ದೇಶ

ಮಲಗಿದ್ದ ಅತ್ತಿಗೆಯನ್ನೇ ಕೊಲೆಗೈದ ಭಾಮೈದ!

ಹೊಸದಾಗಿ ಮದುವೆ ಮಾಡಿಕೊಂಡು ಬಂದಿದ್ದ ಅಣ್ಣನ ಪತ್ನಿಯನ್ನೇ ಸಹೋದರ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಮಲಗಿದ್ದ ಅತ್ತಿಗೆಯನ್ನೇ ಕೊಲೆಗೈದ ಭಾಮೈದ!
ಸಂಗ್ರಹ ಚಿತ್ರ
Published On :

ಪಾಟ್ನಾ: ಹೊಸದಾಗಿ ಮದುವೆ ಮಾಡಿಕೊಂಡು ಬಂದಿದ್ದ ಅಣ್ಣನ ಪತ್ನಿಯನ್ನೇ ಸಹೋದರ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. 

ತನಗೆ ಇನ್ನು ಮದುವೆಯಾಗಿಲ್ಲ ಎಂಬ ಕಾರಣಕ್ಕೆ 30 ವರ್ಷದ ಮನೋಜ್ ಎಂಬಾತ ತನ್ನ ಅಣ್ಣ ಎರಡನೇ ಮದುವೆ ಮಾಡಿಕೊಂಡು ಬಂದಿದ್ದ 34 ವರ್ಷದ ಮೀನಾ ದೇವಿಯನ್ನು ರಾತ್ರಿ ಮಲಗಿದ್ದ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಈ ಘಟನೆ ಬಿಹಾರದ ಗೋಪಾಲಗಂಜ್ ನಲ್ಲಿ ನಡೆದಿದೆ. 

Story image

ಆರೋಪಿ ಮನೋಜ್ ನ ಹಿರಿಯ ಸಹೋದರನಿಗೆ ಮದುವೆಯಾಗಿ ಮೊದಲ ಪತ್ನಿ ಮೃತಪಟ್ಟಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದರು. ಮಕ್ಕಳಿಬ್ಬರು ಚಿಕ್ಕವರಾಗಿದ್ದ ಕಾರಣ ಮೀನಾ ದೇವಿಯನ್ನು ಎರಡನೇ ಮದುವೆ ಮಾಡಿಕೊಂಡಿದ್ದರು. 

ಇದರಿಂದ ಬೇಸತ್ತ ಮನೋಜ್ ತನಗೆ ಮದುವೆ ಮಾಡದೆ ಅಣ್ಣನಿಗೆ ಮದುವೆ ಮಾಡಿದ್ದಾರೆ ಎಂಬ ಕೋಪದಲ್ಲಿ ಈ ಕೃತ್ಯ ಎಸಗಿದ್ದಾನೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.