ದೇಶ

ಲಾಕ್ ಡೌನ್ ಸಮಯದಲ್ಲಿ ಆಶ್ರಯ ನೀಡಿದ್ದ ಸ್ನೇಹಿತನ ಪತ್ನಿಯೊಂದಿಗೆ ವ್ಯಕ್ತಿ ಪರಾರಿ!

ವಿಶ್ವಾದ್ಯಂತ ಲಕ್ಷಾಂತರ ಜೀವಗಳನ್ನು ಬಲಿ ಪಡೆದಿರುವ ಕೊರೋನಾ ವೈವಾಹಿಕ ಸಂಬಂಧಗಳಿಗೆ ಕುತ್ತು ತರುತ್ತಿದೆ. ಕೇರಳದಲ್ಲಿ ನಡೆದಿರುವ ಘಟನೆಯೊಂದು ಎಲ್ಲರಿಗೂ ಆಘಾತ ಉಂಟು ಮಾಡಿದೆ. ಲಾಕ್ ಡೌನ್ ವೇಳೆ ಸ್ನೇಹಿತನ ಮನೆಯಲ್ಲಿ ಅಶ್ರಯ ಪಡೆದಿದ್ದ ವ್ಯಕ್ತಿ ಸ್ನೇಹಿತನ ಪತ್ನಿಯೊಂದಿಗೆ ಪರಾರಿಯಾಗಿದ್ದಾನೆ.

ಲಾಕ್ ಡೌನ್ ಸಮಯದಲ್ಲಿ ಆಶ್ರಯ ನೀಡಿದ್ದ ಸ್ನೇಹಿತನ ಪತ್ನಿಯೊಂದಿಗೆ ವ್ಯಕ್ತಿ ಪರಾರಿ!
ಸಾಂದರ್ಭಿಕ ಚಿತ್ರ
Published On :

ಕೊಚ್ಚಿ: ವಿಶ್ವಾದ್ಯಂತ ಲಕ್ಷಾಂತರ ಜೀವಗಳನ್ನು ಬಲಿ ಪಡೆದಿರುವ ಕೊರೋನಾ ವೈವಾಹಿಕ ಸಂಬಂಧಗಳಿಗೆ ಕುತ್ತು ತರುತ್ತಿದೆ. ಕೇರಳದಲ್ಲಿ ನಡೆದಿರುವ ಘಟನೆಯೊಂದು ಎಲ್ಲರಿಗೂ ಆಘಾತ ಉಂಟು ಮಾಡಿದೆ. ಲಾಕ್ ಡೌನ್ ವೇಳೆ ಸ್ನೇಹಿತನ ಮನೆಯಲ್ಲಿ ಅಶ್ರಯ ಪಡೆದಿದ್ದ ವ್ಯಕ್ತಿ ಸ್ನೇಹಿತನ ಪತ್ನಿಯೊಂದಿಗೆ ಪರಾರಿಯಾಗಿದ್ದಾನೆ.

ಇಡುಕ್ಕಿ ಜಿಲ್ಲೆಯ 32 ವರ್ಷದ ಲೋಥಾರಿಯೋ ಎರ್ನಾಕುಲಂ ನಲ್ಲಿ ಖಾಸಗಿ ಕಂಪನಿಯೊಂದರ ಉದ್ಯೋಗಿ, ಮಾರ್ಚ ತಿಂಗಳಲ್ಲಿ ಲಾಕ್ ಡೌನ್ ಆರಂಭವಾದ ವೇಳೆ 20 ವರ್ಷದ ನಂತರ ತನ್ನ ಬಾಲ್ಯ ಸ್ನೇಹಿತನ ಸಂಪರ್ಕ ಸಿಕ್ಕಿತು.


ಸ್ನೇಹಿತನಿಗೆ ಕರೆ ಮಾಡಿ ಮಾತನಾಡಿದ ವ್ಯಕ್ತಿ ಸ್ನೇಹಿತನ ಮನೆಗೆ ಆಗಮಿಸಿದ. ಸ್ನೇಹಿತನಿಗೆ ಏಪ್ರಿಲ್ ಅಂತ್ಯದವರೆಗೂ ಊಟ ವಸತಿ ನೀಡಿದ್ದ. ಆದರೆ ಎಷ್ಚು ದಿನವಾದರೂ ಸ್ನೇಹಿತ ಮನೆ ಬಿಟ್ಟು ತೆರಳದಿದ್ದಾಗ ಆತನಿಗೆ ಸಂಶಯ ಮೂಡಿತ್ತು.  ಕಳೆದ ವಾರ ಇಬ್ಬರು ಮಕ್ಕಳ ಜೊತೆ ಸ್ನೇಹಿತ ಮತ್ತು ತನ್ನ ಪತ್ನಿ ಓಡಿಹೋಗಿರುವುದು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನೊಂದ ಪತಿಯ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು, ಕಳೆದ ವಾರ ಮಕ್ಕಳೊಂದಿಗೆ ಇಬ್ಬರು ಪೊಲೀಸರ ಮುಂದೆ ಹಾಜರಾಗಿದ್ದಾರೆ. ಪೊಲೀಸರ ಮುಂದೆ  ಹಾಜರಾದ ಮಹಿಳೆ ತಾನು ಪತಿಯ ಸ್ನೇಹಿತನ ಜೊತೆಯೇ ಇರುವುದಾಗಿ ತಿಳಿಸಿದ್ದಾಳೆ, 
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.