ದೇಶ

''ಟಿಕ್ ಟಾಕ್ ಗೆ ಪ್ರತಿಯಾಗಿ ಭಾರತದ ಎಂಜಿನಿಯರ್ ವಿದ್ಯಾರ್ಥಿಗಳಿಂದ ಮಿಟ್ರನ್ ಆಪ್':50 ಲಕ್ಷ ಮಂದಿಯಿಂದ ಡೌನ್ ಲೋಡ್

ಪ್ರಧಾನಿ ನರೇಂದ್ರ ಮೋದಿ ಸೂಚಿಸಿರುವ ಮಿಟ್ರನ್ ಆಂಡ್ರಾಯ್ಡ್ ಅಪ್ಲಿಕೇಶನ್ ನ್ನು ಇಲ್ಲಿಯವರೆಗೆ 50 ಲಕ್ಷಕ್ಕೂ ಹೆಚ್ಚು ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ.

''ಟಿಕ್ ಟಾಕ್ ಗೆ ಪ್ರತಿಯಾಗಿ ಭಾರತದ ಎಂಜಿನಿಯರ್ ವಿದ್ಯಾರ್ಥಿಗಳಿಂದ ಮಿಟ್ರನ್ ಆಪ್':50 ಲಕ್ಷ ಮಂದಿಯಿಂದ ಡೌನ್ ಲೋಡ್
ಮಿಟ್ರನ್ ಆಪ್
Published On :

ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿ ಸೂಚಿಸಿರುವ ಮಿಟ್ರನ್ ಆಂಡ್ರಾಯ್ಡ್ ಅಪ್ಲಿಕೇಶನ್ ನ್ನು ಇಲ್ಲಿಯವರೆಗೆ 50 ಲಕ್ಷಕ್ಕೂ ಹೆಚ್ಚು ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ.

ಟಿಕ್ ಟಾಕ್ ಮಾದರಿಯಲ್ಲಿಯೇ ಮಿಟ್ರನ್ ಅಪ್ಲಿಕೇಶನ್ ಇದ್ದು ಐಐಟಿ ರೂರ್ಕೆಲಾದ ಐವರು ಹಳೆಯ ವಿದ್ಯಾರ್ಥಿಗಳು ಇದನ್ನು ಕಂಡುಹಿಡಿದಿದ್ದಾರೆ.

2011ನೇ ಸಾಲಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಶಿವಾಂಕ್ ಅಗರ್ವಾಲ್ ತಮ್ಮ ನಾಲ್ವರು ಸಹಪಾಠಿಗಳೊಂದಿಗೆ ಈ ಅಪ್ಲಿಕೇಶನ್ ನ್ನು ಅಭಿವೃದ್ಧಿಪಡಿಸಿದ್ದಾರೆ. ವಿದೇಶದ ಅಪ್ಲಿಕೇಶನ್ ನ್ನು ಅವಲಂಬಿಸುವ ಬದಲು  ಗೆ ಭಾರತದಲ್ಲಿಯೇ ಅಭಿವೃದ್ಧಿಪಡಿಸಿದರೆ ಉತ್ತಮವೆಂದು ಯೋಚಿಸಿ ತಯಾರಿಸಿದೆವು. ಜನರಿಂದ ಸಿಕ್ಕಿದ ಅದ್ಭುತ ಪ್ರತಿಕ್ರಿಯೆಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಟಿಕ್ ಟಾಕ್ ಚೀನಾ ಮೂಲದ್ದಾಗಿದ್ದು ಕೋವಿಡ್-19 ಸಮಯದಲ್ಲಿ ಅದರ ಬಳಕೆಯನ್ನು ನಿಷೇಧಿಸಬೇಕೆಂಬ ಮಾತು, ಅಭಿಪ್ರಾಯಗಳು ಎಲ್ಲೆಡೆ ಕೇಳಿಬರುತ್ತಿವೆ. ಇಂತಹ ಸಂದರ್ಭದಲ್ಲಿ ಮಿಟ್ರನ್ ಆಪ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದು ಕಳೆದ ಏಪ್ರಿಲ್ 11ರಂದು ಆರಂಭಗೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.