ಮಧ್ಯಪ್ರದೇಶ: ದಲಿತರಿಂದ ಥಳಿತ, ಮೂತ್ರ ಸೇವನೆಗೆ ಒತ್ತಾಯ: ಆತ್ಮಹತ್ಯೆಗೆ ಶರಣಾದ ಯುವಕ
ಕ್ಷುಲ್ಲಕ ಕಾರಣಕ್ಕಾಗಿ ಯುವಕನ ಮೇಲೆ ದಲಿತ ಸಮುದಾಯದ ಮೂವರು ಹಲ್ಲೆ ನಡೆಸಿದ್ದು ಮೂತ್ರ ಸೇವನೆ ಒತ್ತಾಯಿಸಿದ ಪರಿಣಾಮ ಹಲ್ಲೆಗೊಳಗಾಗಿದ್ದ ಯುವಕ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ.

ಭೋಪಾಲ್: ಕ್ಷುಲ್ಲಕ ಕಾರಣಕ್ಕಾಗಿ ಯುವಕನ ಮೇಲೆ ದಲಿತ ಸಮುದಾಯದ ಮೂವರು ಹಲ್ಲೆ ನಡೆಸಿದ್ದು ಮೂತ್ರ ಸೇವನೆ ಒತ್ತಾಯಿಸಿದ ಪರಿಣಾಮ ಹಲ್ಲೆಗೊಳಗಾಗಿದ್ದ ಯುವಕ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ.
ಭೋಪಾಲ್ ನಿಂದ 380 ಕಿ,.ಮೀ ದೂರದಲ್ಲಿರುವ ಸರೋಜ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ವಿಕಾಸ್ ಶರ್ಮ ಎಂಬ ಯುವಕ ತನ್ನ ಮನೆಯಲ್ಲೇ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಆತ್ಮಹತ್ಯೆಗೂ ಮುನ್ನ ಬರೆದಿರುವ ಪತ್ರ ಹಾಗೂ ವಿಡಿಯೋ ದೊರೆತಿದೆ. ವಿಕಾಸ್ ಧಾರ್ಮಿಕ ಪ್ರಕ್ರಿಯೆಗಳಿಗಾಗಿ ನೀರು ತರಲು ಹೋಗಿದ್ದಾಗ ದಲಿತರ ಪಾತ್ರೆಗಳ ಮೇಲೆ ನೀರು ಬಿದ್ದಿದ್ದು ಇದೇ ವಾಗ್ವಾದಕ್ಕೆ ಕಾರಣವಾಗಿದೆ.
ಘಟನೆಯಿಂದ ಆಕ್ರೋಶಗೊಂಡ ದಲಿತ ಯುವಕರು ವಿಕಾಸ್ ಶರ್ಮಾನನ್ನು ಥಳಿಸಿ ಧಾರ್ಮಿಕ ಕ್ರಿಯೆಗಳಿಗಾಗಿ ಇಟ್ಟುಕೊಂಡಿದ್ದ ಲೋಟದಲ್ಲಿ ಮೂತ್ರ ವಿಸರ್ಜನೆ ಮಾಡಿ ಅದನ್ನು ಸೇವಿಸುವಂತೆ ಒತ್ತಾಯಿಸಿದ್ದಾರೆ. ಇದರಿಂದ ಮನನೊಂದ ವಿಕಾಸ್ ಶರ್ಮಾ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆರೋಪಿಗಳನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ, ಐಪಿಸಿ 306, 323 ಸೆಕ್ಷನ್ ಅಡಿಯಲ್ಲಿ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಅಡಿ ಪ್ರಕರಣ ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


