ದೇಶದಲ್ಲಿ ಒಂದೇ ದಿನದಲ್ಲಿ 3900 ಕೊರೋನಾ ಸೋಂಕು ಪ್ರಕರಣ, 195 ಜನರ ಸಾವು-ಕೇಂದ್ರ ಸರ್ಕಾರ
ದೇಶದಲ್ಲಿ ಇಂದು ಒಂದೇ ದಿನದಲ್ಲಿ ಅತಿ ಹೆಚ್ಚು ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 46433ಕ್ಕೇರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ

ನವದೆಹಲಿ: ದೇಶದಲ್ಲಿ ಇಂದು ಒಂದೇ ದಿನದಲ್ಲಿ ಅತಿ ಹೆಚ್ಚು ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 46, 433ಕ್ಕೇರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ
ಕಳೆದ 24 ಗಂಟೆಗಳಲ್ಲಿ 3900 ಪ್ರಕರಣಗಳು ದೃಢಪಟ್ಟಿವೆ. ಇದು ಇಲ್ಲಿಯವರೆಗಿನ ಒಂದು ದಿನದ ಪ್ರಕರಣಗಳಾಗಿವೆ. 195 ಜನರು ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 1568ಕ್ಕೇರಿಕೆಯಾಗಿವೆ
ಈ ನಡುವೆ, 12726 ಜನರು ಚೇತರಿಕೆ ಕಂಡಿದ್ದು, ಚೇತರಿಕೆ ದರ ಶೇ, 27.41 ರಷ್ಟಿದೆ. ದೇಶದಲ್ಲಿ ಸದ್ಯ 32,138 ಸಕ್ರಿಯ ಪ್ರಕರಣಗಳಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ
ಮಹಾರಾಷ್ಟ್ರ ಅತಿ ಹೆಚ್ಚು ಪೀಡಿತ ಪ್ರದೇಶವಾಗಿದ್ದು 14541 ಸೋಂಕಿತರು 283 ಸಾವುಗಳನ್ನು ವರದಿ ಮಾಡಿದೆ. ಗುಜರಾತ್ 5804 ಪ್ರಕರಣಗಳು 319 ಸಾವುಗಳಿಂದ ಎರಡನೇ ಸ್ಥಾನದಲ್ಲಿದೆ. ದೆಹಲಿ 4898 ಪ್ರಕರಣಗಳು, 64 ಸಾವುಗಳಿಂದ ಮೂರನೇ ಸ್ಥಾನದಲ್ಲಿವೆ.
ಕೆಲ ರಾಜ್ಯಗಳನ್ನು ಮನವೊಲಿಸಿದ ನಂತರ ಸೋಂಕಿತರ ಸಂಖ್ಯೆ ಹಾಗೂ ನಿರ್ವಹಣೆ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿವೆ. ದೇಶದಲ್ಲಿ ಕೋವಿಡ್ -19 ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಲವ್ ಅಗರ್ ವಾಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಸದ್ಯ ಮಟ್ಟಿಗೆ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಸಮರ್ಥವಾಗಿ ನಿಭಾಯಿಸಲಾಗುತ್ತಿದೆ. ಆದರೆ, ಲಾಕ್ ಡೌನ್ ಸಡಿಲಿಕೆಯು ಕ್ಷೇತ್ರದ ಮಟ್ಟದಲ್ಲಿ ಪರಿಣಾಮ ಬೀರಬಹುದು ಎಂದರು.
ಕೋವಿಡ್-19 ಸೋಂಕು ತಲುಪಿರುವ ಪ್ರತಿಯೊಬ್ಬರನ್ನು ಪತ್ತೆ ಹಚ್ಚಲಾಗುತ್ತಿದೆ. ಕಂಟೈನ್ ಮೆಂಟ್ ವಲಯಗಳಲ್ಲಿ ತೀವ್ರ ಉಸಿರಾಟದಂತಹ ಸಾರಿ ಹಾಗೂ ಸಾಮಾನ್ಯ ಜ್ವರ( ಐಎಲ್ಐ ) ಸಮಸ್ಯೆಯಿಂದ ಬಳಲುತ್ತಿರುವವರ ಬಗ್ಗೆ ನಿಗಾ ವಹಿಸಿ ಮಾಹಿತಿ ಸಂಗ್ರಹಿಸುವ ಮೂಲಕ ಮುಂದಿನ ಕ್ರಮದ ಸಲಹೆ ನೀಡಲಾಗುತ್ತಿದೆ ಎಂದು ಲವ್ ಅಗರ್ ವಾಲ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


