ಕೋವಿಡ್-19: ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 4,970 ಹೊಸ ಪ್ರಕರಣ, 1 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ
ಕಳೆದ 24 ಗಂಟೆಗಳಲ್ಲಿ 4 ಸಾವಿರದ 970 ಹೊಸ ಕೋವಿಡ್ ಪ್ರಕರಣಗಳು ದಾಖಲಾಗುವುದರೊಂದಿಗೆ ದೇಶಾದ್ಯಂತ ಮಾರಕ ಕೊರೋನಾವೈರಸ್ ಸೋಂಕಿಗೆ ತುತ್ತಾದವರ ಸಂಖ್ಯೆ 1 ಲಕ್ಷ ಗಡಿಯನ್ನು ದಾಟಿದೆ.

ನವದೆಹಲಿ:ದೇಶದಲ್ಲಿ ಮಾರಕ ಕೊರೋನಾವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಕಳೆದ 24 ಗಂಟೆಗಳಲ್ಲಿ 4 ಸಾವಿರದ 970 ಹೊಸ ಕೋವಿಡ್ ಪ್ರಕರಣಗಳು ದಾಖಲಾಗುವುದರೊಂದಿಗೆ ದೇಶಾದ್ಯಂತ ಮಾರಕ ಕೊರೋನಾವೈರಸ್ ಸೋಂಕಿಗೆ ತುತ್ತಾದವರ ಸಂಖ್ಯೆ 1 ಲಕ್ಷ ಗಡಿಯನ್ನು ದಾಟಿದೆ.
ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಮಾರಕ ಕೊರೋನಾವೈರಸ್ ಸೋಂಕಿಗೆ ತುತ್ತಾಗಿದ್ದಾರೆ.
ಮೇ.31ರವರೆಗೂ ಕೊರೋನಾವೈರಸ್ ಲಾಕ್ ಡೌನ್ ನ್ನು ಕೇಂದ್ರ ಸರ್ಕಾರ ಭಾನುವಾರ ವಿಸ್ತರಿಸಿದೆ. ಆದರೆ, ಅನೇಕ ವಿನಾಯಿತಿಗಳೊಂದಿಗೆ ಭರವಸೆ ನೀಡಿದಂತಿದೆ.
ಹೊಸ ಮಾರ್ಗೂಸೂಚಿಯಂತೆ ಸಲೂನ್, ಕ್ಷೌರದಂಗಡಿ, ಶಾಫಿಂಗ್ ಕಾಪ್ಲೆಂಕ್ಸ್ ಮತ್ತು ಮಾರ್ಕೆಟ್ ಗಳನ್ನು ತೆರೆಯಲು ನಿನ್ನೆಯಿಂದ ಅವಕಾಶ ನೀಡಲಾಗಿದೆ. ಆದಾಗ್ಯೂ, ದೇಶಿಯ ವಿಮಾನಗಳು, ಶಾಲಾ- ಕಾಲೇಜುಗಳು, ಹೋಟೆಲ್ ಗಳು ದೇಶಾದ್ಯಂತ ಮುಚ್ಚಲ್ಪಟ್ಟಿರುತ್ತವೆ.
ಕಂಟೈನ್ ಮೆಂಟ್ ವಲಯಗಳನ್ನು ಹೊರತುಪಡಿಸಿ ಸರ್ಕಾರದಿಂದ ವಲಯವಾರು ನಿರ್ಬಂಧವಿಲ್ಲ ಮತ್ತು ಆರೋಗ್ಯ ಸಚಿವಾಲಯದ ಅಂಕಿಸಂಖ್ಯೆಗಳೊಂದಿಗೆ ಕೆಂಪು, ಹಳದಿ ಮತ್ತು ಹಸಿರು ವಲಯವನ್ನಾಗಿ ರೂಪಿಸುವ ಅಧಿಕಾರವನ್ನು ಆಯಾ ರಾಜ್ಯಗಳಿಗೆ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


