ದೇಶ

ಮುಂಬೈ, ದೆಹಲಿ, ಗುಜರಾತ್ ಗಳಲ್ಲಿ ಕೊರೋನಾ ಸಮಸ್ಯೆಗೆ ನಮಸ್ತೆ ಟ್ರಂಪ್ ಕಾರ್ಯಕ್ರಮ ಕಾರಣ:ಸಂಜಯ್ ರಾವತ್

ಭಾರತದ ದೆಹಲಿ, ಗುಜರಾತ್, ಮುಂಬೈಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕೊರೋನಾ ಸೋಂಕು ಹರಡಲು ಕಳೆದ ಫೆಬ್ರವರಿಯಲ್ಲಿ ಅಹಮದಾಬಾದ್ ನಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮವೇ ಕಾರಣ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಆರೋಪಿಸಿದ್ದಾರೆ.

ಮುಂಬೈ, ದೆಹಲಿ, ಗುಜರಾತ್ ಗಳಲ್ಲಿ ಕೊರೋನಾ ಸಮಸ್ಯೆಗೆ ನಮಸ್ತೆ ಟ್ರಂಪ್ ಕಾರ್ಯಕ್ರಮ ಕಾರಣ:ಸಂಜಯ್ ರಾವತ್
ಸಂಜಯ್ ರಾವತ್
Published On :

ಮುಂಬೈ: ಭಾರತದ ದೆಹಲಿ, ಗುಜರಾತ್, ಮುಂಬೈಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕೊರೋನಾ ಸೋಂಕು ಹರಡಲು ಕಳೆದ ಫೆಬ್ರವರಿಯಲ್ಲಿ ಅಹಮದಾಬಾದ್ ನಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮವೇ ಕಾರಣ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಆರೋಪಿಸಿದ್ದಾರೆ.

ಈ ಕುರಿತು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಬರೆದಿರುವ ಅವರು, ಅಮೆರಿಕ ಅಧ್ಯಕ್ಷರ ಭೇಟಿ ಸಂದರ್ಭದಲ್ಲಿ ಕೆಲವು ನಿಯೋಗಗಳು ಸಹ ಈ ನಗರಗಳಿಗೆ ಭೇಟಿ ನೀಡಿದ್ದು ಅವರಿಂದಾಗಿಯೇ ಕೊರೋನಾ ಇಷ್ಟೊಂದು ವ್ಯಾಪಕವಾಗಿ ಹರಡಿದೆ ಎಂದು ಬರೆದಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಟ್ರಂಪ್ ಅವರು ಅಹಮದಾಬಾದ್ ಗೆ ಬಂದು ಅಲ್ಲಿ ಬೃಹತ್ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದರಿಂದಲೇ ಹಲವು ಜನರ ಸಂಪರ್ಕವಾಗಿ ಕೊರೋನಾ ವ್ಯಾಪಿಸಿದೆ. ನಂತರ ಟ್ರಂಪ್ ಆಗ್ರಾ, ಮುಂಬೈ,ದೆಹಲಿಗೆಲ್ಲಾ ಭೇಟಿ ಕೊಟ್ಟರು, ಅಲ್ಲಿಗೂ ವೈರಸ್ ಹಬ್ಬಿಸಿಬಿಟ್ಟು ಹೋದರು ಎಂದು ಟೀಕಿಸಿದ್ದಾರೆ.

ಯಾವುದೇ ಪೂರ್ವ ಯೋಜನೆಯಿಲ್ಲದೆ ದೇಶದಲ್ಲಿ ಕೋವಿಡ್-19 ಲಾಕ್ ಡೌನ್ ಹೇರಿದ ಕೇಂದ್ರ ಸರ್ಕಾರ ಇಂದು ಅದನ್ನು ಸಡಿಲಗೊಳಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ನೀಡುತ್ತಿದೆ. ಇದು ಎಂತಹ ಕ್ರಮ ಎಂದು ಕೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರವನ್ನು ಕೆಡವಿ ರಾಷ್ಟ್ರಪತಿ ಆಡಳಿತ ಹೇರುವ ಪ್ರಯತ್ನ ಮಾಡಿದವರಿಗೆ ಫಲ ಕೊಡುವುದಿಲ್ಲ. ಆರು ತಿಂಗಳ ಹಿಂದೆ ಇಲ್ಲಿ ರಾಷ್ಟ್ರಪತಿ ಆಡಳಿತ ಹೇರಿ ಅದನ್ನು ತೆಗೆದುಹಾಕಿದ್ದನ್ನು ಜನರು ನೋಡಿದ್ದಾರೆ. ಕೊರೋನಾ ವೈರಸ್ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹೇಳಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಲು ಮುಂದಾಗುವುದಾದರೆ ಬಿಜೆಪಿ ಆಡಳಿತವಿರುವ ರಾಜ್ಯಗಳು ಸೇರಿದಂತೆ ಇನ್ನೂ ಕನಿಷ್ಠ 16 ರಾಜ್ಯಗಳಲ್ಲಿ ಆ ರೀತಿ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರ ಕೂಡ ವೈರಸ್ ನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಯಾವುದೇ ಯೋಜನೆಯಿಲ್ಲದೆ ಲಾಕ್ ಡೌನ್ ಹೇರಲಾಗಿದ್ದು ಇಂದು ಅದನ್ನು ತೆಗೆಯಬೇಕಾದರೆ ರಾಜ್ಯ ಸರ್ಕಾರಗಳನ್ನು ಕೇಳುತ್ತಿವೆ. ಇದರಿಂದ ಮತ್ತಷ್ಟು ತೊಂದರೆಯಾಗುತ್ತದೆ ಎಂದು ರಾವತ್ ಸಾಮ್ನಾದಲ್ಲಿ ಬರೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.