ದೇಶ

ಸರ್ಪ್ರೈಸ್ ಕೊಡಲು ಭಾವಿ ಪತ್ನಿಯ ಮನೆಗೆ ಹೋದ: ಲಾಕ್ ಡೌನ್ ಕಾರಣ ಅಲ್ಲಿಯೇ ಲಾಕ್ ಆದ!

ಜನ್ಮದಿನದಂದು ಭಾವಿ ಪತ್ನಿಗೆ ಸರ್ ಪ್ರೈಸ್ ನೀಡಲು ಯತ್ನಿಸಿದ ಕೇರಳದ ಯುವಕನೊಬ್ಬ ಕೊರೋನಾ ಲಾಕ್ ಡೌನ್ ಕಾರಣ ಮಂಗಳೂರಿನ ಆಕೆಯ ಮನೆಯಲ್ಲೇ ಒಂದು ತಿಂಗಳು ಲಾಕ್ ಆಗಬೇಕಾದ ಪ್ರಹಸನ ನಡೆದಿದೆ.

ಸರ್ಪ್ರೈಸ್ ಕೊಡಲು ಭಾವಿ ಪತ್ನಿಯ ಮನೆಗೆ ಹೋದ: ಲಾಕ್ ಡೌನ್ ಕಾರಣ ಅಲ್ಲಿಯೇ ಲಾಕ್ ಆದ!
ಸಾಂದರ್ಭಿಕ ಚಿತ್ರ
Published On :

ಕೊಚ್ಚಿ: ಜನ್ಮದಿನದಂದು ಭಾವಿ ಪತ್ನಿಗೆ ಸರ್ ಪ್ರೈಸ್ ನೀಡಲು ಯತ್ನಿಸಿದ ಕೇರಳದ ಯುವಕನೊಬ್ಬ ಕೊರೋನಾ ಲಾಕ್ ಡೌನ್ ಕಾರಣ ಮಂಗಳೂರಿನ ಆಕೆಯ ಮನೆಯಲ್ಲೇ ಒಂದು ತಿಂಗಳು ಲಾಕ್ ಆಗಬೇಕಾದ ಪ್ರಹಸನ ನಡೆದಿದೆ.

ಅವರ ಮದುವೆ ಕಳೆದ ಬುಧವಾರ ನಡೆಯಬೇಕಿತ್ತು, ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲಾಯಿತು. ಕಚೇರಿ ಕೆಲಸದ ನಿಮಿತ್ತ ಎರ್ನಾಕುಲಂ ನ ತನ್ನ ಕಚೇರಿಯಿಂದ ಮಂಗಳೂರಿಗೆ ಹೋಗುವುದಾಗಿ ತಿರುವನಂತಪುರಂ ಮೂಲದ ಪೋಷಕರಿಗೆ ತಿಳಿಸಿದ  ಯುವಕ, ಭಾವಿ ಪತ್ನಿಯ ಮನೆಗೆ ತೆರೆಳಿದ್ದಾನೆ. ಭಾವಿ ಪತ್ನಿ ಮತ್ತು ಆಕೆಯ ಪೋಷಕರೊಂದಿಗೆ ಸಮಯವನ್ನು ಆನಂದಿಸುತ್ತಿರುವಾಗ, ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂ ಘೋಷಿಸಿದರು. ಅದರ ನಂತರ ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಗೆ ತರಲಾಯಿತು. ಎಲ್ಲಾ ಸಾರ್ವಜನಿಕ  ಸಾರಿಗೆಯನ್ನು ನಿಷೇಧಿಸಿದ್ದರಿಂದ ಅವನಿಗೆ ಮನೆಗೆ ಮರಳಲು ಯಾವುದೇ ಆಯ್ಕೆ ಇರಲಿಲ್ಲ.

ಲಾಕ್‌ ಡೌನ್ ನಂತರ ಆತ ಮರಳಲು ಯೋಜಿಸುತ್ತಿದ್ದಂತೆ, ಸರ್ಕಾರವು ಲಾಕ್‌ ಡೌನ್ ಅವಧಿಯನ್ನು ವಿಸ್ತರಿಸಿತು. ಬೇರೆ ದಾರಿಯಿಲ್ಲದೆ, ಯುವಕ ಅಲ್ಲಿಯೇ ಉಳಿಯಬೇಕಾಯಿತು. ಏತನ್ಮಧ್ಯೆ, ಮಂಗಳೂರಿನಲ್ಲಿ ನಡೆದ ಘಟನೆಯ ಬಗ್ಗೆ ಅವರ ಪೋಷಕರಿಗೆ ತಿಳಿದುಬಂದಿದೆ. ಯುವಕ ಆನ್  ಲೈನ್ ಮೂಲಕ ಕೆಲಸ ನಿರ್ವಹಿಸುತ್ತಿದ್ದು, ಕೃಷಿ ಕೆಲಸದಲ್ಲಿಯೂ ಭಾವಿ ಮಾವನ ಮನೆಯವರಿಗೆ ಕೈ ಜೋಡಿಸಿದ್ದಾರೆ. ಇದೀಗ ಕೇರಳಕ್ಕೆ ಮರಳಲು ಆತನ ಹೆಸರನ್ನು ನೋರ್ಕಾ ವೆಬ್‌ಸೈಟ್‌ನಲ್ಲಿ ನೋಂದಾಯಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.