ಜಾರಿ ನಿರ್ದೇಶನಾಲಯಕ್ಕೆ ಕೇರಳ ಮಕ್ಕಳ ಹಕ್ಕು ಆಯೋಗ ನೊಟೀಸ್ ಜಾರಿ!
ಕೇರಳ ಮಕ್ಕಳ ಹಕ್ಕು ಆಯೋಗ ಜಾರಿ ನಿರ್ದೇಶನಾಲಯಕ್ಕೆ ನೊಟಿಸ್ ಜಾರಿಗೊಳಿಸಿದೆ.

ತಿರುವನಂತಪುರಂ: ಕೇರಳ ಮಕ್ಕಳ ಹಕ್ಕು ಆಯೋಗ ಜಾರಿ ನಿರ್ದೇಶನಾಲಯಕ್ಕೆ ನೊಟಿಸ್ ಜಾರಿಗೊಳಿಸಿದೆ.
ಕಮ್ಯುನಿಸ್ಟ್ ನಾಯಕ ಬಿನೀಶ್ ಕೊಡಿಯೇರಿ ನಿವಾಸದಲ್ಲಿ ದಾಳಿ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಮ್ಮ 2 ವರ್ಷದ ಮೊಮ್ಮಗುವಿಗೆ ಆಹಾರ ನೀಡುವುದಕ್ಕೆ, ಹಾಲೂಡಿಸುವುದಕ್ಕೂ ಬಿಟ್ಟಿಲ್ಲ, ಮನೆಯ ಒಳಗೆ ಬಂಧಿಯಾಗಿದ್ದ ಮಗುವನ್ನು ನೋಡುವುದಕ್ಕೂ ಅವಕಾಶ ಮಾಡಿಕೊಟ್ಟಿಲ್ಲ ಎಂದು ಬಿನೀಶ್ ಕೊಡಿಯೇರಿ ಅವರ ಪತ್ನಿಯ ತಂದೆ ಕೇರಳ ಮಕ್ಕಳ ಆಯೋಗಕ್ಕೆ ದೂರು ನೀಡಿದ್ದರು.
ದೂರು ದಾಖಲಾದ ಅನ್ವಯ ಕೆಸಿಆರ್ ಸಿ ಅಧ್ಯಕ್ಷ ಮನೋಜ್ ಕುಮಾರ್ ಕೆವಿ ಬಿನೀಶ್ ಅವರ ಮನೆಗೆ ತೆರಳಿ ಪರಿಶೀಲಿಸಿ ಇ.ಡಿ ಅಧಿಕಾರಿಗಳಿಗೆ ನೊಟೀಸ್ ಜಾರಿಗೊಳಿಸಿದ್ದಾರೆ.
ಡ್ರಗ್ ಪೂರೈಕೆ ಪ್ರಕರಣದಲ್ಲಿ ಜಾರು ನಿರ್ದೇಶನಾಲಯದ ತನಿಖೆ ಎದುರಿಸುತ್ತಿರುವ ಬಿನೀಶ್ ಕೊಡಿಯೇರಿ ಪತ್ನಿ ಇಡಿ ಅಧಿಕಾರಿಗಳ ವಿರುದ್ಧ ಮಹಜರ್ ಗೆ ಒತ್ತಾಯಪೂರ್ವಕ ಸಹಿ ಹಾಕಿಸಿಕೊಳ್ಳುವ ಗಂಭೀರ ಆರೋಪ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


