ಲಾಕ್ ಡೌನ್ 4.0: ರೆಡ್ ಝೋನ್ ಗಳಲ್ಲೂ ಅತ್ಯಾವಶ್ಯಕವಲ್ಲದ ವಸ್ತುಗಳ ತಲುಪಿಸಲು ಇ-ಕಾಮರ್ಸ್ ಕಂಪನಿಗಳಿಗೆ ಅವಕಾಶ
ಕೊರೋನಾ ವೈರಸ್ ಲಾಕ್ ಡೌನ್ 4.0 ನಡುವೆಯೇ ನಿಯಮಗಳಲ್ಲಿ ಸಡಿಲಿಕೆ ತಂದಿರುವ ಕೇಂದ್ರ ಸರ್ಕಾರ ರೆಡ್ ಝೋನ್ ಗಳಲ್ಲೂ ಅತ್ಯಾವಶ್ಯಕವಲ್ಲದ ವಸ್ತುಗಳ ತಲುಪಿಸಲು ಇ-ಕಾಮರ್ಸ್ ಕಂಪನಿಗಳಿಗೆ ಅವಕಾಶ ನೀಡಿದೆ.

ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ 4.0 ನಡುವೆಯೇ ನಿಯಮಗಳಲ್ಲಿ ಸಡಿಲಿಕೆ ತಂದಿರುವ ಕೇಂದ್ರ ಸರ್ಕಾರ ರೆಡ್ ಝೋನ್ ಗಳಲ್ಲೂ ಅತ್ಯಾವಶ್ಯಕವಲ್ಲದ ವಸ್ತುಗಳ ತಲುಪಿಸಲು ಇ-ಕಾಮರ್ಸ್ ಕಂಪನಿಗಳಿಗೆ ಅವಕಾಶ ನೀಡಿದೆ.
ಕೇಂದ್ರ ಸರ್ಕಾರ ದೇಶಾದ್ಯಂತ ಹೇರಲಾಗಿರುವ ಲಾಕ್ ಡೌನ್ ಅನ್ನು ಮೇ 31ರವರೆಗೂ ವಿಸ್ತರಣೆ ಮಾಡಿದ್ದು, ಇದರ ನಡುವೆಯೇ ಹಲವು ನಿಯಮಗಳಲ್ಲಿ ಸಡಿಲಿಕೆ ತಂದಿದೆ. ಈ ಪೈಕಿ ಇ ಕಾಮರ್ಸ್ ಗಳಲ್ಲಿ ಕೆಲ ಬದಲಾವಣೆ ತಂದಿದ್ದು, ಇನ್ನು ಮುಂದೆ ಅಮೇಜಾನ್, ಫ್ಲಿಪ್ ಕಾರ್ಟ್ ನಂತಹ ಇ-ಕಾಮರ್ಸ್ ಸಂಸ್ಥೆಗಳು ರೆಡ್ ಝೋನ್ ಗಳಲ್ಲೂ ಅತ್ಯಾವಶ್ಯಕವಲ್ಲದ ವಸ್ತುಗಳ ತಲುಪಿಸಲು ಅವಕಾಶ ನೀಡಲಾಗಿದೆ.
ಈ ಹಿಂದೆ ಅಂದರೆ ಲಾಕ್ ಡೌನ್ 3.0 ಸಂದರ್ಭದಲ್ಲಿ ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಮಾತ್ರ ಅಗತ್ಯವಿಲ್ಲದ ವಸ್ತುಗಳನ್ನು ತಲುಪಿಸಲು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ಈ ಹಿಂದೆ ಅವಕಾಶವಿತ್ತು. ಈಗ ಇದರಲ್ಲಿ ಕೆಂಪು ವಲಯಗಳಿಗೂ ಅವಕಾಶ ನೀಡಲಾಗಿದೆ. ಇನ್ನು ಕಂಟೈನ್ ಮೆಂಟ್ ಝೋನ್ ಗಳಲ್ಲಿ ಆನ್‌ಲೈನ್ ಮಾರಾಟದ ಮೇಲಿನ ನಿರ್ಬಂಧ ಮುಂದುವರೆದಿದ್ದು, ಅಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿದೆ.
ಅಂತಿಮ ನಿರ್ಧಾರ ರಾಜ್ಯ ಸರ್ಕಾರಗಳದ್ದೇ..!
ಇನ್ನು ಕೇಂದ್ರ ಸರ್ಕಾರ ಇ-ಕಾಮರ್ಸ್ ಗಳಿಗೆ ರೆಡ್ ಝೋನ್ ಗಳಲ್ಲಿ ಅತ್ಯಾವಶ್ಯಕವಲ್ಲದ ವಸ್ತುಗಳನ್ನು ಸರಬರಾಜು ಮಾಡಲು ಅವಕಾಶ ನೀಡಿದೆಯಾದರೂ, ಅಂತಿಮ ನಿರ್ಧಾರ ಕೈಗೊಳ್ಳುವ ಅವಕಾಶವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. ರಾಜ್ಯ ಸರ್ಕಾರಗಳು ಅನುಮತಿಸಿದರೆ ಮಾತ್ರ ಈ ಸೇವೆ ರೆಡ್ ಝೋನ್ ಗಳಲ್ಲಿ ಲಭ್ಯವಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


