ಅಂಫಾನ್ ಚಂಡಮಾರುತ: ವಿಶ್ವದ ಅತಿದೊಡ್ಡ, 342 ವರ್ಷ ಹಳೆಯ ಆಲದ ಮರಕ್ಕೆ ಹಾನಿ
ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಅಬ್ಬರಿಸಿದ್ದ ಅಂಫಾನ್ ಚಂಡಮಾರುತದಿಂದಾಗಿ ಬಂಗಾಳದಲ್ಲಿದ್ದ ವಿಶ್ವದ ಅತಿದೊಡ್ಡ ಆಲದ ಮರಕ್ಕೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಕೋಲ್ಕತಾ: ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಅಬ್ಬರಿಸಿದ್ದ ಅಂಫಾನ್ ಚಂಡಮಾರುತದಿಂದಾಗಿ ಬಂಗಾಳದಲ್ಲಿದ್ದ ವಿಶ್ವದ ಅತಿದೊಡ್ಡ ಆಲದ ಮರಕ್ಕೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಪಶ್ಚಿಮ ಬಂಗಾಳದಲ್ಲಿರುವ ಹೌರಾ ಜೈವಿಕ ಉದ್ಯಾನದ ಪ್ರಮುಖ ಆಕರ್ಷಣೆಯಾಗಿದ್ದ ದೊಡ್ಡ ಆಲದಮರ ಅಂಫಾನ್ ಚಂಡಮಾರುತ ದಾಳಿಗೆ ತೀವ್ರ ಹಾನಿಗೊಳಗಾಗಿದೆ. ಉದ್ಯಾನವನದಲ್ಲಿದ್ದ ಸುಮಾರು 324 ವರ್ಷಗಳಷ್ಟು ಹಳೆಯ ಮತ್ತು ವಿಶ್ವದ ಅತಿದೊಡ್ಡ ಆಲದ ಮರ ಎಂಬ ಖ್ಯಾತಿ ಗಳಿಸಿದ್ದ ಮರಕ್ಕೆ ಅಂಫಾನ್ ಚಂಡಮಾರುತದಿಂದಾಗಿ ಹಾನಿಯಾಗಿದೆ. ಅಂತೆಯೇ ಉದ್ಯಾನವನದಲ್ಲಿದ್ದ 2 ಕಲ್ಪವೃಕ್ಷಗಳ ಪೈಕಿ ಒಲಿಯಾ ಕಸ್ಪಿಡಾಟಾ ಎಂಬ ಮರಗಳು ಬುಡಸಹಿತ ನೆಲಕ್ಕುರುಳಿವೆ. ಈ ಎರಡೂ ಮರಗಳು ಬ್ರೌನ್ ಆಲಿವ್ ಅಥವಾ ಭಾರತೀಯ ಆಲಿವ್ ಮರಗಳಾಗಿವೆ ಎಂದು ಆಚಾರ್ಯ ಜಗದೀಶ್ ಚಂದ್ರ ಬೋಸ್ ಜೈವಿಕ ಉದ್ಯಾನವನದ ಮತ್ತು ಅಲಹಾಬಾದ್ ಮೂಲದ ಬೊಟಾನಿಕಲ್ ಸರ್ವೇ ಆಫ್ ಇಂಡಿಯಾದ ವಿಜ್ಞಾನಿ ಶಿವಕುಮಾರ್ ಹೇಳಿದ್ದಾರೆ.
ಹೌರಾ ಜೈವಿಕ ಉದ್ಯಾನವನದಲ್ಲಿ ಸುಮಾರು 342 ವರ್ಷಗಳಷ್ಟು ಹಳೆಯ ವಿಶ್ವದ ಅತಿದೊಡ್ಡ ಆಲದ ಮರವಿದೆ. ಇದರ ಸುತ್ತಳತೆಯೇ ಸುಮಾರು 1.08 ಕಿಮೀ ಆಗುತ್ತದೆ. ಇದರ ಒಂದೊಂದು ರೆಂಬೆಯೂ 15 ಮೀಟರ್ ಇದೆ, 1925ರಲ್ಲಿ ಮೊದಲ ಬಾರಿಗೆ ಇದರ ರೆಂಬೆಗಳನ್ನು ತೆಗೆದುಹಾಕಲಾಗಿತ್ತು ಎಂದು ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಇದರ ರೆಂಬೆಗಳಿಗೆ ಅಂಫಾನ್ ಚಂಡಮಾರುತ ಭಾರಿ ಹಾನಿ ಮಾಡಿದೆ.ಮರದ ಬಗ್ಗೆ ಕೂಲಂಕುಷ ಅಧ್ಯಯನ ಮಾಡಿದ ಬಳಿಕವಷ್ಟೇ ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
ಇದೇ ಮರದ ಚಿತ್ರವನ್ನು ಬೊಟಾನಿಕಲ್ ಸರ್ವೇ ಆಫ್ ಇಂಡಿಯಾ ಸಂಸ್ಥೆ ತನ್ನ ಲೋಗೋವಾಗಿ ಬಳಕೆ ಮಾಡುತ್ತಿದ್ದು, ಆಲದ ಮರವನ್ನು ದೇಶದ ರಾಷ್ಟ್ರೀಯ ಮರವಾಗಿ ಸ್ವೀಕರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


