ಬಿಹಾರದಲ್ಲಿ ಡಬಲ್ ಎಂಜಿನ್ ಸರ್ಕಾರ ಇದೆ, ಮತ್ತೊಂದೆಡೆ ಇಬ್ಬರು ಯುವರಾಜ ಇದ್ದಾರೆ,ಅವರಲ್ಲಿ ಒಬ್ಬರು ಜಂಗಲ್ ರಾಜ್
ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು ಅದರಲ್ಲಿ ನಿತೀಶ್ ಕುಮಾರ್ ಅವರೇ ಈ ಬಾರಿ ಕೂಡ ಸರ್ಕಾರ ರಚಿಸಲಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಛಪ್ರ(ಬಿಹಾರ): ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು ಅದರಲ್ಲಿ ನಿತೀಶ್ ಕುಮಾರ್ ಅವರೇ ಈ ಬಾರಿ ಕೂಡ ಸರ್ಕಾರ ರಚಿಸಲಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ಬಿಹಾರದಲ್ಲಿ ಪ್ರಧಾನಿ ಮೋದಿಯವರು ನಾಲ್ಕು ರ್ಯಾಲಿಗಳಲ್ಲಿ ಭಾಗವಹಿಸಿ ಮಾತನಾಡಲಿದ್ದು ಮೊದಲ ಭಾಗವಾಗಿ ಛಪ್ರ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ್ದಾರೆ.
ಇಂದು ಬಿಹಾರದಲ್ಲಿ ಡಬಲ್ ಎಂಜಿನ್ ನ ಸರ್ಕಾರವಿದೆ, ಇನ್ನೊಂದೆಡೆ ಇಬ್ಬರು ಯುವರಾಜರಿದ್ದು ಅವರಲ್ಲಿ ಒಬ್ಬರು ಜಂಗಲ್ ರಾಜನ ಯುವರಾಜ ಕೂಡ ಇದ್ದಾರೆ. ನಿತೀಶ್ ಕುಮಾರ್ ನೇತೃತ್ವದ ಡಬಲ್ ಎಂಜಿನ್ ಸರ್ಕಾರ ರಾಜ್ಯದ ಪ್ರಗತಿಗೆ ಬದ್ಧವಾಗಿದ್ದರೆ, ಎದುರುಗಡೆಯ ಇಬ್ಬರು ಯುವರಾಜರು ತಮ್ಮ ತಮ್ಮ ಸಿಂಹಾಸನವನ್ನು ಭದ್ರಪಡಿಸಿಕೊಳ್ಳಲು ತಮ್ಮಲ್ಲೇ ಜಗಳವಾಡುತ್ತಿದ್ದಾರೆ ಎಂದು ಅಣಕಿಸಿದರು.
ಮಹಾಘಟಬಂಧನ ಮೈತ್ರಿಕೂಟದಲ್ಲಿ ಇಬ್ಬರು ಯುವರಾಜರಿದ್ದಾರೆ. ಒಬ್ಬರು ಕುಟುಂಬ ರಾಜಕಾರಣದ ಪರಂಪರೆಯಿಂದ ಬಂದಿದ್ದರೆ, ಮತ್ತೊಬ್ಬರು ಜಂಗಲ್ ರಾಜ್ ಆಡಳಿತದ ಪರಂಪರೆಯಿಂದ ಬಂದಿದ್ದಾರೆ ಎಂದು ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕೆಣಕಿದರು.
ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮಾತ್ರ ಬಿಹಾರ ರಾಜ್ಯ ಅಭಿವೃದ್ಧಿ ಸಾಧ್ಯ, ಮಹಾಘಟಬಂಧನ ಅಧಿಕಾರಕ್ಕೆ ಬಂದರೆ ರಾಜ್ಯ ಜಂಗಲ್ ರಾಜ್ಯವಾಗಲಿದೆ ಎಂದರು.
ಹಬ್ಬ ಆಚರಿಸುವುದು ಹೇಗೆಂಬ ಚಿಂತೆ ಬೇಡ: ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಖುಷಿಯಾಗುವ ವಿಚಾರವನ್ನು ಪ್ರಧಾನಿಯವರು ಹಂಚಿಕೊಂಡಿದ್ದು, ದೀಪಾವಳಿ, ಛತ್ ಪೂಜೆಯವರೆಗೆ ಕೇಂದ್ರ ಸರ್ಕಾರ ಉಚಿತ ಆಹಾರ ಧಾನ್ಯಗಳನ್ನು ಬಡವರಿಗೆ ವಿತರಿಸುತ್ತಿದ್ದು, ಹಬ್ಬಗಳನ್ನು ಹೇಗೆ ಆಚರಿಸುವುದೆಂಬ ಚಿಂತೆ ತಾಯಂದಿರು, ಸಹೋದರಿಯರಿಗೆ ಬೇಡ ಎಂದು ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


