ರಿಂದ ಮೂರನೇ ಹಂತದ ಪ್ರಯೋಗ ಆರಂಭವಾಗುತ್ತಿದ್ದು, ಅನಿಲ್ ವಿಜ್ ಅವರು ಸ್ವಯಂಸೇವಕರಾಗಿ ಮೊದಲ ಲಸಿಕೆಯನ್ನು ಪಡೆಯಲಿದ್ದಾರೆ.

ಈ ಕುರಿತು ಸ್ವತಃ ಸಚಿವ ಅನಿಲ್ ಟ್ವೀಟ್ ಮಾಡಿದ್ದು, ಮೊದಲ ಲಸಿಕೆ ನನಗೇ ನೀಡುವಂತೆ ಕಂಪನಿ ಬಳಿ ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಹರಿಯಾಣದ ರೋಹ್ಟಕ್‌ನ ಪಂಡಿತ್ ಭಗವತ್ ದಯಾಳ್ ಶರ್ಮಾ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಫರಿದಾಬಾದ್‌ನ ಇಎಸ್‌ಐಸಿ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಮೂರನೇ ಹಂತದ ಪ್ರಯೋಗ ನಡೆಯಲಿದೆ ಎಂದು ಭಾರತ್ ಬಯೋಟೆಕ್ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.