ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ವರ್ಷದಲ್ಲಿ 15 ದಿನ ವರ್ಕ್ ಫ್ರಂ ಹೋಂ?
ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಕುಳಿತು ಕೆಲಸ ಮಾಡುವಂತಾಗಿದೆ. ಇನ್ನು ಕೊರೋನಾ ನಂತರವೂ ಕೇಂದ್ರ ಸರ್ಕಾರ ತನ್ನ ನೌಕರಿಗಾಗಿ ವರ್ಕ್ ಫ್ರಂ ಹೋಂ ಸೌಲಭ್ಯ ನೀಡುವ ಬಗ್ಗೆ ಕರಡು ರೂಪಿಸಿದೆ.

ನವದೆಹಲಿ: ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಕುಳಿತು ಕೆಲಸ ಮಾಡುವಂತಾಗಿದೆ. ಇನ್ನು ಕೊರೋನಾ ನಂತರವೂ ಕೇಂದ್ರ ಸರ್ಕಾರ ತನ್ನ ನೌಕರಿಗಾಗಿ ವರ್ಕ್ ಫ್ರಂ ಹೋಂ ಸೌಲಭ್ಯ ನೀಡುವ ಬಗ್ಗೆ ಕರಡು ರೂಪಿಸಿದೆ.
ಮುಂಬರುವ ದಿನಗಳಲ್ಲಿ ಕಚೇರಿಯಲ್ಲಿ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಈ ವ್ಯವಸ್ಥೆಯನ್ನ ತರಲು ಚಿಂತಿಸಲಾಗಿದ್ದು ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ದೂರುಗಳ ಇಲಾಖೆ(ಡಿಎಆರ್ಪಿಜಿ) ಈ ಬಗ್ಗೆ ಕರಡು ರೂಪಿಸಿದೆ.
ಇನ್ನು ಮನೆಯಲ್ಲಿಯೇ ಕುಳಿತು ಸರ್ಕಾರಿ ಕಡತಗಳನ್ನು ಬಳಸುವಾಗ ಅಲ್ಲಿ ಮಾಹಿತಿಯ ಸುರಕ್ಷೆ ಮತ್ತು ಗೌಪ್ಯತೆ ಬಗ್ಗೆ ಗಮನಹರಿಸಬೇಕಿದೆ. ಲಾಕ್ ಡೌನ್ ಮುಗಿದ ನಂತರವೂ ಇದೇ ರೀತಿಯ ವ್ಯವಸ್ಥೆ ಮುಂದುವರಿಸಿ ಹೋಗುವ ಅಗತ್ಯವಿದೆ ಎಂದು ಡಿಎಆರ್ಪಿಜಿ ಹೇಳಿದೆ.
ಈ ಕರಡುಗಳಿಗೆ ಮೇ 21ರೊಳಗೆ ಪ್ರತಿಕ್ರಿಯಿಸುವಂತೆ ಸಚಿವಾಲಯಗಳಿಗೆ ಮತ್ತು ಇಲಾಖೆಗಳಿಗೆ ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


