ದೇಶ

ಮುಂಬೈ ಭಯೋತ್ಪಾದಕ ದಾಳಿಯನ್ನು ಪಾಕ್‍ನಲ್ಲೇ ಯೋಜಿಸಲಾಗಿತ್ತು: ವಿದೇಶಾಂಗ ಸಚಿವಾಲಯ

ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ಸಂಚುಕೋರರು ಮತ್ತು ನೆರವು ನೀಡಿದವರ ಬಗ್ಗೆ ಪಾಕಿಸ್ತಾನದ ಫೆಡರಲ್‍ ತನಿಖಾ ಸಂಸ್ಥೆ(ಎಫ್‍ಐಎ) 19 ಪಾಕ್‍ ಪ್ರಜೆಗಳನ್ನು ಹೆಸರಿಸಿ, ತುಂಬಾ ಬೇಕಾಗಿದ್ದ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಿತ್ತು.

ಮುಂಬೈ ಭಯೋತ್ಪಾದಕ ದಾಳಿಯನ್ನು ಪಾಕ್‍ನಲ್ಲೇ ಯೋಜಿಸಲಾಗಿತ್ತು: ವಿದೇಶಾಂಗ ಸಚಿವಾಲಯ
ಇಮ್ರಾನ್ ಖಾನ್
Published On :

ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ಸಂಚುಕೋರರು ಮತ್ತು ನೆರವು ನೀಡಿದವರ ಬಗ್ಗೆ ಪಾಕಿಸ್ತಾನದ ಫೆಡರಲ್‍ ತನಿಖಾ ಸಂಸ್ಥೆ(ಎಫ್‍ಐಎ) 19 ಪಾಕ್‍ ಪ್ರಜೆಗಳನ್ನು ಹೆಸರಿಸಿ, ತುಂಬಾ ಬೇಕಾಗಿದ್ದ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಿತ್ತು.

ಈ ವರದಿ ಬಗ್ಗೆ ಭಾರತ ಪ್ರತಿಕ್ರಿಯೆ ನೀಡಿದ್ದು ಪಾಕಿಸ್ತಾನ ಮುಂಬೈ ಭಯೋತ್ಪಾದಕ ದಾಳಿಗೆ ಕಾರಣರಾದವರ ಬಗ್ಗೆ ಅಗತ್ಯ ಪುರಾವೆಗಳನ್ನು ಒದಗಿಸಿರುವುದು ಸ್ಪಷ್ಟವಾಗಿದೆ ಎಂದು ಹೇಳಿದೆ.

2008ರಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಒಟ್ಟು 166 ಜನರು ಸಾವನ್ನಪ್ಪಿದ್ದರು. ಪಟ್ಟಿಯಲ್ಲಿ ದಾಳಿಯಲ್ಲಿ ಪಾಲ್ಗೊಂಡ 28 ವ್ಯಕ್ತಿಗಳ ಹೆಸರುಗಳಿವೆ. ಈ ಎಲ್ಲ 19 ಮಂದಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾ ಭಾಗವಾಗಿದ್ದಾರೆ ಎಂದು ಅಲ್ಲಿನ ವರದಿ ಹೇಳಿದೆ.

2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿಅಲ್ ಫೌಜ್ ದೋಣಿ ಖರೀದಿಯಲ್ಲಿ ಭಾಗಿಯಾಗಿದ್ದ ಮುಲ್ತಾನ್‌ನ ಮುಹಮ್ಮದ್ ಅಮ್ಜದ್ ಖಾನ್ ಅವರನ್ನು 880 ಪುಟಗಳ ಉದ್ದದ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಅಮ್ಜದ್ ಖಾನ್ಯಮಹಾ ಮೋಟೋ ಆರ್ ಬೋಟ್ ಎಂಜಿನ್, ಲೈಫ್ ಜಾಕೆಟ್ ಗಳು, ಕರಾಚಿಯ ಎಆರ್ ಝಡ್  ವಾಟರ್ ಸ್ಪೋರ್ಟ್ ನಿಂದ ಗಾಳಿ ತುಂಬಬಹುದಾದ ದೋಣಿಗಳನ್ನು ಖರೀದಿಸಿದ, ನಂತರ ಇದನ್ನು ಭಾರತದ ವಾಣಿಜ್ಯ ನಗರಿಯ ಮೇಲಿನ ದಾಳಿಯಲ್ಲಿ ಬಳಸಲಾಯಿತು. ಅಲ್-ಹುಸೇನಿ ದೋಣಿಯ ಕ್ಯಾಪ್ಟನ್ ಆಗಿದ್ದ ಎಂದು ಸಹ ಉಲ್ಲೇಖಿಸಲಾಗಿದೆ.

ಒಟ್ಟಾರೆ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಬಳಸಿದ ದೋಣಿಗಳ ಒಂಬತ್ತು ಸಿಬ್ಬಂದಿಗಳನ್ನೂ ಈ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಪಟ್ಟಿಯಲ್ಲಿ ದೇಶದ 1,210 ಕುಖ್ಯಾತ ಹಾಗೂ ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ಉಲ್ಲೇಖಿಸಲಾಗಿದೆ ಆದರೆ ಹಫೀಜ್ ಸಯೀದ್, ಮಸೂದ್ ಅಜರ್, ಅಥವಾ ದಾವೂದ್ ಇಬ್ರಾಹಿಂ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಹಫೀಜ್ ಸಯೀದ್ ಯುಎನ್ ಪಟ್ಟಿಮಾಡಿದ ಅಂತರರಾಷ್ಟ್ರೀಯ ಭಯೋತ್ಪಾದಕ, 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್, ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ಕಳೆದ ವರ್ಷ 40 ಕ್ಕೂ ಹೆಚ್ಚು ಭಾರತೀಯ ಅರೆಸೈನಿಕ ಪಡೆಗಳನ್ನು ಕೊಂದ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಪಟ್ಟಿ ಮಾಡಲಾಗಿತ್ತು. . ಈ ವರ್ಷದ ಆರಂಭದಲ್ಲಿ, ಪಾಕಿಸ್ತಾನದ ನ್ಯಾಯಾಲಯವು ಉಗ್ರವಾದಕ್ಕೆ ಹಣ ಹೂಡಿಕೆ ಮಾಡಿದ್ದಕ್ಕಾಗಿ ಗೆ 5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು.

ಇತ್ತೀಚೆಗೆ ನಲವತ್ತು ಯೋಧರು ಹುತಾತ್ಮರಾಗಲು ಕಾರಣವಾಗಿದ್ದ ಪುಲ್ವಾಮಾ ದಾಳಿಯ ರೂವಾರಿ ತಾನೆಂದು ಪಾಕಿಸ್ತಾನ ಬಹಿರಂಗವಾಗಿ ಒಪ್ಪಿಕೊಂಡಿತ್ತು. ಪಾಕ್ ಸಚಿವರು ಸಂಸತ್ತಿನಲ್ಲೇ ಪುಲ್ವಾಮಾ ದಾಳಿಯನ್ನು ಇಮ್ರಾನ್ ಕಾನ್ ಸರ್ಕಾರದ ಮಹತ್ವದ ಸಾಧನೆ ಎಂದು ಹೇಳಿ ಹೊಗಳಿದ್ದರು. ಇದೀಗ ಮುಂಬೈ ದಾಳಿಯ ಹಿಂದೆ ಸಹ ತನ್ನ ಕೈವಾಡವಿದೆ ಎಂದು ನೆರೆರಾಷ್ಟ್ರ ಖಚಿತಪಡಿಸಿರುವುದು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ನಿಜಬಣ್ಣವನ್ನು ಮತ್ತೆ ಬಯಲು ಮಾಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.