ಮನ್ ಮೋಹನ್ ಸಿಂಗ್ ಪ್ರಶಂಸಿಸಿ, ಪ್ರಧಾನಿ ಮೋದಿ ಬಗ್ಗೆ ಉಲ್ಲೇಖಿಸದ ಒಬಾಮಾ- ಶಶಿ ತರೂರ್
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಆತ್ಮಚರಿತ್ರೆಯಲ್ಲಿ ಮನಮೋಹನ್ ಸಿಂಗ್ ಬಗ್ಗೆ ಅಪಾರ ಪ್ರಶಂಸೆ ಇದೆ ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಸರಣಿ ಟ್ವೀಟ್ ಮೂಲಕ ಹೇಳಿದ್ದಾರೆ.

ನವದೆಹಲಿ: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಆತ್ಮಚರಿತ್ರೆಯಲ್ಲಿ ಮನಮೋಹನ್ ಸಿಂಗ್ ಬಗ್ಗೆ ಅಪಾರ ಪ್ರಶಂಸೆ ಇದೆ ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಸರಣಿ ಟ್ವೀಟ್ ಮೂಲಕ ಹೇಳಿದ್ದಾರೆ.
ಮಂಗಳವಾರ ಬಿಡುಗಡೆಯಾದ ಒಬಾಮಾ ಅವರ ಆತ್ಮಚರಿತ್ರೆ 'ಎ ಪ್ರಾಮಿಸ್ಡ್ ಲ್ಯಾಂಡ್ ' ಪ್ರತಿಯನ್ನು ಮುಂಚಿತವಾಗಿ ಪಡೆದುಕೊಂಡಿದ್ದು, ಭಾರತಕ್ಕೆ ಸಂಬಂಧಿಸಿದಂತ ಪ್ರತಿಯೊಂದು ಪುಟವನ್ನು ಓದಿದ್ದು, 902ನೇ ಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಏನನ್ನೂ ಉಲ್ಲೇಖಿಸಿಲ್ಲ ಎಂದಿದ್ದಾರೆ.
ಮನ್ ಮೋಹನ್ ಸಿಂಗ್ ಅವರನ್ನು ಚಿಂತನಶೀಲ, ಪ್ರಾಮಾಣಿಕ ಸಭ್ಯತೆಯ ವ್ಯಕ್ತಿ ಎಂದು ಪ್ರಶಂಸಿರುವ ಒಬಾಮಾ, ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾಗಿ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. ಹಿಂಸೆ, ದುರಾಶೆ, ಭ್ರಷ್ಟಾಚಾರ, ರಾಷ್ಟ್ರೀಯತೆ, ವರ್ಣಭೇದ ನೀತಿ ಮತ್ತು ಧಾರ್ಮಿಕ ಅಸಹಿಷ್ಣುತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಶಶಿ ತರೂರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


