ದೇಶ

ಕೇರಳ ಸಂಸದ ಕೇಂದ್ರದ ಮಾಜಿ ಸಚಿವ ವಿರೇಂದ್ರ ಕುಮಾರ್ ವಿಧಿವಶ

ಕೇಂದ್ರದ ಮಾಜಿ ಸಚಿವ ರಾಜ್ಯಸಭೆ ಸದಸ್ಯ ವಿರೇಂದ್ರ ಕುಮಾರ್ ಗುರುವಾರ ರಾತ್ರಿ 11 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕೇರಳ ಸಂಸದ ಕೇಂದ್ರದ ಮಾಜಿ ಸಚಿವ ವಿರೇಂದ್ರ ಕುಮಾರ್ ವಿಧಿವಶ
ಎಂಪಿ ವೀರೇಂದ್ರ ಕುಮಾರ್
Published On :

ಕೋಜಿಕ್ಕೋಡ್; ಕೇಂದ್ರದ ಮಾಜಿ ಸಚಿವ ರಾಜ್ಯಸಭೆ ಸದಸ್ಯ ವಿರೇಂದ್ರ ಕುಮಾರ್ ಗುರುವಾರ ರಾತ್ರಿ 11 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದ 84 ವರ್ಷದ  ವೀರೇಂದ್ರ ಕುಮಾರ್ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು. ಲೋಕತಾಂತ್ರಿಕ ಜನತಾದಳದ ಅಧ್ಯಕ್ಷರಾಗಿದ್ದ ವಿರೇಂದ್ರ ಕುಮಾರ್ ಹಲವು ಹುದ್ದೆಗಳನ್ನು ಅಲಂಕರಿಸಿದ್ದರು, ಸುದ್ದಿ ಸಂಸ್ಥೆಗಳಾದ ಪಿಟಿಐ ಮತ್ತು ಐಎನ್ ಎಸ್ ಗಳ ಅಧ್ಯಕ್ಷರು ಮತ್ತು ಮಾತೃಭೂಮಿ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

ಕೇರಳದ ವೈನಾಡಿನ ಕಲ್ಪೇಟದ ಜೈನ ಕುಟುಂಬದಲ್ಲಿ ಜನಿಸಿದ ವಿರೇಂದ್ರ ಕುಮಾರ್ 1968 ರಲ್ಲಿ ಸಂಯುಕ್ತ ಸೋಷಲಿಸ್ಟ್ ಪಕ್ಷದ ಮೂಲಕ ರಾಜಕೀಯಕ್ಕೆ ಪಾದರ್ಪಣೆ ಮಾಡಿದ್ದರು.

1996 ಮತ್ತು 1997 ರಲ್ಲಿ ಕೋಜಿಕ್ಕೋಡ್ ಸಂಸದರಾಗಿದ್ದ ಇವರು ಕೇಂದ್ರದಲ್ಲಿ ಸಚಿವರು ಆಗಿದ್ದರು, ಉತ್ತಮ ಬರಹಗಾರರಾಗಿದ್ದ ವಿರೇಂದ್ರ ಕುಮಾರ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವ- ಪುರಸ್ಕಾರಗಳು ಸಂದಿವೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.