ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್! ಟಿಕೆಟ್ ದರದಲ್ಲಿ ಸಿಗಲಿದೆ ಶೇ. 20ರಷ್ಟು ಡಿಸ್ಕೌಂಟು
ರಾಜಧಾನಿ, ಶತಾಬ್ದಿ, ಡುರೊಂಟೊ ನಂತಹ ಪ್ರಮುಖ ರೈಲುಗಳ ಟಿಕೆಟ್ ಮೂಲದರದಲ್ಲಿ ಶೇ. 20 ರಷ್ಟು ರಿಯಾಯಿತಿಯನ್ನು ಪ್ರಯಾಣಿಕರು ಪಡೆದುಕೊಳ್ಳಬಹುದಾಗಿದೆ ಎಂದು ಭಾರತೀಯ ರೈಲ್ವೆ ಪ್ರಕಟಿಸಿದೆ

ಚೆನ್ನೈ: ರಾಜಧಾನಿ, ಶತಾಬ್ದಿ, ಡುರೊಂಟೊ ನಂತಹ ಪ್ರಮುಖ ರೈಲುಗಳ ಟಿಕೆಟ್ ಮೂಲದರದಲ್ಲಿ ಶೇ. 20 ರಷ್ಟು ರಿಯಾಯಿತಿಯನ್ನು ಪ್ರಯಾಣಿಕರು ಪಡೆದುಕೊಳ್ಳಬಹುದಾಗಿದೆ ಎಂದು ಭಾರತೀಯ ರೈಲ್ವೆ ಪ್ರಕಟಿಸಿದೆ. ಲಾಕ್ ಡೌನ್ ಸಂದರ್ಭದಲ್ಲಿ ಪ್ರಿಮಿಯರ್ ರೈಲು ಸೇವೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಿಯಾಯಿತಿ ಯೋಜನೆಯನ್ನು ರೈಲ್ವೆ ಪರಿಚಯಿಸಿತ್ತು.
ಟಿಕೆಟ್ ಬುಕ್ಕಿಂಗ್ ವೇಳೆಯಲ್ಲಿ ಶೇ.60 ರಷ್ಟು ಆಸನಗಳು ಭರ್ತಿಯಾದಲ್ಲಿ ಮೂಲಬೆಲೆಯಲ್ಲಿ ಶೇ, 20 ರಷ್ಟು ರಿಯಾಯಿತಿಯನ್ನು ಪ್ರಯಾಣಿಕರು ಪಡೆದುಕೊಳ್ಳಬಹುದಾಗಿದೆ. ಅದೇ ರೀತಿಯಲ್ಲಿ ಶೇ. 70 ರಿಂದ 80 ರಷ್ಟು ಆಸನಗಳು ಭರ್ತಿಯಾದಲ್ಲಿ ಶೇ. 10 ರಷ್ಟು ರಿಯಾಯಿತಿ ಪ್ರಯಾಣಿಕರಿಗೆ ಸಿಗಲಿದೆ. ಶೇ. 80 ರಷ್ಟು ಆಸನಗಳು ಭರ್ತಿಯಾದರೆ ಯಾವುದೇ ಆಫರ್ ಇರುವುದಿಲ್ಲ.
ಆದಾಗ್ಯೂ, ಮೂರನೇ ಹಂತದ ಎಸಿ ಮತ್ತು ಎಸಿ ಚೇರ್ ಬೋಗಿಗಳ ಟಿಕೆಟ್ ಬುಕ್ಕಿಂಗ್ ಗಾಗಿ ಮಾತ್ರ ದರದಲ್ಲಿ ರಿಯಾಯಿತಿ ಸಿಗಲಿದೆ. ಕಾಯ್ದಿರಿಸುವಿಕೆ ಶುಲ್ಕ, ಸೂಪರ್ ಪಾಸ್ಟ್ ಮತ್ತು ಜಿಎಸ್ ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರೈಲ್ವೆ ತಿಳಿಸಿದೆ.
ರೈಲುಗಳ ನಿಗದಿತ ನಿರ್ಗಮನಕ್ಕಿಂತ ನಾಲ್ಕು ದಿನಗಳ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ಎಲ್ಲ ಪ್ರಯಾಣಿಕರಿಗೆ ರಿಯಾಯಿತಿ ನೀಡಲಾಗುತ್ತಿದೆ. ಆದಾಗ್ಯೂ, ಪ್ರಯಾಣದ ದಿನದಂದು ಟಿಕೆಟ್‌ಗಳನ್ನು ಕಾಯ್ದಿರಿಸಿದರೆ ಶುಲ್ಕದಲ್ಲಿ ಯಾವುದೇ ಕಡಿತವನ್ನು ನೀಡಲಾಗುವುದಿಲ್ಲ, ಉದಾಹರಣೆಗೆ, ಪ್ರಯಾಣಿಕರು ನವೆಂಬರ್ 15 ರಂದು ಪ್ರಯಾಣಿಸಲು ನಿರ್ಧರಿಸಿ ನವೆಂಬರ್ 11 ಮತ್ತು 14 ರ ನಡುವೆ ಟಿಕೆಟ್ ಕಾಯ್ದಿರಿಸಿದರೆ ಯೋಜನೆಯಡಿ ರಿಯಾಯಿತಿ ಅನ್ವಯವಾಗುತ್ತದೆ ಎಂದು ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.
ದಕ್ಷಿಣ ರೈಲುಗಳಲ್ಲಿ ನವೆಂಬರ್ 15 ಮತ್ತು ಡಿಸೆಂಬರ್ 31ರ ನಡುವೆ ಅಥವಾ ರೈಲು ಸೇವೆಗಳ ನಿಗದಿತ ವೇಳಾಪಟ್ಟಿ ಪರಿಚಯಿಸುವವರೆಗೂ ಪ್ರಯಾಣಿಕರಿಗೆ ರಿಯಾಯಿತಿ ಸಿಗಲಿದೆ. ಐಆರ್ ಸಿಟಿಸಿ ಪೋರ್ಟಲ್ ಮತ್ತು ಟಿಕೆಟ್ ಕೌಂಟರ್ ಗಳಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುವ ಪ್ರಯಾಣಿಕರು ಈ ಯೋಜನೆಯಡಿ ರಿಯಾಯಿತಿ ಪಡೆಯಲು ಯಾವುದೇ ಆಯ್ಕೆಯನ್ನು ಆರಿಸಬೇಕಾಗಿಲ್ಲ. "ರೈಲ್ವೆ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುವ ಎಲ್ಲಾ ಪ್ರಯಾಣಿಕರಿಗೆ ಪೂರ್ವನಿಯೋಜಿತವಾಗಿ ರಿಯಾಯಿತಿ ನೀಡಲಾಗುವುದು ಎಂದು ಹಿರಿಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


