ದೇಶ

ವೈದ್ಯರ ಸಲಹೆ ಪಡೆಯದೆ ತೆಗೆದುಕೊಂಡ ಔಷಧಿಗಳಿಂದ ಸುಶಾಂತ್ ಆತ್ಮಹತ್ಯೆ: ಹೈಕೋರ್ಟ್ ಗೆ ಮುಂಬೈ ಪೊಲೀಸರ ಮಾಹಿತಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ವೈದ್ಯರ ಸಲಹೆ ಪಡೆಯದೆ ತೆಗೆದುಕೊಳ್ಲಲಾದ ಔಷಧಗಳು ಕಾರಣವಾಗಿರಬಹುದು ಎಂದು ಮುಂಬೈ ಪೊಲೀಸರು ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ವೈದ್ಯರ ಸಲಹೆ ಪಡೆಯದೆ ತೆಗೆದುಕೊಂಡ ಔಷಧಿಗಳಿಂದ ಸುಶಾಂತ್ ಆತ್ಮಹತ್ಯೆ: ಹೈಕೋರ್ಟ್ ಗೆ ಮುಂಬೈ ಪೊಲೀಸರ ಮಾಹಿತಿ
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (ರಿ) ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ (ಶ್ವೇತಾ ಸಿಂಗ್ ಇನ್ಸ್ಟಾಗ್ರಾಂ ಫೋಟೋ)
Published On :

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ವೈದ್ಯರ ಸಲಹೆ ಪಡೆಯದೆ ತೆಗೆದುಕೊಳ್ಲಲಾದ ಔಷಧಗಳು ಕಾರಣವಾಗಿರಬಹುದು ಎಂದು ಮುಂಬೈ ಪೊಲೀಸರು ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ರಜಪೂತ್ ಸಹೋದರಿಯರಾದ ಪ್ರಿಯಾಂಕಾ ಸಿಂಗ್ ಮತ್ತು ಮೀತು ಸಿಂಗ್ ಅವರು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿ ನಗರ ಪೊಲೀಸರು ಸೋಮವಾರ ಹೈಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ.

ನಟಿ ರಿಯಾ ಚಕ್ರವರ್ತಿ ರಜಪೂತ್ ಸಹೋದರಿಯರ ವಿರುದ್ಧ ದೂರು ನೀಡಿದ್ದರಿಂದ ಪೋಲೀಸರು ಅವರ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ಧರಿಸಿದ್ದಾರೆ

ರಜಪೂತ್ ಗೆಳತಿ ರಿಯಾ ಚಕ್ರವರ್ತಿಯಿಂದ ದೂರು ಬಂದ ನಂತರ ಸೆಪ್ಟೆಂಬರ್‌ನಲ್ಲಿ ಬಾಂದ್ರಾ ಪೊಲೀಸರು ಅವರ ವಿರುದ್ಧ ಈ ಪ್ರಕರಣ ದಾಖಲಿಸಿದ್ದರು. ಬಾಂದ್ರಾ ಹಿರಿಯ ಇನ್ಸ್‌ಪೆಕ್ಟರ್ ನಿಖಿಲ್ ಕಾಪ್ಸೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಪೊಲೀಸರು ಅರ್ಜಿದಾರರ ಅಥವಾ ಯಾವುದೇ ಮೃತ ವ್ಯಕ್ತಿಯ ಪ್ರತಿಷ್ಠೆಗೆ ಧಕ್ಕೆ ತರುತ್ತಿದ್ದಾರೆ ಎಂಬ ಆರೋಪವನ್ನು ಅಲ್ಲಗಳೆದಿದ್ದಾರೆ. ರಜಪೂತ್ ಸಹೋದರಿಯರ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ಪೊಲೀಸರು ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸುತ್ತಿರುವ ತನಿಖೆಯನ್ನು "ಪ್ರಭಾವಿಸಲು ಅಥವಾ ಹಳಿ ತಪ್ಪಿಸಲು" ಪ್ರಯತ್ನಿಸುತ್ತಿಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ರಿಯಾ ಚಕ್ರವರ್ತಿಯವರ ದೂರಿನ ಪ್ರಕಾರ, ದೆಹಲಿ ಮೂಲದ ವೈದ್ಯರ ಸಹಾಯದಿಂದ ಅರ್ಜಿದಾರರು ನಕಲಿ ಮತ್ತು ಕಲ್ಪಿತ ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಕಳುಹಿಸಿದ್ದಾರೆ, ಅದರಲ್ಲಿ ರಜಪೂತ್ ಗೆ ಸೂಚಿಸಲಾದ ಔಷಧಿಗಳಿಗೆ ಸರಿಯಾದ ವೈದ್ಯಕೀಯ ಸಲಹೆಗಳಿರಲಿಲ್ಲ. ಇದು ವೈದ್ಯರಿಂದ ರಜಪೂತ್ ಪರೀಕ್ಷಿಸಿಕೊಳ್ಳದೆ ತೆಗೆದುಕೊಳ್ಳುತ್ತಿದ್ದಾ ಔಷಧಿಯಾಗಿದ್ದು ಇದು ಅವರ ಆತ್ಮಹತ್ಯೆಯಂತಹಾ ನಿರ್ಧಾರಕ್ಕೆ ಕಾರಣವಾಗಿರಬಹುದುಎಂದು ಪೊಲೀಸರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. "ಮಾಹಿತಿದಾರರ ಈ  ನಿಲುವು ಅಪರಾಧವನ್ನು ಬಹಿರಂಗಪಡಿಸಿದ್ದು ಯಾವುದೇ ಪ್ರಾಥಮಿಕ ವಿಚಾರಣೆಯ ಅಗತ್ಯವಿಲ್ಲ. ಆದ್ದರಿಂದ, ಮುಂಬೈ ಪೊಲೀಸರು ಎಫ್ಐಆರ್ ಅನ್ನು ನೋಂದಾಯಿಸಲು ಕರ್ತವ್ಯನಿರತರಾಗಿದ್ದಾರೆ" ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ.

ಎಫ್‌ಐಆರ್ ನೋಂದಣಿ ಮಾಡಿದ ನಂತರ, ಸುಪ್ರೀಂ ಕೋರ್ಟ್ ಜಾರಿಗೊಳಿಸಿದ ಆದೇಶವನ್ನು ಅನುಸರಿಸಿ ಪೊಲೀಸರು ರಜಪೂತ್ ಅವರ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಎಫ್‌ಐಆರ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೀಡಿದ್ದಾರೆಂದು ಅದು ಹೇಳಿದೆ.ಕೇಂದ್ರ ಸಂಸ್ಥೆ ಈಗಾಗಲೇ ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಬಾರದು ಎಂಬ ಸಿಬಿಐ ನಿಲುವನ್ನು ಪೊಲೀಸರು ವಿರೋಧಿಸಿದರು. "ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣವು ಬಿಹಾರದಲ್ಲಿ ಮೃತನ ತಂದೆ ದಾಖಲಿಸಿದ ಪ್ರಕರಣವಾಗಿದೆ. ಮತ್ತೊಂದೆಡೆ, ಮುಂಬೈ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರಿಯಾ ಚಕ್ರವರ್ತಿ ಅವರು ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿಯರಾದ ಪ್ರಿಯಾಂಕಾ ಮತ್ತು ಮೀತು ಮತ್ತು ವೈದ್ಯ ತರುಣ್ ಕುಮಾರ್ ವಿರುದ್ಧವಿದೆ"

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.