ಗಡಿಯಲ್ಲಿ ಕದನವಿರಾಮ ಉಲ್ಲಂಘನೆ: ಬಿಎಸ್ಎಫ್ ಎಸ್ಐ ಹುತಾತ್ಮ, ಓರ್ವ ಸೈನಿಕನಿಗೆ ಗಾಯ
ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಲ್ಲಿ ಪಾಕಿಸ್ತಾನದ ಸೈನಿಕರು ಕದನ ವಿರಾಮ ಉಲ್ಲಂಘನೆ ಮುಂದುವರಿಸಿದ್ದು ಇಂದು ಗಡಿ ಭದ್ರತಾ ಪಡೆ ಸಬ್ ಇನ್ಸ್‌ಪೆಕ್ಟರ್ ವೀರಮರಣವನ್ನಪ್ಪಿದ್ದರೆ ಇನ್ನೊಬ್ಬ ಸೈನಿಕ ಗಾಯಗೊಂಡಿದ್ದಾರೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಲ್ಲಿ ಪಾಕಿಸ್ತಾನದ ಸೈನಿಕರು ಕದನ ವಿರಾಮ ಉಲ್ಲಂಘನೆ ಮುಂದುವರಿಸಿದ್ದು ಇಂದು ಗಡಿ ಭದ್ರತಾ ಪಡೆ ಸಬ್ ಇನ್ಸ್‌ಪೆಕ್ಟರ್ ವೀರಮರಣವನ್ನಪ್ಪಿದ್ದರೆ ಇನ್ನೊಬ್ಬ ಸೈನಿಕ ಗಾಯಗೊಂಡಿದ್ದಾರೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
13:15 ಗಂಟೆಗಳ ಗುಂಡಿನ ದಾಳಿಯಲ್ಲಿ ತಲೆಗೆ ಪೆಟ್ಟಾಗಿ ಬಾರಾಮುಲ್ಲಾದ ಎಲ್‌ಒಸಿಯಬಿಎಸ್‌ಎಫ್ ಫಿರಂಗಿ ಬ್ಯಾಟರಿಯಲ್ಲಿ ನಿಯೋಜಿಸಲಾದ ಎಸ್‌ಐ ರಾಕೇಶ್ ದೋವಲ್ ಹುತಾತ್ಮರಾಗಿದ್ದಾರೆ ಎಂದು ಅವರು ಹೇಳಿದರು.
ಘಟನೆಯಲ್ಲಿ ಗಾಯಗೊಂಡ ಸೈನಿಕನ ಆರೋಗ್ಯ ಸ್ಥಿರವಾಗಿದೆ.
ಶತ್ರುಗಳೂ ಭಾರೀ ಕದನ ವಿರಾಮ ಉಲ್ಲಂಗನೆ ನಡೆಸುತ್ತಿದ್ದಾಗ ಕರ್ತವ್ಯದಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ ಪ್ರಾಣತ್ಯಾಗ ಮಾಡಿದ್ದಾರೆ. ಅವರು ಉತ್ತಾರಖಂಡ್ ನಿವಾಸಿಯಾಗಿದ್ದರೆಂದು ಮೂಲಗಳು ಹೇಳಿದೆ.
"ಕದನ ವಿರಾಮ ಉಲ್ಲಂಘನೆ ಗುಂಡಿನ ದಾಳಿ ಇನ್ನೂ ನಡೆಯುತ್ತಿದೆ ಮತ್ತು ಬಿಎಸ್ಎಫ್ ಇದಕ್ಕೆ ತಕ್ಕ ಪ್ರತ್ಯುತ್ತರ ಕೊಡುತ್ತಿದೆಎಂದು ಬಿಎಸ್ಎಫ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


